ಪಾಕಿಸ್ತಾನಕ್ಕೆ ಪ್ರಧಾನಿ ಮೋದಿಯ ಎಚ್ಚರಿಕೆಗಳೇನು?

Author: Sushma Chakre

13 May 2025

ಪಾಕಿಸ್ತಾನಕ್ಕೆ ಮೋದಿ ಸಂದೇಶ

ಭಾರತ-ಪಾಕಿಸ್ತಾನದ ನಡುವಿನ ದಾಳಿಗಳ ನಂತರ ಮೊದಲ ಬಾರಿ ಸೋಮವಾರ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ, ಪಾಕಿಸ್ತಾನಕ್ಕೆ ಖಡಕ್ ಸಂದೇಶ ನೀಡಿದರು.

ಭಾರತ ಗೆದ್ದಿದೆ

ಯುದ್ಧಭೂಮಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದೆ. ಪಾಕಿಸ್ತಾನದಿಂದ ಭಾರತ ಹೇಡಿತನದಿಂದ ವರ್ತಿಸಿಲ್ಲ ಎಂದು ಮೋದಿ ಟೀಕಿಸಿದರು.

ದಾಳಿಗೆ ತಕ್ಕ ತಿರುಗೇಟು

ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದರೆ, ಸೂಕ್ತ ಉತ್ತರ ನೀಡಲಾಗುವುದು. ಉಗ್ರರನ್ನು ಹುಡುಕಿ ಹೊಡೆಯುತ್ತೇವೆ ಎಂದು ಮೋದಿ ಹೇಳಿದರು.

ಬ್ಲಾಕ್​ಮೇಲ್ ನಡೆಯುವುದಿಲ್ಲ

ಭಾರತ ಯಾವುದೇ ಪರಮಾಣು ಬ್ಲ್ಯಾಕ್‌ಮೇಲ್ ಅನ್ನು ಸಹಿಸುವುದಿಲ್ಲ ಎಂದು ಮೋದಿ ಹೇಳಿದರು.

ನೀರು-ನದಿ ಒಟ್ಟಿಗೆ ಹರಿಯದು

ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಮೋದಿ ಸಂದೇಶ ನೀಡಿದ್ದಾರೆ.

ಪಾಕ್ ಜೊತೆ ಬೇರೆ ಮಾತುಕತೆಯಿಲ್ಲ

ಪಾಕಿಸ್ತಾನದೊಂದಿಗೆ ಮಾತುಕತೆ ಇದ್ದರೆ ಅದು ಭಯೋತ್ಪಾದನೆಯ ಮೇಲೆ ಮಾತ್ರ. ಪಾಕಿಸ್ತಾನದೊಂದಿಗೆ ಮಾತುಕತೆ ಇದ್ದರೆ ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿತು ಮಾತ್ರ ಎಂದು ಮೋದಿ ಶಾಕ್ ನೀಡಿದ್ದಾರೆ.

ಮನೆಗೆ ನುಗ್ಗಿ ಹೊಡೆಯುತ್ತೇವೆ

ನಾವು ಉಗ್ರರ ಮನೆಯೊಳಗೆ ನುಗ್ಗಿ ಸಾಯಿಸುತ್ತೇವೆ. ಉಗ್ರರಿಗೆ ಬಾಹ್ಯ ಬೆಂಬಲ ನೀಡುವವರ ವಿರುದ್ಧವೂ ನಮ್ಮ ಸಮರ ಮುಂದುವರೆಯಲಿದೆ ಎಂದು ಮೋದಿ ಹೇಳಿದ್ದಾರೆ.

ಭಯೋತ್ಪಾದನಾ ಕಮಾಂಡರ್‌ಗಳ ನಿರ್ಮೂಲನೆ

ಭಾರತದ ಅತ್ಯಂತ ಬೇಕಾಗಿರುವ ಪಟ್ಟಿಯಲ್ಲಿರುವ ಬಹು ಉನ್ನತ ಪ್ರೊಫೈಲ್ ಭಯೋತ್ಪಾದಕರನ್ನು ಒಂದೇ ರಾತ್ರಿಯಲ್ಲಿ ತಟಸ್ಥಗೊಳಿಸಲಾಯಿತು,

ಜಾಗತಿಕ ಸಂದೇಶ ರವಾನೆ

ಭಾರತಕ್ಕೆ ತನ್ನನ್ನು ರಕ್ಷಿಸಿಕೊಳ್ಳಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ಜಗತ್ತಿಗೆ ತೋರಿಸಿದೆ. ಭಯೋತ್ಪಾದಕರು, ಅವರ ಮಾಸ್ಟರ್‌ಮೈಂಡ್‌ಗಳು ಎಲ್ಲಿಯೂ ಅಡಗಿಕೊಳ್ಳಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ.

ವ್ಯಾಪಕ ಜಾಗತಿಕ ಬೆಂಬಲ

ಹಿಂದಿನ ಸಂಘರ್ಷಗಳಿಗಿಂತ ಭಿನ್ನವಾಗಿ ಈ ಬಾರಿ ಅನೇಕ ಜಾಗತಿಕ ನಾಯಕರು ಸಂಯಮಕ್ಕಾಗಿ ಕರೆ ನೀಡುವ ಬದಲು ಭಾರತವನ್ನು ಬೆಂಬಲಿಸಿದರು.