ಅತಿಯಾದ ಮೊಬೈಲ್‌ ಬಳಕೆ ತಪ್ಪಿಸಲು ಹೀಗೆ ಮಾಡಿ
Tv9 Kannada Logo

ಅತಿಯಾದ ಮೊಬೈಲ್‌ ಬಳಕೆ ತಪ್ಪಿಸಲು ಹೀಗೆ ಮಾಡಿ

Pic Credit: pinterest

By Malashree anchan

01 July 2025

ಅತಿಯಾದ ಮೊಬೈಲ್‌ ಬಳಕೆ ಒಳ್ಳೆಯದಲ್ಲ. ಹೀಗಿರುವಾಗ ಈ ಒಂದಷ್ಟು ಸಲಹೆಗಳನ್ನು ಪಾಲಿಸುವ ಮೂಲಕ ಸ್ಮಾರ್ಟ್‌ಫೋನ್‌ ಬಳಕೆಯಿಂದ ದೂರವಿರಬಹುದು.

ಮೊಬೈಲ್‌ ಬಳಕೆ

ಅತಿಯಾದ ಮೊಬೈಲ್‌ ಬಳಕೆ ಒಳ್ಳೆಯದಲ್ಲ. ಹೀಗಿರುವಾಗ ಈ ಒಂದಷ್ಟು ಸಲಹೆಗಳನ್ನು ಪಾಲಿಸುವ ಮೂಲಕ ಸ್ಮಾರ್ಟ್‌ಫೋನ್‌ ಬಳಕೆಯಿಂದ ದೂರವಿರಬಹುದು.

ಹೆಚ್ಚು ನೋಟಿಫಿಕೇಶನ್‌ ಬಂದಾಗ ನಾವು ಮೊಬೈಲ್‌ ಕೂಡ ಜಾಸ್ತಿ ನೋಡುತ್ತೇವೆ. ಆದ್ದರಿಂದ ನೋಟಿಫಿಕೇಶನ್‌ ಆಫ್‌ ಮಾಡಿ, ಇದು ಫೋನ್‌ನಿಂದ ದೂರವಿರಲು ಸಹಕಾರಿ.

ನೋಟಿಫಿಕೇಶನ್‌

ಹೆಚ್ಚು ನೋಟಿಫಿಕೇಶನ್‌ ಬಂದಾಗ ನಾವು ಮೊಬೈಲ್‌ ಕೂಡ ಜಾಸ್ತಿ ನೋಡುತ್ತೇವೆ. ಆದ್ದರಿಂದ ನೋಟಿಫಿಕೇಶನ್‌ ಆಫ್‌ ಮಾಡಿ, ಇದು ಫೋನ್‌ನಿಂದ ದೂರವಿರಲು ಸಹಕಾರಿ.

ಇಂತಿಷ್ಟು ಸಮಯ ಮಾತ್ರ ಮೊಬೈಲ್‌ ವೀಕ್ಷಣೆ ಮಾಡ್ಬೇಕು ಎಂದು ವೀಕ್ಷಣಾ ಅವಧಿಯನ್ನು ಸೆಟ್‌ ಮಾಡಿ. ಈ ತಂತ್ರ ಕೂಡ ಮೊಬೈಲ್‌ ಚಟದಿಂದ ಹೊರ ಬರಲು ಸಹಕಾರಿ.

ವಿಕ್ಷಣಾ ಅವಧಿ

ಇಂತಿಷ್ಟು ಸಮಯ ಮಾತ್ರ ಮೊಬೈಲ್‌ ವೀಕ್ಷಣೆ ಮಾಡ್ಬೇಕು ಎಂದು ವೀಕ್ಷಣಾ ಅವಧಿಯನ್ನು ಸೆಟ್‌ ಮಾಡಿ. ಈ ತಂತ್ರ ಕೂಡ ಮೊಬೈಲ್‌ ಚಟದಿಂದ ಹೊರ ಬರಲು ಸಹಕಾರಿ.

ಊಟ ಮಾಡುವಾಗ ನೋಡ್ಬೇಡಿ

ಊಟ ಮಾಡುವಾಗ, ಎದ್ದ ತಕ್ಷಣ, ಮಲಗುವ ಮುನ್ನ ಇಂತಹ ಸಂದರ್ಭಗಳಲ್ಲೆಲ್ಲಾ ಮೊಬೈಲ್‌ ನೋಡಬೇಡಿ.  ಹೀಗೆ ಮಾಡುವುದರಿಂದ ಮೊಬೈಲ್‌ ಬಳಕೆಯನ್ನು ಕಡಿಮೆ ಮಾಡ್ಬೋದು.

ಫೋನ್‌ ದೂರ ಇಡಿ

ಮೊಬೈಲ್‌ ಹತ್ತಿರದಲ್ಲಿದ್ದಾಗ, ನಾವು ಅದನ್ನು ಜಾಸ್ತಿ ಬಳಕೆ ಮಾಡುತ್ತೇವೆ. ಹೀಗಿರುವಾಗ ಫೋನನ್ನು ಸಾಧ್ಯವಾದಷ್ಟು ನಿಮ್ಮಿಂದ ದೂರವಿಡುವಂತೆ ನೋಡಿಕೊಳ್ಳಿ.

ಹೊಸ ಅಭ್ಯಾಸಗಳು

ಬಿಡುವಿನ ವೇಳೆಯಲ್ಲಿ ಟೈಮ್‌ ಪಾಸ್‌ಗಾಗಿ ಮೊಬೈಲ್‌ ನೋಡುವ ಬದಲು ಪುಸ್ತಕ ಓದುವ, ಚಿತ್ರ ಬಿಡಿಸುವ, ಆಟವಾಡುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ.

ಆಪ್ಲಿಕೇಶನ್‌ ಡಿಲಿಟ್‌ ಮಾಡಿ

ನೀವು ಮೊಬೈಲ್‌ನಲ್ಲಿ ಯಾವ ಆಪ್ಲಿಕೇಶನ್‌ಗಳನ್ನು ಜಾಸ್ತಿ ಬಳಕೆ ಮಾಡ್ತಿರೋ ಅದನ್ನು ಡಿಲಿಟ್‌ ಮಾಡಿ. ಇದರಿಂದಲೂ ಮೊಬೈಲ್‌ ಬಳಕೆಯನ್ನು ಕಡಿಮೆ ಮಾಡಬಹುದು.

ಮಾನಸಿಕ ಸಿದ್ಧತೆ

ಇದಲ್ಲದೆ ನಾನು ಮೊಬೈಲ್‌ ನೋಡಲೇಬಾರದು, ಮೊಬೈಲ್‌ ನೋಡದೆ ಸಂತೋಷದಿಂದ ಇರಬಲ್ಲೇ ಎಂದು ಮಾನಸಿಕವಾಗಿ ಸಿದ್ಧವಾಗುವುದು ಕೂಡಾ ಅಷ್ಟೇ ಮುಖ್ಯ.