ಯುವಕರು ಈ ವಿಷಯಗಳ ಬಗ್ಗೆ ತಿಳಿದಿರಲೇಬೇಕು
Tv9 Kannada Logo

ಯುವಕರು ಈ ವಿಷಯಗಳ ಬಗ್ಗೆ ತಿಳಿದಿರಲೇಬೇಕು

Pic Credit: pinterest

By Malashree anchan

10 July 2025

ಉತ್ತಮ ಆಹಾರ ಸೇವನೆ, ವ್ಯಾಯಾಮ, ಸಾಕಷ್ಟು ನೀರು ಕುಡಿಯುವುದು ಮತ್ತು ಗುಣಮಟ್ಟದ ನಿದ್ರೆ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಗಮನ ನೀಡಬೇಕು.

ಆರೋಗ್ಯದ ಬಗ್ಗೆ ಕಾಳಜಿ 

ಉತ್ತಮ ಆಹಾರ ಸೇವನೆ, ವ್ಯಾಯಾಮ, ಸಾಕಷ್ಟು ನೀರು ಕುಡಿಯುವುದು ಮತ್ತು ಗುಣಮಟ್ಟದ ನಿದ್ರೆ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಗಮನ ನೀಡಬೇಕು.

ಕಳೆದು ಹೋದ ಸಮಯ ಎಂದಿಗೂ ಮರಳಿ ಬರಲು ಸಾಧ್ಯವಿಲ್ಲ. ಹಾಗಾಗಿ ಯುವಕರು ಸಮಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು.

ಸಮಯಕ್ಕೆ ಮೌಲ್ಯ ನೀಡುವುದು

ಕಳೆದು ಹೋದ ಸಮಯ ಎಂದಿಗೂ ಮರಳಿ ಬರಲು ಸಾಧ್ಯವಿಲ್ಲ. ಹಾಗಾಗಿ ಯುವಕರು ಸಮಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು.

ಕಲಿಕೆ ಅನ್ನುವಂತಹದ್ದು ನಿರಂತರವಾದ್ದು, ಹೊಸ ಕೌಶಲ್ಯಗಳು, ಉತ್ತಮ ವಿಷಯಗಳನ್ನು ಕಲಿಯುತ್ತಲೇ ಇರಬೇಕು.

ನಿರಂತರ ಕಲಿಕೆ

ಕಲಿಕೆ ಅನ್ನುವಂತಹದ್ದು ನಿರಂತರವಾದ್ದು, ಹೊಸ ಕೌಶಲ್ಯಗಳು, ಉತ್ತಮ ವಿಷಯಗಳನ್ನು ಕಲಿಯುತ್ತಲೇ ಇರಬೇಕು.

ಗುರಿ ಇರಬೇಕು

ಜೀವನದಲ್ಲಿ ಗುರಿ ಎನ್ನುವಂತಹದ್ದು ಇರಬೇಕು. ನಾನು ಏನಾಗಬೇಕು, ಏನು ಸಾಧಿಸಬೇಕು, ಎಂಬ ಗುರಿಯನ್ನು ಇಟ್ಟುಕೊಳ್ಳಬೇಕು. ಆ ಗುರಿಯನ್ನು ತಲುಪಲು ನಿರಂತರವಾಗಿ ಶ್ರಮಿಸಬೇಕು.

ಉತ್ತಮ ಸ್ನೇಹ

ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ಮಾತಿದೆ. ಈ ಮಾತಿನಂತೆ ಉತ್ತಮರ ಸ್ನೇಹವನೇ ಮಾಡಬೇಕು.

ಹಿರಿಯರಿಗೆ ಗೌರವ 

ಹಿರಿಯರಿಗೆ ಗೌರವವನ್ನು ನೀಡುವುದನ್ನು ಕಲಿಯಬೇಕು. ಅಷ್ಟೇ ಅಲ್ಲದೆ ಹಿರಿಯರ ಮಾರ್ಗದರ್ಶನವನ್ನೂ ಪಾಲಿಸಬೇಕು.

ಹಣದ ಮೌಲ್ಯ

ಹಣದ ಮೌಲ್ಯದ ಬಗ್ಗೆಯೂ ಯುವಕರು ತಿಳಿದಿರಬೇಕು. ಭವಿಷ್ಯದ ದೃಷ್ಟಿಯಿಂದ ಹಣ ಉಳಿತಾಯ ಮಾಡುವುದು ಹೇಗೆ ಎಂಬೆಲ್ಲಾ ವಿಚಾರದ ಬಗ್ಗೆಯೂ ತಿಳಿಯಬೇಕು.

ಸೋಲಿನ ಪಾಠ

ಸೋಲೆ ಗೆಲುವಿನ ಸೋಪಾನ. ಸೋತರೆ ಹೇಡಿಯಂತೆ ಓಡಿ ಹೋಗದೆ, ಅದನ್ನೇ ಸಾಧನೆಯ ಮೊದಲ ಮೆಟ್ಟಿಲನ್ನಾಗಿ ಮಾಡಿಕೊಂಡು ಯಶಸ್ಸಿನತ್ತ ಹೆಜ್ಜೆಯಿಡುವುದನ್ನು ಕಲಿಯಬೇಕು.