Pic credit - pinterest

Author: Sai Nanda

1 April 2025

ಶರೀರ ಭಾಷೆ ಉತ್ತಮಗೊಳಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಸಂವಹನ ನಡೆಸುವಾಗ ನಿಮ್ಮ ದೇಹ ಭಾಷೆ ಹೇಗಿದೆ ಎನ್ನುವುದು ಕೂಡ ಬಹಳ ಮುಖ್ಯವಾಗುತ್ತದೆ.

ನಿಮ್ಮ ಶರೀರದ ಭಾಷೆ ನೋಡಿ ನೀವು ಯಾವ ರೀತಿ ವ್ಯಕ್ತಿ ಎಂದು ನಿಮ್ಮ ಸುತ್ತಲಿನವರು ನಿರ್ಣಯಿಸುತ್ತಾರೆ.

ಉತ್ತಮ ದೇಹಭಾಷೆ ಹೊಂದಲು ಕೈಗಳನ್ನು ಜೇಬಿನಲ್ಲಿ ಇಟ್ಟುಕೊಂಡು ನಡೆಯಬೇಡಿ, ಇದು ನಿಮಗೆ ಆತ್ಮವಿಶ್ವಾಸವಿಲ್ಲ ಎಂದು ತೋರಿಸುತ್ತದೆ.

ಮಾತಿನ ನಡುವೆ ಅನಾವಶ್ಯಕವಾಗಿ ಹೆಚ್ಚು ನಗಬೇಡಿ, ಈ ರೀತಿ ನಡವಳಿಕೆ ಶರಣಾಗತಿ ಎಂದು ತೋರುತ್ತದೆ.

ಮಾತನಾಡುವಾಗ ಎದುರಿಗಿರುವ ವ್ಯಕ್ತಿಯ ಕಣ್ಣಿನ ಜೊತೆಗೆ ಸಂಪರ್ಕ ಕಾಯ್ದುಕೊಳ್ಳಿ. ನೀವು ಬೇರೆಡೆ ನೋಡುತ್ತಿದ್ದರೆ ಅವರ ಮಾತಿನ ಮೇಲೆ ಆಸಕ್ತಿಯಿಲ್ಲ ಎಂದರ್ಥ.

ಮಾತಿನ ನಡುವೆ ಪದೇ ಪದೇ ಮೊಬೈಲ್ ನೋಡುವ ಅಭ್ಯಾಸಬೇಡ. ಇದು ನಿಮಗೆ ಬೋರಾಗುತ್ತಿದೆ ಅಥವಾ ವ್ಯಕ್ತಿಯ ಮಾತನ್ನು ನಿರ್ಲಕ್ಷ್ಯ ಮಾಡುತ್ತೀರಿ ಎಂದು ತೋರಿಸುತ್ತದೆ.

ಸಂವಹನ ನಡೆಸುವಾಗ ನಿಧಾನ ಹಾಗೂ ಶಾಂತ ಸ್ವರದಲ್ಲಿ ಮಾತನಾಡಿ,"ಹ್ಮ್ ಹ್ಮ್, ಅಥವಾ "ಲೈಕ್" ಮುಂತಾದ ಪದಗಳನ್ನು ಆದಷ್ಟು ತಪ್ಪಿಸಿ.

ನಡೆಯುವಾಗ ಬೆನ್ನನ್ನು ಬಾಗಿಸದೆ, ನೇರವಾಗಿ ನಡೆಯಿರಿ.ಇದು ನಿಮ್ಮ ಆತ್ಮವಿಶ್ವಾಸವನ್ನು ಎತ್ತಿ ತೋರಿಸುತ್ತದೆ.

ಮನೆಯೊಳಗೆ ಅಥವಾ ಕೋಣೆಯೊಳಗೆ ಪ್ರವೇಶಿಸಿದಾಗ ಹಿಂದೆ ತಿರುಗಿ ಒಮ್ಮೆಲೇ ಬಾಗಿಲು ಮುಚ್ಚಬೇಡಿ, ಇದು ನಿಮ್ಮ ಪ್ರಾಬಲ್ಯವನ್ನು ತೋರಿಸುತ್ತದೆ.