ಗ್ಯಾಸ್‌ ಒಲೆ ಪಕ್ಕ ಈ ವಸ್ತುಗಳನ್ನು ಇಡ್ಬಾರ್ದು,  ಯಾಕೆ ಗೊತ್ತಾ? ಇಲ್ಲಿದೆ ನೋಡಿ

Pic Credit: pinterest

By Malashree Anchan

25 june 2025

ಅಡುಗೆ

ಅಡುಗೆ ಮಾಡಲು ಸುಲಭ ಆಗುತ್ತೆ ಅನ್ನೋ ಕಾರಣಕ್ಕೆ ಮಹಿಳೆಯರು ಒಂದಷ್ಟು ವಸ್ತುಗಳನ್ನು ಗ್ಯಾಸ್‌ ಸ್ವವ್‌ ಪಕ್ಕದಲ್ಲಿಯೇ ಇಟ್ಟು ಬಿಡುತ್ತಾರೆ.

ಅಪಾಯ

ಹೀಗೆ ಗ್ಯಾಸ್‌ ಒಲೆ ಪಕ್ಕ ಕೆಲವು ವಸ್ತುಗಳನ್ನು ಇಡುವುದರಿಂದ ಅವುಗಳಿಗೆ ಜೊತೆಗೆ ಕೆಲವೊಂದು ಬಾರಿ ಅಪಾಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ.

ಅಡುಗೆ ಎಣ್ಣೆ

ಅಡುಗೆ ಎಣ್ಣೆಯ ಡಬ್ಬವನ್ನು ಗ್ಯಾಸ್‌ ಸ್ವವ್‌ ಪಕ್ಕದಲ್ಲಿ ಇಡಬಾರದು. ಇದರಿಂದ ಅಡುಗೆ ಮಾಡುವಾಗ ಶಾಖ ತಾಕಿ ಎಣ್ಣೆಯ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ಪ್ಲಾಸ್ಟಿಕ್‌ ವಸ್ತುಗಳು

ಯಾವುದೇ ರೀತಿಯ ಪ್ಲಾಸ್ಟಿಕ್‌ ವಸ್ತುಗಳನ್ನು ಗ್ಯಾಸ್‌ ಒಲೆ ಪಕ್ಕ ಇಡಬಾರದು. ಏಕೆಂದರೆ ಬಿಸಿ ತಗುಲಿ ಪ್ಲಾಸ್ಟಿಕ್‌ ಕರಗುವ ಹಾಗೂ ಇದರಿಂದ ಬೆಂಕಿ ಹತ್ತಿಕೊಳ್ಳುವ ಅಪಾಯ ಇರುತ್ತದೆ.

ಮಸಾಲೆ ಪದಾರ್ಥಗಳು

ಕೆಲವರು ಮಸಾಲೆ ಪದಾರ್ಥಗಳ ಡಬ್ಬಿಯನ್ನು ಗ್ಯಾಸ್‌ ಒಲೆಯ ಪಕ್ಕದಲ್ಲಿಯೇ ಇಟ್ಟು ಬಿಡುತ್ತಾರೆ. ಹೀಗೆ ಮಾಡುವುದರಿಂದ ಮಸಾಲೆಗಳ ಗುಣಮಟ್ಟ ಹಾಳಾಗುವ ಸಾಧ್ಯತೆ ಇರುತ್ತದೆ.

ಕ್ಲೀನರ್‌ಗಳು

ಸ್ಪ್ರೇ ಇತ್ಯಾದಿ ಕ್ಲೀನರ್‌ ವಸ್ತುಗಳನ್ನು ಕೂಡಾ ಗ್ಯಾಸ್‌ ಒಲೆ ಬಳಿ ಇಡಬಾರದು. ಇದರಿಂದ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಬಗ್ಗೆ ತುಂಬಾ ಜೋಪಾನವಾಗಿರಬೇಕು.

ವಿದ್ಯುತ್‌ ಪರಿಕರಗಳು

ವಿದ್ಯುತ್‌ ಉಪಕರಣಗಳನ್ನು ತುಂಬಾ ಬಿಸಿಯಾಗಿರುವ ಸ್ಥಳಗಳಲ್ಲಿ ಇಡಬಾರದು. ಏಕೆಂದರೆ ಅತಿಯಾದ ಶಾಖವು ವಿದ್ಯುತ್‌ ಉಪಕರಣಗಳಿಗೆ ಹಾನಿಯನ್ನುಂಟುಮಾಡುತ್ತದೆ.  

ಬಟ್ಟೆಗಳು

 ಕೆಲವರು ಕೈ ಒರೆಸುವ ಬಟ್ಟೆಗಳನ್ನು ಗ್ಯಾಸ್‌ ಸ್ವವ್‌ ಪಕ್ಕದಲ್ಲಿಯೇ ಇಟ್ಟು ಬಿಡುತ್ತಾರೆ. ಇದರಿಂದ ಕೆಲವೊಂದು ಬಾರಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.