ನೀವು ದಪ್ಪಗಾಗಿ ಕಾಣ್ಬಾರ್ದು ಅಂದ್ರೆ ಈ ಬಣ್ಣದ ಬಟ್ಟೆ ಧರಿಸಬೇಡಿ

Pic Credit: pinterest

By Malashree Anchan

25 june 2025

ಬಟ್ಟೆಗಳು

ಕೆಲವೊಂದು ಬಣ್ಣದ ಬಟ್ಟೆಗಳು ನಮ್ಮನ್ನು ತೀರಾ ದಪ್ಪವಾಗಿ ಕಾಣುವಂತೆ ಮಾಡುತ್ತವೆ. ಹೀಗಿರುವಾಗ  ಸ್ಲಿಮ್‌ ಆಗಿ ಕಾಣಲು ಈ ಕೆಲವು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ.

ಬಿಳಿ ಬಣ್ಣ

ಬಿಳಿ ಬಣ್ಣವು ಶಾಂತಿಯುತವಾಗಿ ಕಾಣುವುದರಿಂದ ಜನರು ಹೆಚ್ಚಾಗಿ ಈ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಆದ್ರೆ ಈ ಬಿಳಿ ಬಣ್ಣ ನಮ್ಮನ್ನು ದಪ್ಪವಾಗಿ ಕಾಣುವಂತೆ ಮಾಡುತ್ತದೆ.

ತಿಳಿ ನೇರಳೆ ಬಣ್ಣ

ಸಾಮಾನ್ಯವಾಗಿ ಮಹಿಳೆಯರು ಈ ಬಣ್ಣವನ್ನು ಸಖತ್‌ ಇಷ್ಟಪಡುತ್ತಾರೆ. ಆದರೆ ಈ ಬಣ್ಣ ಸುಂದರವಾಗಿ ಕಂಡರೂ ಇದು ನೀವು ದಪ್ಪಗಾಗಿ ಕಾಣುವಂತೆ ಮಾಡುತ್ತದೆ.  

ಮುತ್ತಿನ ಬಣ್ಣ

ಮುತ್ತಿನಂತಹ ಹೊಳೆಯುವ ಬಣ್ಣಗಳ ಬಟ್ಟೆ ನೋಡಲು ತುಂಬಾನೇ ಸುಂದರವಾಗಿ ಕಾಣಿಸುತ್ತದೆ. ಆದರೆ ಅದನ್ನು ಧರಿಸಿದಾಗ ನೀವು ತುಂಬಾನೇ ದಪ್ಪವಾಗಿ ಕಾಣುತ್ತೀರಿ.  

ಕಂದು ಬಣ್ಣ

ನೀವು ಯಾವುದೇ ರೀತಿಯ ಉಡುಗೆ ಧರಿಸಿದರೂ, ನೀವು ಸ್ಲಿಮ್ ಆಗಿ ಕಾಣಲು ಬಯಸಿದರೆ, ನೀವು ಕಂದು ಬಣ್ಣದ ಬಟ್ಟೆಗಳಿಂದ  ಸಾಧ್ಯವಾದಷ್ಟು ದೂರವಿರಬೇಕು.

ಕಿತ್ತಳೆ ಬಣ್ಣ

ಈ ಬಣ್ಣ ಬಟ್ಟೆ ಅನೇಕ ದೇಹಕಾರಗಳಿಗೆ ಹೊಂದಿಕೆಯಾಗುವುದಿಲ್ಲ. ಆದ್ದರಿಂದ ಸ್ಲಿಮ್‌ ಆಗಿ ಕಾಣಬೇಕೆಂದರೆ ಈ ಬಣ್ಣದ ಬಟ್ಟೆ ಧರಿಸಬೇಡಿ.  

ಯಾವುದು ಸೂಕ್ತ

ಹೀಗಿರುವಾಗ ಸ್ಲಿಮ್‌ ಆಗಿ ಕಾಣ್ಬೇಕು ಅಂದ್ರೆ ತಿಳಿ ಗುಲಾಬಿ, ಹಳದಿ ಬಣ್ಣ, ತಿಳಿ ನೀಲಿ ಅಥವಾ ತಿಳಿ ಬೂದು ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿ.

ಫಿಟ್‌ ಆಗಿ ಕಾಣ್ಬೇಕಾ

ನೀವು ಯಾವುದೇ ಬಟ್ಟೆ ಧರಿಸಿದರೂ ಸ್ಲಿಮ್‌ ಮತ್ತು ಫಿಟ್‌ ಆಗಿ ಕಾಣ್ಬೇಕು ಎಂದ್ರೆ ತಿಳಿ ನೀಲಿ, ತಿಳಿ ಹಸಿರು, ಕಪ್ಪು, ತಿಳಿ ಹಳದಿ, ಗುಲಾಬಿ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿ.