17 Nov 2025

Pic credit - Pintrest

Author: Akshay Pallamjalu 

ಭಾರತದಲ್ಲಿರುವ ರೊಮ್ಯಾಂಟಿಕ್‌ ಹನಿಮೂನ್‌ ತಾಣಗಳಿವು

ಜಮ್ಮು ಕಾಶ್ಮೀರದಲ್ಲಿರುವ ವಿಶ್ವವಿಖ್ಯಾತ ಗುಲ್ಮಾರ್ಗ್‌ ಅತ್ಯದ್ಭುತ ಪ್ರವಾಸಿ ತಾಣವಾಗಿದ್ದು, ಇದು ಹನಿಮೂನ್‌ಗಾಗಿ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ.

ಗುಲ್ಮಾರ್ಗ್‌

Pic credit - Pintrest

ಔಲಿ ಉತ್ತರಾಖಂಡದ ಚಮೋಲಿ ಜಿಲ್ಲೆಯ ಒಂದು ಸುಂದರ ಗಿರಿಧಾಮವಾಗಿದ್ದು, ಇದು ಮಧುಚಂದ್ರಕ್ಕೆ ಹೇಳಿ ಮಾಡಿಸಿದ ಈ ಸ್ಥಳ ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲೆಂಡ್‌ನಂತೆ ಕಾಣುತ್ತದೆ.

ಔಲಿ

Pic credit - Pintrest

ಹಿಮಾಚಲ ಪ್ರದೇಶದಲ್ಲಿರುವ ಮನಾಲಿ ಹನಿಮೂನ್‌ ಹೋಗೋ ನವದಂಪತಿಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಈ ತಾಣ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

ಮನಾಲಿ

Pic credit - Pintrest

ತನ್ನ ನೈಸರ್ಗಿಕ ಪ್ರಕೃತಿ ಸೌಂದರ್ಯದಿಂದಲೇ ಪ್ರವಾಸಿಗರನ್ನು ಆಕರ್ಷಿಸುವ ಡಾರ್ಜಿಲಿಂಗ್‌ ಹನಿಮೂನ್‌ ಹೋಗೋರಿಗೆ ಬೆಸ್ಟ್‌ ಪ್ಲೇಸ್‌ ಅಂತಾನೇ ಹೇಳಬಹುದು.

ಡಾರ್ಜಿಲಿಂಗ್‌

Pic credit - Pintrest

ಹಿಮಾಲಯದ ಮಡಿಲಿನಲ್ಲಿ ನೆಲೆಗೊಂಡಿರುವ ಸಿಕ್ಕಿಂ ರಾಜ್ಯ ಅತೀ ಸುಂದರ ಸ್ಥಳಗಳನ್ನು ತನ್ನ ಒಡಲಿನಲ್ಲಿ ಅಡಗಿಸಿಕೊಂಡಿದೆ. ಈ ಸ್ಥಳಗಳು ಹನಿಮೂನ್‌ಗೆ ಹೋಗಲು ಹೇಳಿ ಮಾಡಿಸಿದಂತಿವೆ.

ಸಿಕ್ಕಿಂ

Pic credit - Pintrest

ನಿಸರ್ಗ ಪ್ರೇಮಿಗಳಿಗೆ ಹನಿಮೂನ್‌ಗೆ ಹೋಗಲು ಸೂಕ್ತವಾದ ಸ್ಥಳವೆಂದರೆ ಅದು ಭಾರತದ ಸ್ಕಾಟ್ಲ್ಯಾಂಡ್‌ ಸಿಟಿ ಎಂದು ಕರೆಯಲ್ಪಡುವ ಕೂರ್ಗ್‌.

ಕೂರ್ಗ್‌

Pic credit - Pintrest

ಸಮೃದ್ಧವಾಗಿ ಹರಡಿರುವ ಹಸಿರು ಟೀ ತೋಟಗಳು, ರೋಮ್ಯಾಂಟಿಕ್‌ ಹಿಲ್‌ಸ್ಟೇಷನ್‌ಗಳು ಕೇರಳದ ಮುನ್ನಾರ್‌ನಲ್ಲಿದ್ದು, ಹನಿಮೂನ್‌ಗಾಗಿ ಹೇಳಿ ಮಾಡಿಸಿದಂತಹ ಸ್ಥಳ ಇದಾಗಿದೆ.

ಮುನ್ನಾರ್‌

Pic credit - Pintrest

ಉತ್ತರಾಖಂಡ ರಾಜ್ಯದಲ್ಲಿರುವ ನೈನಿತಾಲ್‌ ಸುಂದರ ಮತ್ತು ರೋಮಾಂಚಕವಾದ ಸ್ಥಳವಾಗಿದ್ದು, ನವದಂಪತಿಗಳು ಇಲ್ಲಿಗೂ ಹನಿಮೂನ್‌ ಹೋಗಬಹುದು.

ನೈನಿತಾಲ್‌

Pic credit - Pintrest