Pic Credit: pinterest
By Malashree anchan
15 July 2025
ಕೆಲವೊಂದು ವೈಯಕ್ತಿಯ ವಿಚಾರ ಅದರಲ್ಲೂ ಹಣಕಾಸಿಗೆ ಸಂಬಂಧಪಟ್ಟ ಈ ಒಂದಷ್ಟು ರಹಸ್ಯಗಳನ್ನು ಯಾರ ಬಳಿಯೂ ಹಂಚಿಕೊಳ್ಳಬಾರದಂತೆ.
ನಿಮ್ಮ ಸಂಬಳದ ಬಗ್ಗೆ ಯಾರಿಗೂ ಹೇಳಬೇಡಿ. ನಿಮ್ಮ ಮಾಸಿಕ ಆದಾಯವು ಸಂಪೂರ್ಣವಾಗಿ ವೈಯಕ್ತಿಕವಾಗಿದೆ.
ಉಳಿತಾಯದ ಬಗ್ಗೆ ನಿಮ್ಮ ಮನೆಯವರನ್ನು ಹೊರತು ಪಡಿಸಿ, ಯಾರಿಗೂ ಹೇಳಬೇಡಿ. ನಿಮ್ಮ ಬಳಿ ಹಣಯಿದೆ ಎಂದರೆ ಸಾಲ ಕೇಳುವವರೂ ಹೆಚ್ಚಾಗುತ್ತಾರೆ.
ನಿಮ್ಮ ಹೂಡಿಕೆಗಳ ಬಗ್ಗೆ ಯಾರಿಗೂ ಹೇಳಬೇಡಿ. ಹೀಗೆ ಹೇಳುವುದರಿಂದ ಅವರು ಅನಗತ್ಯ ಸಲಹೆಗಳನ್ನು ನೀಡುತ್ತಾರೆ. ಇದರಿಂದ ತಪ್ಪಾದ ಕಡೆ ಹೂಡಿಕೆ ಮಾಡುವ ಸಾಧ್ಯತೆ ಇರುತ್ತದೆ.
ಸಾಲದ ಬಗ್ಗೆಯೂ ಯಾರೊಂದಿಗೂ ಶೇರ್ ಮಾಡಬಾರದು. ಸಾಲದ ಬಗ್ಗೆ ಹೇಳಿಕೊಂಡಾಗ ನಿಮ್ಮನ್ನು ಕೀಳಾಗಿ ಕಾಣುವ ಅಥವಾ ಚುಚ್ಚು ಮಾತನಾಡುವ ಸಾಧ್ಯತೆ ಹೆಚ್ಚಿರುತ್ತದೆ.
ನಿಮ್ಮ ಪಿತ್ರಾರ್ಜಿತ ಆಸ್ತಿ ಆಗಿರಬಹುದು ಅಥವಾ ನೀವೇ ಕಷ್ಟಪಟ್ಟು ಗಳಿಸಿರುವ ಸಂಪತ್ತಿನ ಬಗ್ಗೆಯೂ ಯಾರೊಂದಿಗೂ ಹೇಳಬೇಡಿ.
ನೀವು ಹಿಂದೆ ಹಣಕಾಸಿನ ವಂಚನೆಗಳಿಗೆ ಒಳಗಾಗಿದ್ದರೆ, ನಿಮಗಾದ ವಂಚನೆಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳಬೇಡಿ.
ನಿಮ್ಮ ಸಂಗಾತಿ ಆಗಿರಬಹುದು ಅಥವಾ ನಿಮ್ಮ ಮನೆಯ ಸದಸ್ಯರ ಆದಾಯದ ಬಗ್ಗೆಯೂ ಹೊರಗಿನ ಯಾರ ಬಳಿಯೂ ಹಂಚಿಕೊಳ್ಳಬಾರದಂತೆ.