Pic Credit: pinterest
By Malashree anchan
16 September 2025
ಮನೆಯ ಹತ್ತಿರ ಒಂದು ಸಣ್ಣ ಕೊಳ ಇತ್ಯಾದಿ ನೀರಿನ ಮೂಲಗಳಿದ್ದರೆ ಅವು ಹಾವುಗಳಿಗೆ ವಾಸಿಸಲು ಉತ್ತಮ ಸ್ಥಳವಾಗಿದ್ದು, ಆ ಕಾರಣಕ್ಕೆ ಹಾವುಗಳು ಬರುತ್ತವೆ.
ಕೊಳಗಳಲ್ಲಿ ಕಂಡುಬರುವ ಕೀಟಗಳು ಮತ್ತು ಕಪ್ಪೆಗಳು ಹಾವುಗಳ ಮುಖ್ಯ ಆಹಾರವಾಗಿದೆ. ಅಲ್ಲದೆ, ಕೊಳಗಳಲ್ಲಿನ ಕಮಲ, ಲಿಲ್ಲಿ ಮುಂತಾದ ಸಸ್ಯಗಳು ಸಹ ಹಾವುಗಳನ್ನು ಆಕರ್ಷಿಸುತ್ತವೆ.
ದಟ್ಟವಾದ ಪೊದೆ ಹಾವುಗಳಿಗೆ ವಾಸಿಸಲು ಉತ್ತಮ ಸ್ಥಳವಾಗಿದ್ದು, ಹಾಗಾಗಿ ಮನೆಯ ಬಳಿ ಪೊದೆಗಳಿದ್ದರೆ ಅವುಗಳನ್ನು ಅದಷ್ಟು ನಾಶ ಮಾಡಿ, ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ.
ದೊಡ್ಡ ಪೊದೆಯಂತಿರುವ ಹಾಗೂ ಹೂಬಿಡುವ ಸಸ್ಯಗಳು ಸಣ್ಣ ಪ್ರಾಣಿಗಳು, ಪಕ್ಷಿಗಳು ಮತ್ತು ಕೀಟಗಳನ್ನು ಆಕರ್ಷಿಸುತ್ತವೆ. ಇವೆಲ್ಲವನ್ನೂ ಹುಡುಕಿಕೊಂಡು ಹಾವುಗಳು ಬರುತ್ತವೆ.
ಹಾವುಗಳಿಗೆ ಶಾಖದಿಂದ ತಪ್ಪಿಸಿಕೊಳ್ಳಲು ತೇವಾಂಶವುಳ್ಳ ಸ್ಥಳ ಬೇಕು. ಹಾಗಾಗಿ ಅವುಗಳು ಎಲೆಗಳ ರಾಶಿಯಲ್ಲಿ ಬಂದು ಸೇರುತ್ತವೆ.
ಸೇವಂತಿಗೆ, ಮಲ್ಲಿಗೆ ಮುಂತಾದ ಪರಿಮಳಯುಕ್ತ ಸಸ್ಯಗಳು ಸಹ ಹಾವುಗಳನ್ನು ಆಕರ್ಷಿಸುತ್ತವೆ. ಈ ಸಸ್ಯಗಳ ಸುತ್ತಲೂ ಹುಲ್ಲು ಅಥವಾ ಎಲೆಗಳ ರಾಶಿಗಳು ಬೆಳೆಯದಂತೆ ನೋಡಿಕೊಳ್ಳಿ.
ಮನೆ ಪಕ್ಕ ಅಲ್ಲಲ್ಲಿ ಕೊಳೆಯುತ್ತಿರುವ ತ್ಯಾಜ್ಯಗಳು ಸಹ ಹಾವುಗಳನ್ನು ಸುಲಭವಾಗಿ ಆಕರ್ಷಿಸುತ್ತದೆ. ಹಾಗಾಗಿ ಸ್ವಚ್ಛತೆಯ ಬಗ್ಗೆ ಗಮನವಿರಲಿ.
ಸರ್ಪಗಂಧ, ಲ್ಯಾವೆಂಡರ್, ಪುದೀನ, ನಿಂಬೆ ಹುಲ್ಲು ಇತ್ಯಾದಿ ಗಿಡಗಳನ್ನು ಮನೆ ಸುತ್ತಲೂ ಬೆಳೆಸುವ ಮೂಲಕ ಹಾವುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.