ಸಂಜೆ ಚಹಾದೊಂದಿಗೆ  ತಿನ್ನಲು ಬೆಸ್ಟ್‌ ಈ ತಿಂಡಿಗಳು

Pic Credit: pinterest

By Malashree Anchan

16 june 2025

ಚಹಾ

ಸಂಜೆ ಬಿಸಿ ಬಿಸಿ ಚಹಾ ಹೀರುತ್ತಾ, ಅದರೊಂದಿಗೆ ತಿನ್ನಲು ಏನಾದ್ರೂ ಕರಿದ ತಿಂಡಿಗಳಿದ್ರೆ ಸ್ವರ್ಗಕ್ಕೆ ಮೂರೇ ಗೇಣು. ಹಾಗಾದ್ರೆ ಟೀ ಜೊತೆಗೆ ತಿನ್ನಲು ಬೆಸ್ಟ್‌  ತಿಂಡಿ ಯಾವುದು ನೋಡೋಣ.

ಸಮೋಸಾ

ಸಮೋಸಾ ಭಾರತ ಜನಪ್ರಿಯ ಕರಿದ ತಿಂಡಿಗಳಲ್ಲಿ ಒಂದಾಗಿದೆ. ಬಿಸಿ ಬಿಸಿ ಟೀ ಜೊತೆ ಇದರ ಕಾಂಬಿನೇಷನ್‌ ಸಖತ್‌ ಆಗಿರುತ್ತೆ.

ತರಕಾರಿ ಕಟ್ಲೆಟ್

ಟೀ ಜೊತೆಗೆ ವೆಜ್‌ ಕಟ್ಲೆಟ್‌ ಕೂಡಾ ಬೆಸ್ಟ್‌ ಕಾಂಬಿನೇಷನ್.‌ ಬಿಸಿಬಿಸಿ ಟೀ ಜೊತೆಗೆ ಕಟ್ಲೆತ್‌ ತಿನ್ನಲು ಬಲು ರುಚಿಕರವಾಗಿರುತ್ತದೆ.

ಪಕೋಡಾ

ಈ ಮಳೆಗಾಲದಲ್ಲಂತೂ ಬಿಸಿ ಬಿಸಿ ಚಹಾದೊಂದಿಗೆ ತಿನ್ನಲು ಪಕೋಡಾ ಇರಲೇಬೇಕು. ಇದರ ರುಚಿಯೇ ಬಲು ಅದ್ಭುತವಾಗಿರುತ್ತದೆ.

ಮೆಣಸಿನಕಾಯಿ ಬಜ್ಜಿ

ನೀವು ಖಾರದ ತಿಂಡಿಗಳನ್ನು ಇಷ್ಟಪಡುವವರಾಗಿದ್ದರೆ, ನೀವು ಸಂಜೆ ಚಹಾದೊಂದಿಗಿಗೆ ಗರಿಗರಿಯಾಗಿರುವಂತ ಮೆಣಸಿನಕಾಯಿ ಬಜ್ಜಿಯನ್ನು ಸವಿಯಬಹುದು.

ವಡಾ ಪಾವ್

ಮುಂಬೈನ ಪ್ರಸಿದ್ಧ ಬೀದಿಬದಿ ಆಹಾರಗಳಲ್ಲಿ ಒಂದಾದ ವಡಾ ಪಾವ್‌ ಜೊತೆಗೂ ಟೀ ಸವಿಯಬಹುದು. ಇವೆರಡರ ಕಾಂಬಿನೇಷನ್‌ ಅದ್ಭುತವಾಗಿರುತ್ತದೆ.

ಆಲೂ ಬೋಂಡಾ

ಆಲೂ ಬೋಂಡಾ ಎಂದ್ರೆ ಹೆಚ್ಚಿನವರಿಗೆ ಸಖತ್‌ ಇಷ್ಟ. ಅದರಲ್ಲೂ ಟೀ ಜೊತೆಗೆ ಇದರ ಕಾಂಬಿನೇಷನ್‌ ಬೆಸ್ಟ್‌ ಅಂತಾನೇ ಹೇಳಬಹುದು.

ಸಬ್ಬಕ್ಕಿ ವಡೆ

ಗರಿಗರಿಯಾದ ಸಬ್ಬಕ್ಕಿ ಅಥವಾ ಸಾಬುದಾನ ವಡೆ ತಿನ್ನಲು ಬಲು ರುಚಿಕರವಾಗಿರುತ್ತದೆ. ಟೀ ಜೊತೆಗೆ ಇದರ ಕಾಂಬಿನೇಷನ್‌ ಕೂಡಾ ಸಖತ್‌ ಆಗಿರುತ್ತದೆ.