Pic Credit: pinterest
By Malashree anchan
26 August 2025
ಬೆಳಗ್ಗೆ ಎದ್ದ ತಕ್ಷಣ 30 ನಿಮಿಷಗಳ ಕಾಲ ನಡೆಯುವುದರಿಂದ ನಿಮ್ಮ ಶಕ್ತಿ ಹೆಚ್ಚಾಗುತ್ತದೆ ಮತ್ತು ನೀವು ದಿನವಿಡೀ ಸಕ್ರಿಯವಾಗಿರಲು ಅವಕಾಶ ಸಿಗುತ್ತದೆ.
ವಾಕಿಂಗ್ ಮಾಡುವುದರಿಂದ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಹೌದು ಬೆಳಗ್ಗಿನ ವಾಕಿಂಗ್ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಒತ್ತಡವನ್ನು ಹೋಗಲಾಡಿಸುತ್ತದೆ.
ವಾಕಿಂಗ್ ಒಂದು ಸರಳ ವ್ಯಾಯಾಮವಾಗಿದ್ದು, ಬೆಳಗ್ಗೆ ಎದ್ದ ತಕ್ಷಣ 30 ನಿಮಿಷಗಳ ಕಾಲ ನಡೆಯುವುದರಿಂದ 150 ಕ್ಯಾಲೊರಿಗಳು ಕರಗುತ್ತವೆ. ಇದು ತೂಕ ಇಳಿಸಿಕೊಳ್ಳಲು ಸಹಕಾರಿ.
ಪ್ರತಿದಿನ ಬೆಳಗ್ಗೆ 30 ನಿಮಿಷಗಳ ಕಾಲ ನಡೆಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ಬೆಳಗ್ಗೆ ನಡೆಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಮತ್ತು ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ.
ಬೆಳಗ್ಗೆ 30 ನಿಮಿಷಗಳ ನಡೆಯುವುದರಿಂದ ಅಥವಾ ವಾಕಿಂಗ್ ಮಾಡುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ ಮತ್ತು ಇದು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
ಬೆಳಗ್ಗಿನ ಹೊತ್ತು ವಾಕಿಂಗ್ ಮಾಡುವುದರಿಂದ ಮೆದುಳಿಗೆ ಉತ್ತಮ ಆಮ್ಲಜನಕ ಪೂರೈಕೆಯಾಗುತ್ತದೆ. ಇದು ನಿಮ್ಮ ಸ್ಮರಣೆಯನ್ನು ಸಹ ಬಲಪಡಿಸುತ್ತದೆ.
ವಾಕಿಂಗ್ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಜೊತೆಗೆ ಇದು ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ.