ಮನೆಯಲ್ಲಿ ಈ ಕೆಲಸ ಮಾಡುವ ಮೂಲಕ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು

Pic Credit: pinterest

By Malashree Anchan

14 May 2025

ಜಿಮ್‌ ವರ್ಕೌಟ್‌ ಬೇಕೆಂದಿಲ್ಲ

ಕೆಲವರು ಜಿಮ್‌ ವರ್ಕೌಟ್‌ ಮಾಡುವ ಮೂಲಕ ತೂಕ ಇಳಿಸಿಕೊಳ್ಳುತ್ತಾರೆ. ಆದ್ರೆ ಈ ಕೆಲವು ಮನೆ ಕೆಲಸಗಳನ್ನು ಮಾಡುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

ಸ್ವಚ್ಛತೆ ಕೆಲಸ

ನೆಲ ಒರೆಸುವುದು, ಗುಡಿಸುವುದು, ಪಾತ್ರೆ ತೊಳೆಯುದು ಇಂತಹ ಮನೆ ಕೆಲಸಗಳನ್ನು ಪ್ರತಿನಿತ್ಯ ಮಾಡುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

ಬಟ್ಟೆ ಒಗೆಯಿರಿ

ವಾಷಿಂಗ್‌ ಮಷಿನ್‌ಗಳಲ್ಲಿ ಬಟ್ಟೆ ಒಗೆಯುವ ಬದಲು ನೀವು ಕೈಯಲ್ಲಿಯೇ ಬಟ್ಟೆಯನ್ನು ಒಗೆಯಿರಿ. ಹೀಗೆ ಪ್ರತಿನಿತ್ಯ ಬಟ್ಟೆ ಒಗೆಯುವ ಮೂಲಕವೂ ತೂಕವನ್ನು ಇಳಿಸಿಕೊಳ್ಳಬಹುದು.

ಮೆಟ್ಟಿಲು ಹತ್ತುವುದು

ಮೆಟ್ಟಿಲು ಹತ್ತಿ ಇಳಿಯುವುದು ಒಂದು ರೀತಿಯ ವ್ಯಾಯಾಮ. ಪ್ರತಿನಿತ್ಯ ಅರ್ಧಗಂಟೆ ಸಮಯವನ್ನು ಮೀಸಲಿಟ್ಟು ಈ ವ್ಯಾಯಮ ಮಾಡುವ ಮೂಲಕ ತೂಕ ಇಳಿಸಿಕೊಳ್ಳಿ.

ನಡಿಗೆ

ಜಿಮ್‌ಗೆ ಹೋಗಲು ಟೈಂ ಇಲ್ಲ ಅಂದ್ರೆ ಪ್ರತಿನಿತ್ಯ ವಾಕಿಂಗ್‌ ಮಾಡಿ. ಈ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕವು ತೂಕ ಇಳಿಸಿಕೊಳ್ಳಬಹುದು.

ತೋಟಗಾರಿಕೆ

ಹೂ ಗಿಡಗಳ ತೋಟವಿದ್ದರೆ ಅವುಗಳನ್ನು ಸ್ವಚ್ಛಗೊಳಿಸುವ ಮೂಲಕ, ಕಳೆ ಕೀಳುವ, ಗಿಡಗಳಿಗೆ ನೀರು ಹಾಕುವ ಕೆಲಸಗಳನ್ನು ಮಾಡುವ ಮೂಲಕ ಕ್ಯಾಲೋರಿಗಳನ್ನು ಸುಡಬಹುದು.

ಮಕ್ಕಳೊಂದಿಗೆ ಆಟ

ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಸಂಜೆ ಹೊತ್ತು ಅವರೊಂದಿಗೆ ಆಟವಾಡುವ ಮೂಲಕವೂ ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು.

ನೃತ್ಯ

ನೀವು ಜಿಮ್‌ಗೆ ಹೋಗದೆ ಸುಲಭವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಮನೆಯಲ್ಲಿ ಪ್ರತಿನಿತ್ಯ ಡ್ಯಾನ್ಸ್‌ ಮಾಡಿ. ಈ ಅಭ್ಯಾಸ ಕೂಡ ತೂಕ ಇಳಿಕೆಗೆ ಸಹಕಾರಿ.