Pic Credit: pinterest
By Malashree Anchan
21 june 2025
ಮಳೆಗಾಲದಲ್ಲಿ ಒಗೆದ ಬಟ್ಟೆಗಳು ಒಣಗಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.. ಹಾಗಾಗಿ ಈ ಋತುವಿಗೆ ಸೂಕ್ತವಾದ, ಆರಾಮದಾಯಕವಾದ ಬಟ್ಟೆಗಳನ್ನು ಧರಿಸಬೇಕು.
ಮಳೆಗಾಲದಲ್ಲಿ ರೇಯನ್ ಬಟ್ಟೆಗಳನ್ನು ಧರಿಸುವುದು ಸೂಕ್ತ. ಅರೆ-ಸಂಶ್ಲೇಷಿತ ಬಟ್ಟೆಯಾದ ಇದು ತುಂಬಾನೇ ಹಗುರವಾಗಿರುತ್ತದೆ, ಜೊತೆಗೆ ಬೇಗನೆ ಒಣಗುತ್ತದೆ.
ಮಸ್ಲಿನ್ ಬಟ್ಟೆ ತನ್ನ ಹಗುರ ಮತ್ತು ಮೃದುವಾದ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಇವು ಬೇಗನೆ ಒಣಗುತ್ತವೆ, ಆದ್ದರಿಂದ ಇದು ಮಳೆಗಾಲಕ್ಕೆ ಸೂಕ್ತವಾಗಿವೆ.
ಕ್ರೇಪ್ ಫ್ಯಾಬ್ರಿಕ್ ಬಟ್ಟೆಗಳು ಕೂಡಾ ಮಳೆಗಾಲದಲ್ಲಿ ಧರಿಸಲು ಸೂಕ್ತವಾಗಿದೆ. ರೇಯಾನ್‌ನಂತೆ ಇದು ಕೂಡಾ ತುಂಬಾನೇ ಹಗುರವಾದ ಹಾಗೂ ಬಹು ಬೇಗನೆ ಒಣಗುವ ಬಟ್ಟೆಯಾಗಿದೆ.
ಇದೊಂದು ಸಿಂಥೆಟಿಕ್ ಬಟ್ಟೆಯಾಗಿದ್ದು, ಇದು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಹಾಗಾಗಿ ಈ ಫ್ಯಾಬ್ರಿಕ್ ಮಳೆಗಾಲದಲ್ಲಿ ಧರಿಸಲು ತುಂಬಾನೇ ಸೂಕ್ತವಾಗಿದೆ.
ಲಿನಿನ್ ಬಟ್ಟೆಗಳು ಮಳೆಗಾಲದಲ್ಲಿ ಧರಿಸಲು ಸೂಕ್ತವಾಗಿದೆ. ಈ ಬಟ್ಟೆ ತುಂಬಾನೇ ಹಗುರವಾಗಿದ್ದು, ಒದ್ದೆಯಾದರೆ ಇದು ಬಹು ಬೇಗನೆ ಒಣಗುತ್ತದೆ.
ಮಳೆಗಾಲದಲ್ಲಿ ನೈಲಾನ್ ಫ್ಯಾಬ್ರಿಕ್ ಬಟ್ಟೆಗಳನ್ನು ಸಹ ಧರಿಸಬಹುದು. ಈ ಬಟ್ಟೆಗಳು ಹಗುರ ಮಾತ್ರವಲ್ಲದೆ, ಒದ್ದೆಯಾದರೆ ಬಹುಬೇಗನೆ ಒಣಗುತ್ತವೆ.
ಹತ್ತಿ ಬಟ್ಟೆ ಮಳೆಗಾಲದಲ್ಲಿ ಧರಿಸಲು ಅತ್ಯಂತ ಸೂಕ್ತವಾದ ಬಟ್ಟೆಯಾಗಿದೆ. ಈ ಫ್ಯಾಬ್ರಿಕ್ ತೇವಾಂಶವನ್ನು ಚೆನ್ನಾಗಿ ಹೀರಿಕೊಳ್ಳುವ ಕಾರಣ, ಒದ್ದೆಯಾದರೆ ಬಹು ಬೇಗನೆ ಒಣಗುತ್ತದೆ.