ತಂದೆ ತನ್ನ ಮಕ್ಕಳಿಗೆ ಕಲಿಸಿಕೊಡಲೇಬೇಕಾದ ಪಾಠಗಳಿವು

Pic Credit: gettyimages

By Malashree Anchan

05 May 2025

ಇತರರಿಗೆ ಗೌರವ 

ಮೊದಲಿಗೆ ಇತರರಿಗೆ ಗೌರವ ಕೊಡುವುದನ್ನು ತಂದೆಯಾದವನು ಮಕ್ಕಳಿಗೆ ಕಲಿಸಿಕೊಡಬೇಕು.

 ಕುಟುಂಬದ ಮೌಲ್ಯ

ಪ್ರತಿಯೊಬ್ಬ ತಂದೆಯೂ ತನ್ನ ಮಕ್ಕಳಿಗೆ ತಂದೆ-ತಾಯಿ ಹಾಗೂ ಕುಟುಂಬದ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಕಲಿಸಿಕೊಡಬೇಕು.

ಶ್ರಮಕ್ಕೆ ಪ್ರತಿಫಲ ಸಿಗುತ್ತೆ

ಕಷ್ಟಪಟ್ಟರೆ ಮಾತ್ರ ಶ್ರಮಕ್ಕೆ ಪ್ರತಿಫಲ ಸಿಗುತ್ತೆ, ಯಶಸ್ಸಿಗೆ ಯಾವುದೇ ಅಡ್ಡ ದಾರಿಯಿಲ್ಲ ಎಂಬುದನ್ನು ಕಲಿಸಿಕೊಡಬೇಕು.

ಆತ್ಮವಿಶ್ವಾಸ

ಭಯ, ಸವಾಲುಗಳನ್ನು ಎದುರಿಸಿ ನಿಲ್ಲುವುದು ಮತ್ತು ಆತ್ಮವಿಶ್ವಾಸವನ್ನು ಹೇಗೆ ಬೆಳೆಸಿಕೊಳ್ಳುವುದು ಎಂಬುದನ್ನು ಕಲಿಸಬೇಕು.

ಜವಾಬ್ದಾರಿಯ ಪಾಠ

ತಂದೆಯಾದವನು ತನ್ನ ಮಕ್ಕಳಿಗೆ ಜವಾಬ್ದಾರಿಯ ಪಾಠವನ್ನು ಹಾಗೂ ಜೀವನ ಹೇಗೆ ಸಾಗಿಸಬೇಕು ಎಂಬ ಬಗ್ಗೆ ಕಲಿಸಿಕೊಡಬೇಕು.

ಮಹಿಳೆಯರಿಗೆ ಗೌರವ 

ವಿಶೇಷವಾಗಿ ತಂದೆಯಾದವನು ತನ್ನ ಮಗನಿಗೆ ಮಹಿಳೆಯರಿಗೆ ಗೌರವ ಕೊಡುವುದರ ಬಗ್ಗೆ ಕಲಿಸಿಕೊಡಲೇಬೇಕು.

 ಪ್ರಾಮಾಣಿಕತೆ

ಜೀವನದಲ್ಲಿ ಪ್ರಾಮಾಣಿಕವಾಗಿರುವುದು ಎಷ್ಟು ಮುಖ್ಯ ಎಂಬುದನ್ನು ಮಕ್ಕಳಿಗೆ ತಂದೆ ಕಲಿಸಿಕೊಡಬೇಕು.

ಹಣಕಾಸಿನ ನಿರ್ವಹಣೆ

ಹಣಕಾಸಿನ ನಿರ್ವಹಣೆಯ ಬಗ್ಗೆಯೂ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಲಿಸಿಕೊಡಬೇಕು.