ಮೊಬೈಲ್‌ಗೆ ಈ ವಾಲ್‌ಪೇಪರ್‌ ಹಾಕಿದ್ರೆ ನಿಮ್ಗೆ ಅದೃಷ್ಟ ಗ್ಯಾರಂಟಿ

Pic Credit: pinterest

By Malashree anchan

2 August 2025 

ಓಡುವ ಕುದುರೆ

ಓಡುವ ಕುದುರೆಗಳ ಚಿತ್ರವನ್ನು ನೀವು ವಾಲ್‌ಪೇಪರ್ ಹಾಕಬಹುದು ಇದು ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಶಕ್ತಿಯನ್ನು ತರುತ್ತದೆ.

ಮೇಣದ ಬತ್ತಿ

ಮೇಣದಬತ್ತಿಗಳು ಅಥವಾ ದೀಪಗಳು ಬೆಳಕಿನ ಸಂಕೇತಗಳಾಗಿವೆ. ಈ ಚಿತ್ರವನ್ನು ವಾಲ್‌ಪೇಪರ್‌ ಹಾಕಬಹುದು. ಇದು ಜೀವನದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ.

ಗುಲಾಬಿ ಹೂವು

ದಾಂಪತ್ಯದಲ್ಲಿ ಸಮಸ್ಯೆಗಳಿದ್ದರೆ,  ಫೋನ್‌ನಲ್ಲಿ ಗುಲಾಬಿ ಹೂವಿನ ಚಿತ್ರವನ್ನು ವಾಲ್‌ಪೇಪರ್  ಹಾಕಿ. ಇದು ಅಡೆತಡೆಗಳನ್ನು ನಿವಾರಿಸಿ, ದಾಂಪತ್ಯ  ಜೀವನದಲ್ಲಿ ಪ್ರೀತಿಯನ್ನು ತರುತ್ತದೆ.

ಮೆಟ್ಟಿಲು ಹತ್ತುವ ವ್ಯಕ್ತಿ

ನೀವು ಪ್ರಗತಿ ಸಾಧಿಸಲು ಸಾಧ್ಯವಾಗದಿದ್ದರೆ, ಮೆಟ್ಟಿಲುಗಳನ್ನು ಹತ್ತುವ ವ್ಯಕ್ತಿಯ ಚಿತ್ರವನ್ನು ನಿಮ್ಮ ಫೋನ್‌ನ ವಾಲ್‌ಪೇಪರ್ ಆಗಿ ಹಾಕಿ. ಇದು ಸಕಾರಾತ್ಮಕತೆಯನ್ನು ತರುವುದು ಗ್ಯಾರಂಟಿ.

ಬ್ಲೆಸ್ಸಿಂಗ್‌ ಬುದ್ಧ

ಬ್ಲೆಸ್ಸಿಂಗ್‌ ಬುದ್ಧನ ಪೋಟೋವನ್ನು ವಾಲ್‌ಪೇಪರ್  ಹಾಕುವುದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಹಾದಿ ಸುಗಮವಾಗುತ್ತದೆ.

ನವಿಲು

ನೀವು ಜೀವನದಲ್ಲಿ ಹೆಸರು, ಗೌರವ, ಖ್ಯಾತಿ ಮತ್ತು ಸೌಂದರ್ಯವನ್ನು ಬಯಸಿದರೆ, ನೀವು ನಿಮ್ಮ ಫೋನ್‌ನಲ್ಲಿ ನವಿಲಿನ ಚಿತ್ರದ ವಾಲ್‌ಪೇಪರ್ ಹಾಕಬಹುದು.

ಕಮಲದ ಹೂವು

ನೀವು ವ್ಯವಹಾರದಲ್ಲಿ ಪದೇ ಪದೇ ನಷ್ಟವನ್ನು ಎದುರಿಸುತ್ತಿದ್ದರೆ, ವ್ಯವಹಾರದಲ್ಲಿ ಯಾವುದೇ ಪ್ರಗತಿ ಸಾಧಿಸದಿದ್ದರೆ ನೀವು  ವಾಲ್‌ಪೇಪರ್‌ನಲ್ಲಿ ಕಮಲದ ಚಿತ್ರವನ್ನು ಹಾಕುವುದು ಸೂಕ್ತ.

ಉದಯಿಸುತ್ತಿರುವ ಸೂರ್ಯ

ನೀವು ಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯಲು ಬಯಸಿದರೆ, ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ಮೊಬೈಲ್‌ ವಾಲ್‌ಪೇಪರ್‌ ಹಾಕಿ.