Pic Credit: pinterest
By Malashree anchan
09 July 2025
ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ, ಇದರಿಂದ ಅವುಗಳಿಂದ ವಾಸನೆ ಬರುತ್ತವೆ. ಈ ವಾಸನೆ ತಡೆಯಲು ಈ ಸಿಂಪಲ್ ಸಲಹೆ ಪಾಲಿಸಿ.
ಒಗೆಯುವ ಬಟ್ಟೆಗಳನ್ನು ಒಂದೇ ಕಡೆ ರಾಶಿ ಹಾಕಿದರೆ ಇದರಿಂದ ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಬಟ್ಟೆ ವಾಸನೆ ಬರಲು ಆರಂಭಿಸುತ್ತದೆ.
ಬಟ್ಟೆಗಳನ್ನು ಡಿಟೆರ್ಜೆಂಟ್ ಪೌಡರ್ ಹಾಕಿ ಹೆಚ್ಚು ಹೊತ್ತು ನೆನೆಸುವುದು ಒಳ್ಳೆಯದಲ್ಲ. ದೀರ್ಘಕಾಲ ನೆನೆಸಿವುದುದರಿಂದ ಬ್ಯಾಕ್ಟೀರಿಯಾ ಸಂಗ್ರಹವಾಗಿ ಬಟ್ಟೆ ವಾಸನೆ ಬರುತ್ತದೆ.
ಬಟ್ಟೆ ಒಗೆಯುವಾಗ ಡಿಟೆರ್ಜೆಂಟ್ ಜೊತೆ ಅಡುಗೆ ಸೋಡಾವನ್ನು ಸೇರಿಸಿ. ಇದು ಬಟ್ಟೆಯ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಟ್ಟೆ ಒಗೆಯುವಾಗ ನಿಮ್ಮ ಡಿಟೆರ್ಜೆಂಟ್‌ಗೆ ವಿನೆಗರ್ ಸೇರಿಸಿ. ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಬಟ್ಟೆ ವಾಸನೆ ಬರದಂತೆ ತಡೆಯಲು ಸಹಾಯ ಮಾಡುತ್ತದೆ.
ಬಟ್ಟೆ ಒಗೆದ ನಂತರ ಆ ಬಟ್ಟೆಯನ್ನು ಪರಿಮಳಯುತವಾದ ಫ್ಯಾಬ್ರಿಕ್ ಕಂಡೀಷನರ್‌ನಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ. ಇದರಿಂದ ಬಟ್ಟೆಗಳು ಯಾವುದೇ ರೀತಿಯಲ್ಲೂ ವಾಸನೆ ಬರುವುದಿಲ್ಲ.
ಮಳೆಗಾಲದಲ್ಲಿ ನೀವು ತೆರೆದ ಕಿಟಕಿ, ಬಾಲ್ಕನಿ, ಫ್ಯಾನ್ ಅಡಿಯಲ್ಲಿ ಬಟ್ಟೆ ಒಣಗಲು ಬಿಡಿ, ಇದರಿಂದ ಬಟ್ಟೆ ಬೇಗ ಒಣಗುವುದು ಮಾತ್ರವಲ್ಲದೆ, ಕೆಟ್ಟ ವಾಸನೆ ಬಾರದಂತೆ ತಡೆಯುತ್ತದೆ.
ಸ್ವಲ್ಪ ಒಣಗಿದ ತಕ್ಷಣವೇ ಆ ಬಟ್ಟೆಗಳನ್ನು ಮಡಚಿಡಬೇಡಿ. ಇದರಲ್ಲಿ ತೇವಾಂಶ ಹಾಗೆಯೇ ಉಳಿಯುವ ಕಾರಣ ಇದರಿಂದ ವಾಸನೆ ಬರುವ ಸಾಧ್ಯತೆ ಇರುತ್ತದೆ.