ಸಂಗಾತಿಯನ್ನು ಹಗ್‌ ಮಾಡೋದ್ರಿಂದ ಏನಾಗುತ್ತೆ ಗೊತ್ತಾ?

Pic Credit: pinterest

By Malashree anchan

15 September  2025

ಒತ್ತಡ ನಿವಾರಣೆ

ಅಪ್ಪುಗೆಯು ದೇಹದಲ್ಲಿ ಆಕ್ಸಿಟೋಸಿನ್‌ ಹಾರ್ಮೋನ್‌ ಹೆಚ್ಚಿಸುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಭಾವನಾತ್ಮಕ ಬಂಧ

ಅಪ್ಪುಗೆಯು ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವಿನ ಭಾವನಾತ್ಮಕ ಬಂಧವನ್ನು ಬಲಪಡಿಸುತ್ತದೆ. ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ರೋಗನಿರೋಧಕ ಶಕ್ತಿ

ಸಂಗಾತಿಯನ್ನು ಅಪ್ಪಿಕೊಳ್ಳುವುದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯೂ ಸಹ ಹೆಚ್ಚಾಗುತ್ತದೆಯಂತೆ.

ಒಂಟಿತನದಿಂದ ಮುಕ್ತಿ

ಅಪ್ಪುಗೆಯು ಒಬ್ಬ ವ್ಯಕ್ತಿಗೆ ಸಾಂತ್ವನ ನೀಡುತ್ತದೆ. ಅಲ್ಲದೆ ಸಂಗಾತಿಯನ್ನು ಅಪ್ಪಿಕೊಂಡಾಗ ನಿಮ್ಮ ನಿಮ್ಮ ಒಂಟಿತನ, ದುಃಖ ದೂರವಾಗುತ್ತದೆ.

ಹೃದಯದ ಆರೋಗ್ಯ

ಅಪ್ಪುಗೆಯು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಇದು ಹೃದಯದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಮಾನಸಿಕ ಆರೋಗ್ಯ

ನೀವು ನಿಮ್ಮ ಸಂಗಾತಿಯನ್ನು ತಬ್ಬಿಕೊಂಡಾಗ, ಅದು ನಿಮ್ಮಿಬ್ಬರ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ.

ಸಂತೋಷದ ಭಾವನೆ

ಅಪ್ಪುಗೆಯು ನಮ್ಮ ದೇಹದಲ್ಲಿ ಎಂಡಾರ್ಫಿನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಮಗೆ ಸಂತೋಷವನ್ನು ನೀಡುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ.

ಕೋಪ ಶಮನವಾಗುತ್ತದೆ

ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜ. ಆ ಸಮಯದಲ್ಲಿ ಒಂದು ಅಪ್ಪುಗೆ ಕೋಪ ಮತ್ತು ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತದೆ.