Author: Vivek Biradar

31 March 2025

ಮೈಸೂರು ಚಾಮರಾಜೇಂದ್ರ ಮೃಗಾಲಯದ ವಾರದ ರಜೆ ರದ್ದು

ಸಾಲು ಸಾಲು ರಜೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಮೈಸೂರು ಮೃಗಾಲಯದಲ್ಲಿನ ಪ್ರಾಣಿ ಮತ್ತು ಪಕ್ಷಿ ಸಂಕುಲವನ್ನು ಕಂಡು ಪ್ರವಾಸಿಗರು ಸಂತಸಗೊಂಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮೈಸೂರು ಮೃಗಾಲಯದ ವಾರದ ರಜೆ ರದ್ದಾಗಿದೆ.

ರಜಾ ದಿನವೂ ಪ್ರವಾಸಿಗರ ವೀಕ್ಷಣೆಗೆ ಮೃಗಾಲಯ ಅವಕಾಶ ಮಾಡಿಕೊಟ್ಟಿದೆ.

ಮೈಸೂರು ಮೃಗಾಲಯಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಜನರು ಆಗಮಿಸುತ್ತಾರೆ.