Pic Credit: pinterest
By Malashree anchan
01 July 2025
ಕೆಲವರಿಗೆ ಸಿಕ್ಕಾಪಟ್ಟೆ ಕೂದಲು ಉದುರುವಂತಹ ಸಮಸ್ಯೆ ಇರುತ್ತದೆ. ಮುಖ್ಯವಾಗಿ ನೀವು ಮಾಡುವಂತಹ ಕೆಲವೊಂದು ತಪ್ಪು ಕೆಲಸಗಳೇ ಈ ಸಮಸ್ಯೆಗೆ ಪ್ರಮುಖ ಕಾರಣವಂತೆ.
ಕೆಲವರು ಶ್ಯಾಂಪೂ ಇತ್ಯಾದಿಗಳನ್ನು ಬಳಸಿ ಕೂದಲನ್ನು ಅತಿಯಾಗಿ ತಿಕ್ಕಿ ಸ್ವಚ್ಛಗೊಳಿಸುತ್ತಾರೆ. ಇದರಿಂದ ನೆತ್ತಿ ಒಣಗಿ, ಕೂದಲು ಉದುರಲು ಪ್ರಾರಂಭವಾಗುತ್ತದೆ.
ಕೆಲವರು ಸ್ಟೈಲಿಂಗ್‌ಗಾಗಿ ಬ್ಲೋ ಡ್ರೈಯಿಂಗ್, ಹೇರ್ ಸ್ಟ್ರೈಟನಿಂಗ್‌ಗಳನ್ನು ಹೆಚ್ಚು ಬಳಸುತ್ತಾರೆ. ಇವುಗಳ ಅತಿಯಾದ ಶಾಖ ಕೂಡಾ ಕೂದಲು ಉದುರುವಿಕೆಗೆ ಒಂದು ಪ್ರಮುಖ ಕಾರಣ.
ಒಂದಷ್ಟು ಜನರಿಗೆ ಒದ್ದೆ ಕೂದಲನ್ನು ಬಾಚುವ ಅಭ್ಯಾಸವಿರುತ್ತದೆ. ಈ ತಪ್ಪಿನಿಂದಲೂ ಕೂದಲು ಬೇಗ ಉದುರುವ ಸಾಧ್ಯತೆ ಹೆಚ್ಚಿರುತ್ತದೆ.
ರಾಸಾಯನಿಕಯುಕ್ತ ಶಾಂಪೂ, ಕಂಡೀಷನರ್, ಹೇರ್ ಸ್ಪ್ರೇ, ಜೆಲ್ ಇವುಗಳ ಅತಿಯಾದ ಬಳಕೆಯಿಂದಲೂ ಕೂದಲು ದುರ್ಬಲಗೊಂಡು ಉದುರಿ ಹೋಗುತ್ತವೆ.
ಸರಿಯಾದ, ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವನೆ ಮಾಡುವ ಬದಲು ಕಳಪೆ ಮಟ್ಟದ ಆಹಾರ ಸೇವನೆ ಮಾಡುವುದರಿಂದಲೂ ಕೂದಲು ಉದುರುತ್ತವೆ.
ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ, ಸರಿಯಾಗಿ ನೀರು ಕುಡಿಯದಿದ್ದರೂ ಕೂಡಾ ಕೂದಲು ಉದುರುತ್ತವೆ.
ಒರಟಾದ ತಲೆದಿಂಬು ಕವರ್‌ಗಳು ಕೂಡಾ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಹತ್ತಿ, ಸ್ಯಾಟಿನ್‌ನಂತಹ ತಲೆ ದಿಂಬು ಕವರ್‌ಗಳನ್ನು ಬಳಸಿ.