ಬೆಳಗ್ಗೆ ಎದ್ದ ತಕ್ಷಣ ಹೀಗೆ ಮಾಡಿ ನೋಡಿ, ಜೀವನದಲ್ಲಿ ಬದಲಾವಣೆ ಆಗೋದು ಖಂಡಿತ

Pic Credit: pinterest

By Malashree anchan

19 August 2025 

ಮಂತ್ರವನ್ನು ಪಠಿಸಿ

ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಅಂಗೈಯನ್ನು ನೋಡುತ್ತಾ ‘ಕರಾಗ್ರೇ ವಾಸತೇ ಲಕ್ಷ್ಮಿ ಮಂತ್ರ ಪಠಿಸಿ. ಇದರಿಂದ  ನಿಮ್ಮ ದಿನ ಸಕಾರಾತ್ಮಕತೆಯೊಂದಿಗೆ ಆರಂಭವಾಗುತ್ತದೆ.

ದೇವರ ಪೂಜೆ ಮಾಡಿ

ಬೆಳಗ್ಗೆ ಬೇಗನೆ ಎದ್ದು, ಫ್ರೆಶ್‌ ಆಗಿ ದೇವರನ್ನು ಪೂಜಿಸಿ. ಹೀಗೆ ಬೆಳಗ್ಗೆ ಬೇಗ ಏಳುವುದರಿಂದ ದಿನವಿಡೀ ತಾಜಾತನದಿಂದ ಕೂಡಿರುತ್ತದೆ. ಅದೇ ರೀತಿ ನಿಮ್ಮ ಮಾನಸಿಕ ಶಾಂತಿ ವೃದ್ಧಿಸುತ್ತದೆ.

ಧ್ಯಾನ ಮಾಡಿ

ಬೆಳಗ್ಗೆ ಎದ್ದ ನಂತರ 15 ರಿಂದ 20 ನಿಮಿಷಗಳ ಕಾಲ ಧ್ಯಾನ ಮಾಡಿ. ಇದರಿಂದ ನಿಮ್ಮ ಒತ್ತಡ ನಿವಾರಣೆಯಾಗುತ್ತದೆ, ಏಕಾಗ್ರತೆ ಹೆಚ್ಚಾಗುತ್ತದೆ ಮಾನಸಿಕ ಶಾಂತಿ ಲಭಿಸುತ್ತದೆ.

ನೀರು ಕುಡಿಯಿರಿ

ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ದೇಹದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಮೆದುಳನ್ನು ಸಕ್ರಿಯಗೊಳಿಸುತ್ತದೆ.

ವ್ಯಾಯಾಮ ಮಾಡಿ

ಬೆಳಗ್ಗೆ ಎದ್ದ ಬಳಿಕ ಸ್ವಲ್ಪ ಹೊತ್ತು ಯೋಗ ಅಥವಾ ವ್ಯಾಯಾಮ ಮಾಡುವುದರಿಂದ ಇದು ನಿಮ್ಮ ಆಲಸ್ಯ ದೂರವಾಗಿ ನೀವು ದಿನವಿಡೀ ಉತ್ಸಾಹಭರಿತರಾಗಿ ಇರುವಂತೆ ಮಾಡುತ್ತದೆ.

ಸೂರ್ಯ ನಮಸ್ಕಾರ ಮಾಡಿ

ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಸೂರ್ಯ ನಮಸ್ಕಾರ ಮಾಡಿ. ಈ ಅಭ್ಯಾಸ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.

ಸಕಾರಾತ್ಮಕವಾಗಿರಿ

ಬೆಳಿಗ್ಗೆ ಎದ್ದ ತಕ್ಷಣ ಯಾವುದೇ ರೀತಿಯ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರಲು ಬಿಡಬೇಡಿ. ದಿನವನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಪ್ರಾರಂಭಿಸಲು ಪ್ರಯತ್ನಿಸಿ.

ತಾಜಾ ಗಾಳಿಯ ಪ್ರಸರಣ

ಬೆಳಿಗ್ಗೆ ಎದ್ದ ತಕ್ಷಣ,  ಮನೆಯ ಕಿಟಕಿ, ಬಾಗಿಲುಗಳನ್ನು ತೆರೆಯಿರಿ. ಇದರಿಂದ ತಾಜಾ ಗಾಳಿ, ಸೂರ್ಯನ ಬೆಳಕು ಮನೆಗೆ ಪ್ರವೇಶಿಸುತ್ತದೆ,  ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ.