ಈ ಪುರುಷರು ಯಾವುದೇ ಕಾರಣಕ್ಕೂ ಸುಂದರ ಮಹಿಳೆಯನ್ನು ಮದುವೆಯಾಗಬಾರದು

Pic Credit: pinterest

By Malashree anchan

4 September  2025

 ಚಾಣಕ್ಯ ನೀತಿ

ಈ ಕೆಲ ಪುರುಷರು ಯಾವುದೇ ಕಾರಣಕ್ಕೂ ಸೌಂದರ್ಯವತಿ ಹೆಣ್ಣನ್ನು ಮದುವೆಯಾಗಬಾರದು, ಇದರಿಂದ ಸಮಸ್ಯೆಯೇ ಹೆಚ್ಚು ಎಂದು ಚಾಣಕ್ಯ ನೀತಿಯಲ್ಲಿ ತಿಳಿಸಲಾಗಿದೆ.

ಬುದ್ಧಿಹೀನ ಪುರುಷ

ಸುಂದರ ಮಹಿಳೆಯನ್ನು ಮದುವೆಯಾಗುವುದರಿಂದ ಬುದ್ಧಿಹೀನ ವ್ಯಕ್ತಿ ತೊಂದರೆಗೆ ಸಿಲುಕಬಹುದು. ಮತ್ತು ಹೆಂಡತಿಯನ್ನು ರಕ್ಷಿಸಲು ಅವನಿಗೆ ಸಾಧ್ಯವಾಗುವುದಿಲ್ಲ.

ದುರಹಂಕಾರ ತೋರುವವರು

ದುರಹಂಕಾರದಿಂದ ವರ್ತಿಸುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಹೆಂಡತಿಯನ್ನು ಖುಷಿಯಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಚಾಣಣ್ಯಕರು ಹೇಳುತ್ತಾರೆ.

ಸರ್ವಾಧಿಕಾರಿ

ಸರ್ವಾಧಿಕಾರಿಯಾಗಿ ನಡೆದುಕೊಳ್ಳುವ ಪುರುಷರು  ಸುಂದರ ಮಹಿಳೆಯನ್ನು ಕೇವಲ ಒಂದು ವಸ್ತುವಾಗಿ ಪರಿಗಣಿಸುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ.

ಸಂಶಯ ಸ್ವಭಾವದವರು

ಸಣ್ಣ ಸಣ್ಣ ವಿಷಯಕ್ಕೂ ಅನುಮಾನ ಪಡುವ ವ್ಯಕ್ತಿ ಸುಂದರವಾಗಿರುವ ಹೆಣ್ಣನ್ನು ಮದುವೆಯಾದರೆ ತನ್ನ ಹೆಂಡತಿಯ ಜೀವನವನ್ನೂ ನರಕ ಮಾಡಿಬಿಡುತ್ತಾನೆ.

ಅತಿಯಾದ ಕಾಮ

ಅತಿಯಾದ ಕಾಮ ಹೊಂದಿರುವ ಪುರುಷರು ಸುಂದರ ಮಹಿಳೆಯನ್ನು ಮದುವೆಯಾದರೆ ಇವರು ಹೆಂಡತಿಯ ಸುತ್ತವೇ ಸುತ್ತುತ್ತಿರುತ್ತಾರೆ ಮತ್ತು ಪ್ರಮುಖ ವಿಷಯಗಳನ್ನು ನಿರ್ಲಕ್ಷ್ಯಿಸುತ್ತಾರೆ.

ಅಸಭ್ಯ ವರ್ತನೆ

ಅಸಭ್ಯ ವರ್ತನೆಯನ್ನು ತೋರುವವನು ಸುಂದರ ಹೆಣ್ಣನ್ನು ಮದುವೆಯಾದರೆ ಆಕೆಯ ಜೀವನವೇ ನರಕವಾಗುತ್ತದೆ.

ಅಸೂಯೆ ಹೊಂದಿರುವವರು

ಅಸೂಯೆ ಭಾವವನ್ನು ಹೊಂದಿರುವವರು ಸುಂದರ ಹೆಣ್ಣನ್ನು ಮದುವೆಯಾಗಬಾರದು ಏಕೆಂದರೆ  ಅವರು ಹೆಂಡತಿಯ ಸೌಂದರ್ಯದ ಬಗ್ಗೆ ಅಸೂಯೆ ಪಡುವ ಸಾಧ್ಯತೆ ಇರುತ್ತದೆ.