ಎಕ್ಸ್‌ಪೈರಿ ಡೇಟ್‌ ಇಲ್ಲದ ಆಹಾರಗಳೂ ಇವೆ; ಅವು ಯಾವುವು ಗೊತ್ತಾ?

Pic Credit: pinterest

By Malashree anchan

25 July 2025

 ಜೇನುತುಪ್ಪ

ಶುದ್ಧ ಜೇನುತುಪ್ಪ ಎಂದಿಗೂ ಕೆಡುವುದಿಲ್ಲ. ಉತ್ತರ ರೀರಿಯಲ್ಲಿ ಸಂಗ್ರಹಿಸಿದರೆ ಇದನ್ನು ಹಲವು ವರ್ಷಗಳ ಕಾಲ ಬಳಕೆ ಮಾಡಬಹುದು.

ಉಪ್ಪು

ಉಪ್ಪಿಗೂ ಎಕ್ಸ್‌ಪೈರಿ ಡೇಟ್‌ ಇರೋದಿಲ್ಲ. ಉಪ್ಪಿನಲ್ಲಿರುವ ಸೋಡಿಯಂ ಕ್ಲೋರೈಡ್‌ ಸ್ಥಿರವಾದ ರಾಸಾಯನಿಕ ಸಂಯುಕ್ತವಾಗಿದೆ. ಇದು ಉಪ್ಪು ಹಾಳಾಗುವುದನ್ನು ತಡೆಯುತ್ತದೆ.

ಸಕ್ಕರೆ

ಸಕ್ಕರೆ ಕೂಡ ಎಂದಿಗೂ ಕೆಡುವುದಿಲ್ಲ. ತಜ್ಞರ ಪ್ರಕಾರ ಸಕ್ಕರೆಯನ್ನು ತೇವಾಂಶದಿಂದ ದೂರವಿಟ್ಟರೆ, ನೀವು ಅದನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದು.  

ಅಕ್ಕಿ

ದೀರ್ಘಕಾಲ ಶೇಖರಿಸಿಡಬಹುದಾದ ಆಹಾರಗಳಲ್ಲಿ ಅಕ್ಕಿ ಕೂಡ ಒಂದು. ಅವುಗಳಿಗೆ ಎಕ್ಸೈರಿ ಡೇಟ್‌ ಇರುವುದಿಲ್ಲ. ಅಕ್ಕಿ ಹಳೆಯದಾದಷ್ಟೂ ರುಚಿಕರವಾಗಿರುತ್ತದೆ ಎಂದು ಹೇಳಲಾಗುತ್ತದೆ.

ವಿನೆಗರ್

ವಿನೆಗರ್‌ಗೂ ಎಕ್ಸ್‌ಪೈರಿ ಡೇಟ್‌ ಇಲ್ಲವಂತೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿದರೆ ಇವು  ದೀರ್ಘಕಾಲ ಕೆಡುವುದಿಲ್ಲ.

ಮದ್ಯ

ಮದ್ಯವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ, ಅದಕ್ಕೆ ಯಾವುದೇ ಎಕ್ಸ್‌ಪೈರಿ ಡೇಟ್‌ ಅನ್ನೋದು ಇಲ್ಲ. ಇವುಗಳು ಹಳೆಯದಾದಷ್ಟು ಇವುಗಳ ರುಚಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳಿಗೂ ಎಕ್ಸ್‌ಪೈರಿ ಡೇಟ್‌ ಇಲ್ಲವಂತೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿಟ್ಟರೆ, ಹಲವು ವರ್ಷಗಳವೆರೆಗೂ ಉಪಯೋಗಿಸಬಹುದು.

ಮೇಪಲ್‌ ಸಿರಪ್‌

ಪ್ಯಾನ್‌ಕೇಕ್‌, ವೇಫಲ್ಸ್‌, ಫ್ರೆಂಚ್‌ ಟೋಸ್ಟ್‌ಗಳಿಗೆ ಬಳಸುವಂತಹ ಮೇಪಲ್‌ ಸಿರಪ್‌ಗೂ ಕೂಡಾ ಎಕ್ಸ್‌ಪೈರಿ ಡೇಟ್‌ ಇಲ್ಲ.