Pic Credit: pinterest
By Preeti Bhat
04 July 2025
ಪ್ರೀತಿಯ ಒಂದು ಅಪ್ಪುಗೆ ನಿಮ್ಮನ್ನು ಮಾನಸಿಕವಾಗಿ ಸದೃಢಗೊಳಿಸುವುದರ ಜತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ತುಂಬಾ ದಿನಗಳ ನಂತರ ಸಿಗುವ ಸ್ನೇಹಿತರು, ಅಥವಾ ದುಃಖವಾಗುವಾಗ ಸಂತೈಸುವವರು, ಹೀಗೆ ನಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳುತ್ತೇವೆ, ಅಪ್ಪುಗೆ ಒಂದು ಹಿತವಾದ ಭಾವನೆ.
ಅಧ್ಯಯನದ ಪ್ರಕಾರ, ನೀವು ನಿಮ್ಮ ಪ್ರೀತಿ ಪಾತ್ರರನ್ನು ಕೇವಲ 20 ಸೆಕೆಂಡುಗಳ ಕಾಲ ತಬ್ಬಿಕೊಳ್ಳಿ, ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾದಂತೆ ನಿಮಗೆ ಭಾಸವಾಗುತ್ತದೆ.
ಅಪ್ಪುಗೆಯಿಂದ ದೇಹ ಡೋಪಮೈನ್ ಎಂಬ ಹಾರ್ಮೋನ್ ಬಿಡುಗಡೆ ಮಾಡಿದಾಗ, ಸಂತೋಷ ಮತ್ತು ವಿಶ್ರಾಂತಿಯಂತಹ ಅನೇಕ ಸಕಾರಾತ್ಮಕ ಭಾವನೆಗಳು ಉದ್ಭವಿಸುತ್ತವೆ.
ತಬ್ಬಿಕೊಳ್ಳುವುದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕ್ರಮೇಣ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಸಂಶೋಧನೆ ತೋರಿಸುತ್ತದೆ.
ಅಧ್ಯಯನದ ಪ್ರಕಾರ, 20 ಸೆಕೆಂಡುಗಳ ಕಾಲ ತಬ್ಬಿಕೊಳ್ಳುವುದು ನಿಮ್ಮ ರಕ್ತದೊತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ನಿಮ್ಮ ಆಪ್ತರನ್ನು ತಬ್ಬಿಕೊಳ್ಳುವುದರಿಂದ ನಿಮ್ಮ ಭಯವೂ ಕಡಿಮೆಯಾಗುತ್ತದೆ. ತಬ್ಬಿಕೊಳ್ಳುವುದು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹ ಒಳ್ಳೆಯದು.
ನಿಮಗೆ ಸಾಕಷ್ಟು ಆತ್ಮವಿಶ್ವಾಸದ ಅಗತ್ಯವಿರುವಾಗ ಮತ್ತು ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತಿರುವ ಸಮಯದಲ್ಲಿ, ನೀವು ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳಬೇಕು.