Pic Credit: pinterest
By Malashree Anchan
13 May 2025
ಸೊಸೆಯಂದಿರ ಕೆಲವೊಂದು ಗುಣ, ನಡವಳಿಕೆಯ ಕಾರಣದಿಂದಾಗಿ ಮನೆಯ ನೆಮ್ಮದಿ ಹಾಳಾಗುತ್ತಂತೆ.
ಎಲ್ಲರ ಮೇಲೂ ಅಧಿಕಾರ ಚಲಾಯಿಸುವ ಸೊಸೆಯಿದ್ದರೆ, ಅಂತಹ ಮನೆಯಲ್ಲಿ ನೆಮ್ಮದಿ ಅನ್ನೋದೆ ಇರಲ್ಲ.
ಮನೆಯ ಏಳಿಗೆಯನ್ನು ಬಯಸದೆ, ತನ್ನ ಸ್ವಾರ್ಥವನ್ನೇ ಸಾಧಿಸುವಂತ ಸೊಸೆಯಿದ್ದರೆ ಅಂತಹ ಮನೆಯಲ್ಲಿ ನೆಮ್ಮದಿ ಇರುವುದಿಲ್ಲವಂತೆ.
ಮನೆಯಲ್ಲಿ ನಡೆಯುವ ಜಗಳ, ಮನಸ್ತಾಪಗಳ ವಿಷಯವನ್ನು ಹೊರಗಿನವರಲ್ಲಿ ಹೇಳುವಂತಹ ಸೊಸೆಯಿದ್ದರೆ, ನೆಮ್ಮದಿ ಹಾಳಾಗುತ್ತದೆ, ಮನೆಮಂದಿಯ ಮನಸ್ತಾನ ಇನ್ನಷ್ಟು ಹೆಚ್ಚಾಗುತ್ತದೆ.
ಯಾವ ಮಹಿಳೆ ತನ್ನ ಗಂಡನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಳು ಬಯಸುತ್ತಾಳೋ, ಅಂತಹ ಹೆಣ್ಣು ಸೊಸೆಯಾಗಿ ಬಂದರೆ ಮನೆಯ ನೆಮ್ಮದಿ ಹಾಳಾಗುವುದಂತೂ ಖಂಡಿತ.
ಮನೆ ಮಂದಿಯ ಬಗ್ಗೆಯೇ ಅಸೂಯೆಯನ್ನು ಹೊಂದಿರುವ ಸೊಸೆಯಿದ್ದರೆ, ಆ ಮನೆಯಲ್ಲಿ ಸಣ್ಣಪುಟ್ಟ ವಿಷಯಕ್ಕೂ ಕೂಡಾ ಜಗಳ ನಡೆಯುತ್ತವೆ.
ಮನೆ ಮಂದಿಯ ಮಧ್ಯೆಯೇ ಜಗಳವನ್ನು ತಂದಿಡುವ ಗುಣಗಳಿರುವ ಸೊಸೆಯಿದ್ದರೆ, ಆ ಮನೆಯಲ್ಲಿ ಶಾಂತಿ ನೆಲೆಸಲು ಸಾಧ್ಯವೇ ಇಲ್ಲ.
ಮುಖ್ಯವಾಗಿ ಗಂಡನಲ್ಲಿ ಪ್ರತಿಯೊಂದು ವಿಷಯದ ಬಗ್ಗೆಯೂ ಚಾಡಿ ಹೇಳುವ ಸ್ವಭಾವವನ್ನು ಹೊಂದಿರುವ ಸೊಸೆಯಿದ್ದರೆ, ಆ ಮನೆಯಲ್ಲಿ ಯಾವಾಗಲೂ ಮನಸ್ತಾಪಗಳೇ ನಡೆಯುತ್ತಿರುತ್ತವೆ.