09 Dec 2025

Pic credit - Pintrest

Author: Akshay Pallamjalu 

ಈ ಅಭ್ಯಾಸಗಳು ನಿಮ್ಮನ್ನು ವಯಸ್ಸಾದವರಂತೆ ಕಾಣಿಸುತ್ತದೆ

ತಜ್ಞರು ಹೇಳುವಂತೆ ಒತ್ತಡವು ನಿಮ್ಮ ಚರ್ಮವನ್ನು ಆಯಾಸಗೊಳಿಸುತ್ತದೆ ಮತ್ತು ಅಕಾಲಿಕವಾಗಿ ವಯಸ್ಸಾಗುವಂತೆ ಮಾಡುತ್ತದೆ.

ಒತ್ತಡ

Pic credit - Pintrest

ನಿದ್ರೆಯ ಕೊರತೆಯು ಚರ್ಮದ ಮೇಲೂ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಕಡಿಮೆ ನಿದ್ರೆ ಮುಖದ ಹೊಳಪನ್ನು ಕಸಿದುಕೊಳ್ಳುತ್ತದೆ ಮತ್ತು ಇದು ಅಕಾಲಿಕ ವಯಸ್ಸಿಗೆ ಕಾರಣವಾಗುತ್ತದೆ.

ನಿದ್ರೆಯ ಕೊರತೆ

Pic credit - Pintrest

ಜಂಕ್‌ಫುಡ್‌ ಮತ್ತು ಸಿಹಿ ಪದಾರ್ಥ ಚರ್ಮದ ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ ಮತ್ತು ಇದು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ.

ಜಂಕ್ ಫುಡ್

Pic credit - Pintrest

ಹೆಚ್ಚಿನವರು ಮನೆಯಲ್ಲಿದ್ದಾಗ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದಿಲ್ಲ. ತಜ್ಞರು ಹೇಳುವಂತೆ ಯುವಿ ಕಿರಣಗಳು ಒಳಾಂಗಣದಲ್ಲಿಯೂ ಸಹ ನಮ್ಮ ಚರ್ಮಕ್ಕೆ ಹಾನಿ ಮಾಡುತ್ತವೆ.

ಸನ್‌ಸ್ಕ್ರೀನ್

Pic credit - Pintrest

ಅತಿಯಾದ ಧೂಮಪಾನ ಮತ್ತು ಮದ್ಯಪಾನ ಕೂಡ ಅಕಾಲಿಕ ವಯಸ್ಸಾಗುವಿಕೆಗೆ ಮುಖ್ಯ ಕಾರಣ. ಇದು ಚರ್ಮವನ್ನು ಮಂದವಾಗಿಸುತ್ತದೆ.

ಧೂಮಪಾನ

Pic credit - Pintrest

ನೀರಿನ ಕೊರತೆಯಿಂದ ಚರ್ಮವು ತೇವಾಂಶ ಕಳೆದುಕೊಳ್ಳುತ್ತದೆ. ತ್ವಚೆ ಶುಷ್ಕ ಮತ್ತು ಮಂದವಾಗಿ ಕಾಣುತ್ತದೆ. ಇದು ಅಕಾಲಿಕ ವಯಸ್ಸಾಗುವಿಕೆಗೂ ಕಾರಣ.

ನಿರ್ಜಲೀಕರಣ

Pic credit - Pintrest

ದೈಹಿಕ ಚಟುವಟಿಕೆ, ವ್ಯಾಯಾಮದ ಕೊರತೆಯಿಂದಾಗಿ ರಕ್ತ ಪರಿಚಲನೆ ಸರಿಯಾಗಿ ಸಾಗುವುದಿಲ್ಲ. ಇದರಿಂದಾಗಿ ದೇಹವು ದಣಿದಂತೆ, ವಯಸ್ಸಾದಂತೆ ಕಾಣಿಸುತ್ತದೆ.

ವ್ಯಾಯಾಮದ ಕೊರತೆ

Pic credit - Pintrest

ಅನಾರೋಗ್ಯಕರ ಆಹಾರ ಮತ್ತು ಜಡ ಜೀವನಶೈಲಿ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದರ ಜೊತೆಗೆ ಇದು ಅಕಾಲಿಕ ವಯಸ್ಸಾಗುವಿಕೆಗೂ ಕಾರಣ.

ಜಡ ಜೀವನಶೈಲಿ

Pic credit - Pintrest