Pic Credit: pinterest
By Malashree anchan
8 September 2025
ನೀವು ನಿಮ್ಮ ಸಂಗಾತಿಯ ಪ್ರಯತ್ನಗಳನ್ನು ನಿರ್ಲಕ್ಷ್ಯಿಸಲು ಪ್ರಾರಂಭಿಸಿದಾಗ, ಅವರನ್ನು ಹಗುರವಾಗಿ ಪರಿಗಣಿಸಿದಾಗ, ಇದರಿಂದ ಸಂಬಂಧದಲ್ಲಿ ಅಂತರ ಸೃಷ್ಟಿಯಾಗುತ್ತದೆ.
ಸಂವಹನ ಅಂತರವು ಸಂಬಂಧವನ್ನು ಹಾಳುಮಾಡಬಹುದು. ಅಲ್ಲದೆ ಸಂವಹನದ ಕೊರತೆಯಿಂದ ಸಂಬಂಧದಲ್ಲಿ ಅಪನಂಬಿಕೆಯೂ ಉಂಟಾಗುತ್ತದೆ.
ಸಣ್ಣ ವಿಷಯಗಳಿಗೆ ಪದೇ ಪದೇ ಅನಗತ್ಯವಾಗಿ ಜಗಳವಾಡುವುದರಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು.
ನೀವು ನಿಮ್ಮ ಸಂಗಾತಿಯನ್ನು ಗೌರವಿಸದಿದ್ದರೆ, ಇತರರ ಮುಂದೆ ಅವರನ್ನು ಕೀಳಾಗಿ ನೋಡಿದರೆ ಖಂಡಿತವಾಗಿಯೂ ಸಂಬಂಧ ಎನ್ನುವಂತಹದ್ದು ಶಾಶ್ವತವಾಗಿ ಉಳಿಯುವುದಿಲ್ಲ.
ನೀವು ನಿಮ್ಮ ಸಂಗಾತಿಯ ನ್ಯೂನತೆಗಳು ಮತ್ತು ತಪ್ಪುಗಳ ಬಗ್ಗೆಯೇ ಹೆಚ್ಚು ಮಾತನಾಡಿದಾಗ ಸಂಬಂಧದಲ್ಲಿ ನಕಾರಾತ್ಮಕತೆ ಎನ್ನುವುಂತಹದ್ದು ಸೃಷ್ಟಿಯಾಗುತ್ತದೆ.
ನೀವು ನಿಮ್ಮ ಸಂಗಾತಿಯನ್ನು ಅನುಮಾನಿಸಲು ಪ್ರಾರಂಭಿಸಿದರೆ, ಅವರ ಮೇಲೆ ನಿಯಂತ್ರಣ ಹೇರಲು ಬಯಿಸಿದರೆ ಇದರಿಂದ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ.
ನೀವು ಯಾವಾಗಲೂ ನಿಮ್ಮ ಸಂಗಾತಿಯನ್ನು ಟೀಕಿಸಿದರೆ ಮತ್ತು ಅವರ ಒಳ್ಳೆಯತನವನ್ನು ನಿರ್ಲಕ್ಷಿಸಿದರೆ, ಇದು ಸಂಬಂಧದ ಮಾಧುರ್ಯವನ್ನು ಕೊನೆಗೊಳಿಸಬಹುದು.
ಅನುಮಾನವೆಂಬ ಪಿಶಾಚಿ ಸುಂದರ ಸಂಬಂಧವನ್ನು ಹಾಳು ಮಾಡುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿಯನ್ನು ಅನುಮಾನಿಸಲು ಹೋಗದಿರಿ.