08 Dec 2025

Pic credit - Pintrest

Author: Akshay Pallamjalu 

ಮಲಗಿದ ತಕ್ಷಣ ನಿದ್ರೆ ಬರಲು ನೀವು ಅನುಸರಿಸಬೇಕಾದ ಸಲಹೆಗಳಿವು

ಬೆಳಕು ನಿಮ್ಮ ಸಿರ್ಕಾಡಿಯನ್‌ ಲಯವನ್ನು ಅಡ್ಡಿಪಡಿಸುತ್ತದೆ. ಕೊಠಡಿ ಕತ್ತಲೆಯಾಗಿದ್ದರೆ, ನೀವು ಬೇಗ ನಿದ್ರಿಸುತ್ತೀರಿ. ಹಾಗಾಗಿ ಮಲಗುವ ಕೋಣೆ ಕತ್ತಲೆಯಿಂದಿರುವಂತೆ ನೋಡಿಕೊಳ್ಳಿ.

ಲೈಟ್‌ ಆಫ್‌ ಮಾಡಿ

Pic credit - Pintrest

ಮಲಗುವ ಒಂದು ಗಂಟೆ ಮೊದಲು ನೀವು ಫೋನ್‌ ನೋಡುವುದನ್ನು ನಿಲ್ಲಿಸಿ. ಫೋನ್‌ ಮೆಲಟೋನಿನ್‌ ಉತ್ಪಾದನೆಗೆ ಅಡ್ಡಿಪಡಿಸಬಹುದು. ಇದು ನಿದ್ರೆ ಮಾಡಲು ಕಷ್ಟವಾಗುತ್ತದೆ.

ಮೊಬೈಲ್‌ ನೋಡಬೇಡಿ

Pic credit - Pintrest

ರಾತ್ರಿ ಮಲಗುವ ಮುನ್ನ ನಿಮ್ಮಿಷ್ಟದ  ಪುಸ್ತಕ ಓದಿ. ಇದರಿಂದ ಮನಸ್ಸು ಹಗುರವಾಗುತ್ತದೆ. ನೀವು ಬೇಗನೆ ನಿದ್ರೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಪುಸ್ತಕ ಓದಿ

Pic credit - Pintrest

ಮಲಗುವ ಮುನ್ನ 5 ನಿಮಿಷಗಳ ಕಾಲ ಧ್ಯಾನ ಮಾಡಿ. ನಿಮ್ಮ ಉಸಿರಾಟದ ಮೇಲೆ ಗಮನಹರಿಸಿ. ಇದು ನಿಮಗೆ ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

ಧ್ಯಾನ

Pic credit - Pintrest

ರಾತ್ರಿ ಮಲಗುವ ಮುನ್ನ ಅರೋಮಾಥೆರಪಿಯನ್ನು ಅನುಸರಿಸಿ. ಇದು ಮನಸ್ಸನ್ನು ಶಾಂತವಾಗಿಸುತ್ತದೆ ಮತ್ತು ಇದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಅರೋಮಾಥೆರಪಿ

Pic credit - Pintrest

ಸಂಗೀತ ಕೇಳುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ, ಅಲ್ಲದೆ  ನಿದ್ರಾಹೀನತೆ ಕಡಿಮೆಯಾಗುತ್ತದೆ. ನೀವು ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

ಸಂಗೀತ ಆಲಿಸಿ

Pic credit - Pintrest

ಮಲಗುವ ಮುನ್ನ ಬಿಸಿನೀರಿನ ಸ್ನಾನ ಮಾಡಿ, ಇದು ಸ್ನಾಯುಗಳು ಸಡಿಲಗೊಳ್ಳುತ್ತವೆ. ದೇಹದ ಉಷ್ಣತೆ ಚೆನ್ನಾಗಿರುತ್ತದೆ, ಇದು ನಿಮಗೆ ಬೇಗನೆ ನಿದ್ರಿಸಲು ಸಹಾಯ ಮಾಡುತ್ತದೆ.

ಬಿಸಿ ನೀರಿನ ಸ್ನಾನ

Pic credit - Pintrest

ಮಲಗುವ ಕೋಣೆ, ಹಾಸಿಗೆ, ದಿಂಬಿನ ಕವರ್‌, ಕಂಬಳಿ ಎಲ್ಲವೂ ಫ್ರೆಶ್‌ ಆಗಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಇದು ನಿಮಗೆ ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

ಸ್ವಚ್ಛತೆ

Pic credit - Pintrest