Pic Credit: pinterest
By Preeti Bhat
03 June 2025
ಪೋಷಕರು ತಮ್ಮ ಮಕ್ಕಳ ಪ್ರೇಮ ವಿವಾಹಕ್ಕೆ ಸಾಮಾನ್ಯವಾಗಿ ಒಪ್ಪಿಗೆ ನೀಡೋದೇ ಇಲ್ಲ.
ಹೆಚ್ಚಿನ ಮನೆಗಳಲ್ಲಿ ಪೋಷಕರು ಲವ್ ವಿಷ್ಯ ಗೊತ್ತಾದ್ರೆ ರಂಪ ರಾಮಾಯಣ ಮಾಡಿ ಬಿಡುತ್ತಾರೆ.
ನಿಮಗೂ ಕೂಡಾ ನಿಮ್ ಪ್ರೀತಿ ವಿಷ್ಯಾನ ಮನೆಯಲ್ಲಿ ಹೇಗಪ್ಪಾ ಹೇಳೋದು, ಮನೆಯವರನ್ನು ಹೇಗೆ ಒಪ್ಪಿಸುವುದು ಎಂಬ ತಲೆ ಬಿಸಿ ಆಗ್ತಿದ್ಯಾ?
ಹಾಗಿದ್ರೆ ಟೆನ್ಶನ್ ಮಾಡ್ಕೋಬೇಡಿ, ಈ ಕೆಲವೊಂದು ಸಲಹೆಗಳನ್ನು ಅನುಸರಿಸಿ, ಪೋಷಕರು ನಿಮ್ ಲವ್‌ಗೆ ಗ್ರೀನ್ ಸಿಗ್ನಲ್ ನೀಡುವಂತೆ ಮಾಡಿ.
ನಿಮಗೆ ಸಹೋದರ ಅಥವಾ ಸಹೋದರಿಯರಿದ್ದರೆ, ನಿಮ್ಮ ಹೆತ್ತವರನ್ನು ಮನವೊಲಿಸಲು ಅವರ ಸಹಾಯ ಪಡೆಯಿರಿ.
ಸಂಗಾತಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ನಿಮ್ಮ ಆಯ್ಕೆ ಸರಿಯಾಗಿದೆ ಎಂಬುದನ್ನು ನಿಮ್ಮ ಒಡಹುಟ್ಟಿದವರ ಮುಖಾಂತರ ಪೋಷಕರಿಗೆ ತಿಳಿಸಿ.
ನಿಮ್ಮ ಕುಟುಂಬದಲ್ಲಿ ಯಾರಾದರೂ ಪ್ರೇಮ ವಿವಾಹವಾಗಿದ್ದರೆ, ಅವರು ಎಷ್ಟು ಅನ್ಯೋನ್ಯವಾಗಿದ್ದಾರೆ ಎಂಬ ಉದಾಹರಣೆ ನೀಡಿ.
ಈ ರೀತಿ ಮನೆಯವರ ವಿಶ್ವಾಸ ಗಳಿಸಿ, ಅವರು ನಿಮ್ಮ ಪ್ರೀತಿಗೆ ಒಪ್ಪಿ ನೀಡುವಂತೆ ಮಾಡಬಹುದು.