01 Dec 2025

Pic credit - Pintrest

Author: Akshay Pallamjalu 

ಇದುವೇ ನೋಡಿ ಸುಖಿ ದಾಂಪತ್ಯ ಜೀವನದ ಸೂತ್ರ

ದಾಂಪತ್ಯ ಜೀವನ ಚೆನ್ನಾಗಿರಲು, ಗಂಡ ಹೆಂಡ್ತಿ ಅನ್ಯೋನ್ಯತೆಯಿಂದ ಬಾಳಲು ಬೇಕಾದ ಕೆಲವೊಂದು ಮಹತ್ವದ ಸೂತ್ರಗಳನ್ನು ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ.

ಆಚಾರ್ಯ ಚಾಣಕ್ಯ

Pic credit - Pintrest

ಆಚಾರ್ಯ ಚಾಣಕ್ಯರ ಪ್ರಕಾರ, ಸಂಸಾರದ ಮೂಲ ಅಡಿಪಾಯವೇ ನಿಸ್ವಾರ್ಥ ಪ್ರೀತಿ. ಸಂಗಾತಿಗಳಿಬ್ಬರು ಪರಸ್ಪರ ಪ್ರೀತಿಯಿಂದ ಇದ್ದರೆ ಸಂಬಂಧ ಎಂದಿಗೂ ಹದಗೆಡುವುದಿಲ್ಲ.

ಪ್ರೀತಿ

Pic credit - Pintrest

ಸಂಗಾತಿಗಳಿಬ್ಬರೂ ಪ್ರೀತಿಯ ವಿಷಯದಲ್ಲಿ ಪ್ರಾಮಾಣಿಕರಾಗಿರಬೇಕು. ಇದು ಸಂಬಂಧದಲ್ಲಿನ ನಂಬಿಕೆಯನ್ನು ಬಲಪಡಿಸುತ್ತದೆ, ಸಂಗಾತಿಗಳ ನಡುವೆ ಆಳವಾದ ಬಂಧವನ್ನು ರೂಪಿಸುತ್ತದೆ.

ಪ್ರಾಮಾಣಿಕತೆ

Pic credit - Pintrest

ಅಹಂಕಾರವು ಪ್ರೀತಿ ಮತ್ತು ಗೌರವವನ್ನು ದುರ್ಬಲಗೊಳಿಸುತ್ತದೆ. ಸಂಬಂಧವನ್ನೇ ಹಾಳು ಮಾಡಿಬಿಡುತ್ತವೆ.  ಆದ್ದರಿಂದ, ಸಂಗಾತಿಗಳ ನಡುವೆ ಯಾವುದೇ ಅಹಂ ಇರಬಾರದು.

ಅಹಂಕಾರ ಬೇಡ

Pic credit - Pintrest

ಸಂಗಾತಿಗಳಿಬ್ಬರು ಕಷ್ಟದ ಸಮಯದಲ್ಲಿ ಪರಸ್ಪರ ಬೆಂಬಲವಾಗಿ ನಿಂತರೆ ಮಾತ್ರ  ದಾಂಪತ್ಯ ಜೀವನ ಸಂತೋಷದಿಂದ ಕೂಡಿರುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.

ಪರಸ್ಪರ ಬೆಂಬಲ

Pic credit - Pintrest

ಸಂಬಂಧಗಳಲ್ಲಿ ಗೌರವವು ಅತ್ಯಂತ ಪ್ರಮುಖವಾದುದು. ಸಂಗಾತಿಗಳು ಪರಸ್ಪರ ಗೌರವ ತೋರಿದರೆ ಸಂಬಂಧದಲ್ಲಿ ಯಾವುದೇ  ಉದ್ವಿಗ್ನತೆ, ಕಹಿ ಭಾವನೆ ಉಂಟಾಗುವುದಿಲ್ಲ.

ಪರಸ್ಪರ ಗೌರವ

Pic credit - Pintrest

ಯಾವುದೇ ಸಂಬಂಧದ ಯಶಸ್ಸಿಗೆ ಸಂವಹನ ಅತ್ಯಗತ್ಯ. ಗಂಡ ಮತ್ತು ಹೆಂಡತಿ ತಮ್ಮ ಆಲೋಚನೆಗಳು, ಭಾವನೆಗಳು ಮತ್ತು ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು.

ಸಂವಹನ

Pic credit - Pintrest

ಗಂಡ ಮತ್ತು ಹೆಂಡತಿ ತಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅದು ಅವರ ವೈವಾಹಿಕ ಜೀವನದ ಶಾಂತಿಯನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.  

ಕೋಪವನ್ನು ನಿಯಂತ್ರಣ

Pic credit - Pintrest