ವಿವಾಹಿತ ಪುರುಷರು ಅನ್ಯ ಮಹಿಳೆಯ ಆಕರ್ಷಣೆಗೆ ಒಳಗಾಗುವುದೇಕೆ?

Pic Credit: pinterest

By Malashree anchan

29 July 2025

ಭಾವನಾತ್ಮಕ ಬೆಂಬಲಕ್ಕಾಗಿ

ಒಬ್ಬ ಪುರುಷ, ಸಂಸಾರದ ಗೋಳು ಸೇರಿದಂತೆ ತನ್ನ ವೈವಾಹಿಕ ಜೀವನದಲ್ಲಿ ಅತೃಪ್ತನಾದಾಗ, ಅವನು ಭಾವನಾತ್ಮಕ ಬೆಂಬಲಕ್ಕಾಗಿ ಅನ್ಯ ಮಹಿಳೆಯ ಮೋಹಕ್ಕೆ ಸಿಲುಕಿವ ಸಾಧ್ಯತೆ ಇರುತ್ತದೆ.

ದೈಹಿಕ  ಅತೃಪ್ತಿ

ಗಂಡ ಹೆಂಡತಿಯ ನಡುವಿನ ದೈಹಿಕ ಸಂಬಂಧ ತೃಪ್ತಿಕರವಾಗಿಲ್ಲದಿದ್ದರೂ, ಗಂಡನಿಗೆ ಸಂಬಂಧದಲ್ಲಿನ ಆಸಕ್ತಿ ಕಡಿಮೆಯಾಗುತ್ತದೆ. ಆತ ಅನ್ಯ ಮಹಿಳೆಯತ್ತ ಆಕರ್ಷಿತನಾಗುತ್ತಾನೆ.

ಮಕ್ಕಳ ಕಾರಣ

ಹೆಂಡತಿ ತನ್ನೆಲ್ಲಾ ಗಮನವನ್ನು ಮಗುವಿನ ಮೇಲೆ ಕೇಂದ್ರೀಕರಿಸಿದಾಗ, ನನ್ನೊಂದಿಗೆ ಆಕೆ ಸಮಯ ಕಳೆಯುವುದಿಲ್ಲವೆಂದು ಗಂಡ ಇನ್ನೊಬ್ಬಳ ಮೋಹಕ್ಕೆ ಬೀಳುತ್ತಾನೆ.

ಇತರರೊಂದಿಗೆ ಹೋಲಿಕೆ

ಕೆಲ ಪುರುಷರು ತಮ್ಮ ಹೆಂಡತಿಯನ್ನು ಇತರ ಮಹಿಳೆಯೊಂದಿಗೆ ಹೋಲಿಕೆ ಮಾಡುತ್ತಾರೆ. ಇತತರ ಮೇಲಿನ ಬಾಹ್ಯ ಆಕರ್ಷಣೆಯೂ ವಿವಾಹೇತರ ಸಂಬಂಧಕ್ಕೆ ಕಾರಣ.

ಪ್ರೀತಿ ಸಿಗದೆ ಹೋದಾಗ

ಹೆಂಡತಿಯ ಕಡೆಯಿಂದ ಯಾವುದೇ ಪ್ರೀತಿ ಸಿಗದೆ ಹೋದರೆ, ವಿವಾಹಿತ ಪುರುಷರು ಇನ್ನೊಬ್ಬಳ ಮೋಹಕ್ಕೆ ಬೀಳುತ್ತಾರಂತೆ.

ಸಂವಹನದ ಕೊರತೆ

ಗಂಡ ಮತ್ತು ಹೆಂಡತಿಯ ನಡುವಿನ ಸಂವಹನ ಕಡಿಮೆಯಾದಾಗ ಅಥವಾ ಭಾವನಾತ್ಮಕ ಬಾಂಧವ್ಯ ಕಡಿಮೆಯಾದಾಗ, ಪುರುಷರು ಇನ್ನೊಬ್ಬಳ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇರುತ್ತದೆ.

ಹೊಸತನದ ಹುಡುಕಾಟ

ಸಮಯ ಕಳೆದಂತೆ ಕೆಲ ಪುರುಷರು ದೈನಂದಿನ ಜೀವನದಲ್ಲಿ ನಿರಾಸಕ್ತಿ ಹೊಂದುತ್ತಾರೆ.  ಅಂತಹ ಪರಿಸ್ಥಿತಿಯಲ್ಲಿ, ಅವರು ಸಂಬಂಧಗಳಲ್ಲಿ ಹೊಸತನ ಹುಡುಕಲು ಪ್ರಾರಂಭಿಸುತ್ತಾರೆ.

ಸಾಮಾಜಿಕ ಮಾಧ್ಯಮ

ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆಯು ಪುರುಷರನ್ನು  ಇತರ ಮಹಿಳೆಯರ ಆಕರ್ಷಣೆಗೆ ಒಳಗಾಗುವಂತೆ ಪ್ರೇರೇಪಿಸುತ್ತದೆ.