Pic Credit: pinterest
By Malashree anchan
23 July 2025
ಬೆಳಗ್ಗೆ ಬೇಗನೆ ಏಳುವುದರಿಂದ ಸಿರ್ಕಾಡಿಯನ್ ಲಯವು (ದಿನಚರ್ಯೆಯ ಲಯ) ಸಕ್ರಿಯಗೊಳ್ಳುತ್ತದೆ, ಇದು ರಾತ್ರಿಯಲ್ಲಿ ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.
ಬೆಳಗ್ಗೆ ಬೇಗ ಏಳುವುದರಿಂದ ಕಾರ್ಟಿಸೋಲ್ ಮಟ್ಟ ಕಡಿಮೆಯಾಗುತ್ತದೆ. ಇದು ನಿಮಗೆ ಶಾಂತವಾಗಿ ಯೋಚಿಸಲು ಅನುವು ಮಾಡಿಕೊಡುತ್ತದೆ.
ಪ್ರತಿದಿನ ಒಂದೇ ಸಮಯದಲ್ಲಿ ಏಳುವುದರಿಂದ ದೇಹದ ಸಿರ್ಕಾಡಿಯನ್ ಲಯ ಮರುಹೊಂದುತ್ತದೆ. ಇದು ದಿನವಿಡೀ ಚೈತನ್ಯಶೀಲವಾಗಿರಲು ಸಹಾಯ ಮಾಡುತ್ತದೆ.
ಬೆಳಗ್ಗೆ ಬೇಗ ಏಳುವುದರಿಂದ ವ್ಯಾಯಮಕ್ಕೆ, ಆರೋಗ್ಯಕರ ಉಪಹಾರ ಸೇವಿಸಲು ಸಮಯ ಸಿಗುತ್ತದೆ.ಈ ವ್ಯಾಯಾಮ, ಆರೋಗ್ಯಕರ ಆಹಾರವು ತೂಕ ಇಳಿಕೆಗೆ ಸಹಕಾರಿ.
ಬೆಳಿಗ್ಗೆ ಬೇಗನೆ ಎದ್ದೇಳುವುದರಿಂದ, ನೀವು ಬೇಗನೆ ಆಹಾರವನ್ನು ಸೇವಿಸುತ್ತೀರಿ, ಇದರಿಂದಾಗಿ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಮುಂಜಾನೆಯ ಸೂರ್ಯನ ಬೆಳಕು ವಿಟಮಿನ್ ಡಿ ಯ ಉತ್ತಮ ಮೂಲವಾಗಿದ್ದು, ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬೆಳಗ್ಗೆ ಬೇಗ ಏಳುವುದರಿಂದ ಎದ್ದೇಳುವುದರಿಂದ ನಿಮ್ಮ ಇಡೀ ತಾಜಾತನದಿಂದ ಕೂಡಿರುತ್ತದೆ ಮತ್ತು ಸಕಾರಾತ್ಮಕತೆಯಿಂದ ಕೂಡಿರುತ್ತದೆ.
ನಿಯಮಿತವಾಗಿ ಬೆಳಗ್ಗೆ ಬೇಗನೆ ಏಳುವುದರಿಂದ ಮೆಲಟೋನಿನ್, ಕಾರ್ಟಿಸೋಲ್ ಮತ್ತು ಸಿರೊಟೋನಿನ್ ಮಟ್ಟ ಸಮತೋಲನದಲ್ಲಿರುತ್ತದೆ.