Pic Credit: pinterest
By Malashree anchan
07 July 2025
ಕೆಲಸದ ಜೊತೆ ಜೊತೆಗೆ ಹೆಚ್ಚುವರಿ ಆದಾಯ ಗಳಿಸಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತೆ. ಹೀಗೆ ಹೆಚ್ಚುವರಿ ಹಣ ಗಳಿಸಲು ಈ ಟಿಪ್ಸ್ ಪಾಲಿಸಿ.
ನೀವು ನಿಮ್ಮದೇ ಯೂಟ್ಯೂಬ್ ಚಾನೆಲ್ ತೆರೆಯಬಹುದು. ಅಡುಗೆ, ಟ್ರಾವೆಲ್, ಲೈಫ್‌ಸ್ಟೈಲ್ ಇತ್ಯಾದಿ ವ್ಲಾಗ್‌ಗಳನ್ನು ಮಾಡುವ ಮೂಲಕ ನೀವು ಸುಲಭ ರೀತಿಯಲ್ಲಿ ಹಣ ಗಳಿಸಬಹುದು.
ನೀವು ಕ್ಲಿಕ್ ಮಾಡಿದ ಫೋಟೋಗಳನ್ನು ಶಟರ್‌ಸ್ಟಾಕ್, ಅಡೋಬ್ ಸ್ಟಾಕ್‌ನಂತಹ ಸ್ಟಾಕ್ ಫೋಟೋ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡಿಯೂ ಹಣ ಗಳಿಸಬಹುದು.
ಬ್ಯಾಂಕ್ ಸ್ಥಿರ ಠೇವಣಿಗಳ ಮೂಲಕ ನೀವು ಬಡ್ಡಿಯ ರೂಪದಲ್ಲಿ ಮಾಸಿಕ ಆದಾಯವನ್ನು ಗಳಿಸಬಹುದು.
ನೀವು ಲಾಭದಾಯಕ ಕಂಪೆನಿಯ ಷೇರುಗಳಲ್ಲಿ ಹೂಡಿಕೆ ಮಾಡಿದರೆ, ನೀವು ಪ್ರತಿ ವರ್ಷ ಲಾಭಾಂಶದ ರೂಪದಲ್ಲಿ ಹಣವನ್ನು ಗಳಿಸಬಹುದು.
ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ, ನಿಮಗೆ ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತ ಸಿಗುತ್ತದೆ.
ಉಡೆಮಿ, ಟೀಚಬಲ್ ಅಥವಾ ಸ್ಕಿಲ್‌ಶೇರ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಕೌಶಲ್ಯದ ಆಧಾರದ ಮೇಲೆ ನಿಮ್ಮ ಸ್ವಂತ ಆನ್‌ಲೈನ್ ಕೋರ್ಸ್‌ಗಳನ್ನು ನೀವು ರಚಿಸಬಹುದು.
ಕ್ರಾಫ್ಟಿಂಗ್, ಟೈಲರಿಂಗ್ ಇವುಗಳಲ್ಲಿ ಆಸಕ್ತಿ ಇದ್ದರೆ, ಬಟ್ಟೆ, ಕ್ರಾಫ್ಟ್ ವಸ್ತುಗಳನ್ನು ತಯಾರಿಸಿ ಶಾಪಿಫೈ, ಎಟ್ಸಿ ನಂತಹ ವೇದಿಕೆಯನ್ನು ಬಳಸಿಕೊಂಡು ಆನ್‌ಲೈನ್ ಮಾರಾಟ ಮಾಡಬಹುದು.