Author: gangadhar saboji

07 May 2025

ಈವರೆಗೆ ಭಾರತ ಮಾಡಿದ ದಾಳಿಗಳಿಗೆ ಯಾವ ಯಾವ ಹೆಸರಿತ್ತು, ಯಾಕೆ?

ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಇಂದು ನಸುಕಿನ ಜಾವ ಏರ್‌ಸ್ಟ್ರೈಕ್​ ಮಾಡಿದೆ. ಆ ಮೂಲಕ ಪೆಹಲ್ಗಾಮ್​​ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ನಮ್ಮ ತಂಟೆಗೆ ಬಂದರೆ ಏನು ಆಗುತ್ತದೆ ಎಂಬುವುದನ್ನು ಭಾರತ ಈ ಮುಂಚೆ ಕೂಡ ತೋರಿಸಿದೆ.

ಇದುವರೆಗೂ ಭಾರತ ಮಾಡಿದ ದಾಳಿಗಳಿಗೆ ಯಾವ ಯಾವ ಹೆಸರಿತ್ತು ಎಂಬ ಮಾಹಿತಿ ಇಲ್ಲಿದೆ.

ಆಪರೇಷನ್ ವಿಜಯ್ (ಕಾರ್ಗಿಲ್ ಯುದ್ಧ)

1999ರಲ್ಲಿ ಕಾರ್ಗಿಲ್ ಯುದ್ಧ ನಡೆದಿತ್ತು. ಸುಮಾರು ಎರಡು ತಿಂಗಳು ನಡೆದ ಈ ಯುದ್ಧದಲ್ಲಿ ಭಾರತೀಯ ಸೇನೆ ವಿಜಯ ಸಾಧಿಸಿತ್ತು. ಈ ಯುದ್ದದಲ್ಲಿ ಹುತಾತ್ಮರಾದ ಸಾಕಷ್ಟು ಯೋಧರ ಗೌರವಾರ್ಥವಾಗಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ. 

ಆಪರೇಷನ್ ಪರಾಕ್ರಮ್

2001ರಲ್ಲಿ ಭಾರತೀಯ ಸಂಸತ್ತಿನ ಮೇಲೆ ಭಯೋತ್ಪಾದಕರಿಂದ ದಾಳಿ ಮಾಡಲಾಗಿತ್ತು. ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು. ಸಂಸತ್ತಿನ ಹೊರಗೆ ಐವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. 

ಆಪರೇಷನ್ ಬಂದರ್

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಬಂದರ್’ ಎಂಬ ಹೆಸರಿನಲ್ಲಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ವೈಮಾನಿಕ ದಾಳಿ ನಡೆಸಿತ್ತು.

ಸರ್ಜಿಕಲ್ ಸ್ಟ್ರೈಕ್‌

ಉರಿಯಲ್ಲಿ ಪಾಕಿಸ್ತಾನಿ ಉಗ್ರರ ದಾಳಿಗೆ 19 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ 2016ರ ಸರ್ಜಿಕಲ್ ಸ್ಟ್ರೈಕ್‌ ಮಾಡಿ ಉಗ್ರರ ಮಟ್ಟಹಾಕಿತ್ತು.

ಆಪರೇಷನ್ ಮೇಘದೂತ್

ಪಾಕಿಸ್ತಾನ ಲಡಾಖ್​ನ ಸಿಯಾಚಿನ್ ನದಿಯನ್ನು ನಿಯಂತ್ರಿಸಲು ಮುಂದಾದಾಗ ಭಾರತೀಯ ಸೇನೆ ಆಪರೇಷನ್ ಮೇಘದೂತ್ ಹೆಸರಿನಲ್ಲಿ ಕಾರ್ಯಾಚರಣೆ ಮಾಡಿ ಪಾಕಿಸ್ತಾನಕ್ಕೆ ಬಿಸಿಮುಟ್ಟಿಸಿತ್ತು. 

ಆಪರೇಷನ್ ಬ್ಲೂ ಸ್ಟಾರ್

ಬಂಡುಕೋರರ ನಾಯಕ ಭಿಂದ್ರನ್‌ವಾಲೆ, ಸಿಖ್ಖರ ಪವಿತ್ರ ಕ್ಷೇತ್ರ ಅಮೃತಸರದ ಸ್ವರ್ಣಮಂದಿರವನ್ನೇ ತನ್ನ ಆಶ್ರಯ ತಾಣವಾಗಿಸಿಕೊಂಡಿದ್ದ. ಆತನನ್ನು ಅಲ್ಲಿಂದ ಹೊರಹಾಕಲು ಭಾರತೀಯ ಸೇನೆ ಆಪರೇಷನ್ ಬ್ಲೂ ಸ್ಟಾರ್ ಮಾಡಿತ್ತು. 

ಆಪರೇಷನ್ ಸಿಂಧೂರ್

ಇದೀಗ ಪಹಲ್ಗಾಮ್​​ ಉಗ್ರರ ದಾಳಿ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನಿ ಉ್ರಗರ ನೆಲೆಗಳ ಮೇಲೆ ದಾಳಿ ಮಾಡಿದೆ. ಇದಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿದೆ.