26 Nov 2025

Pic credit - Pintrest

Author: Akshay Pallamjalu 

ಮನೆಯ ಈ ವಸ್ತುಗಳು ಟಾಯ್ಲೆಟ್‌ಗಿಂತಲೂ ತುಂಬಾ ಕೊಳಕಾಗಿರುತ್ತಂತೆ

ಸ್ಮಾರ್ಟ್‌ಫೋನ್‌ನಲ್ಲಿ ಟಾಯ್ಲೆಟ್‌ ಸೀಟ್‌ಗಿಂತಲೂ 10 ಪಟ್ಟು ಹೆಚ್ಚು ಬ್ಯಾಕ್ಟೀರಿಯಾ ಇರುತ್ತಂತೆ. ಆದ್ದರಿಂದ ಪ್ರತಿದಿನ ಫೋನ್‌ ಸ್ವಚ್ಛಗೊಳಿಸಿ

ಮೊಬೈಲ್ ಫೋನ್‌

Pic credit - Pintrest

ಆಗಾಗ್ಗೆ ಸ್ಪರ್ಷಿಸುವ ರಿಮೋಟ್‌ ಅದು ಟಾಯ್ಲೆಟ್ ಸೀಟ್‌ಗಿಂತ 15 ಪಟ್ಟು ಹೆಚ್ಚು ಕೊಳಕಾಗಿರುತ್ತವಂತೆ. ಆದ್ದರಿಂದ ಪ್ರತಿನಿತ್ಯ ಇದರ ಸ್ವಚ್ಛತೆಯ ಬಗ್ಗೆ ಗಮನ ವಹಿಸಿ.

ಟಿವಿ ರಿಮೋಟ್

Pic credit - Pintrest

ಬಾಟಲಿಯಲ್ಲಿನ ತೇವಾಂಶ ಬ್ಯಾಕ್ಟೀರಿಯಾ ಬೆಳೆಯಲು ಕಾರಣ. ಆದ್ದರಿಂದ ನಿಯಮಿತವಾಗಿ ಬಾಟಲ್‌ ಕ್ಲೀನ್‌ ಮಾಡದಿದ್ದರೆ ಇದು ಹೊಟ್ಟೆ ಮತ್ತು ಕರುಳಿನ ಕಾಯಿಲೆಗೆ ಕಾರಣವಾಗಬಹುದು.

ನೀರಿನ ಬಾಟಲ್

Pic credit - Pintrest

ದಿಂಬಿನ ಹೊದಿಕೆಗಳು ನೆತ್ತಿಯ ಎಣ್ಣೆ, ಬೆವರು ಮತ್ತು ಧೂಳನ್ನು ಸಂಗ್ರಹಿಸುತ್ತವೆ, ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ.

ದಿಂಬಿನ ಕವರ್‌ಗಳು

Pic credit - Pintrest

ಪಾತ್ರೆ ಸ್ವಚ್ಛಗೊಳಿಸಲು ಬಳಸುವ ಸ್ಪಾಂಜ್ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗುತ್ತದೆ. ಆದ್ದರಿಂದ ವಾರಕ್ಕೊಮ್ಮೆ ಸ್ಪಾಂಜ್ ಅನ್ನು ಬದಲಾಯಿಸಿ.

ಕಿಚನ್‌ ಸ್ಪಾಂಜ್

Pic credit - Pintrest

ಬಾತ್‌ ಲೂಫಾ ತೇವಾಂಶದಿಂದಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸಂತಾನೋತ್ಪತ್ತಿಯ ಸ್ಥಳವಾಗಬಹುದು. ಇದನ್ನು ನಿಯಮಿತವಾಗಿ ಬದಲಾಯಿಸಿ.

ಬಾತ್ ಲೂಫಾ

Pic credit - Pintrest

ಟೂತ್ ಬ್ರಷ್ ಹೋಲ್ಡರ್ ಒದ್ದೆಯಾಗಿ ಮತ್ತು ತೇವವಾಗಿ ಉಳಿಯುತ್ತದೆ, ಇದು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ.

ಟೂತ್ ಬ್ರಷ್ ಹೋಲ್ಡರ್

Pic credit - Pintrest

ಕೊಳೆಯಾಗುವ ವಸ್ತುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ನಿಮ್ಮ ಟೂತ್ ಬ್ರಷ್ ಹೋಲ್ಡರ್ ಮತ್ತು ದಿಂಬಿನ ಹೊದಿಕೆಯನ್ನು ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ತೊಳೆಯಿರಿ.

ಏನು ಮಾಡಬೇಕು?

Pic credit - Pintrest