Myanmar Earthquake (2)

29 ಮಾರ್ಚ್ 2025

Pic credit - X

ಆಪರೇಷನ್ ಬ್ರಹ್ಮ ಎಂದರೇನು? ಇದೇ ಹೆಸರನ್ನು ಆಯ್ಕೆ ಮಾಡಿದ್ದೇಕೆ?

Author: Sushma Chakre

TV9 Kannada Logo For Webstory First Slide
Myanmar Earthquake Operation Brahma

ಮ್ಯಾನ್ಮಾರ್​​ನಲ್ಲಿ ಉಂಟಾದ ಭೂಕಂಪದಿಂದ ಸಾವಿರಾರು ಜನರು ಮೃತಪಟ್ಟಿದ್ದಾರೆ.

Pic credit - X

Myanmar Earthquake Operation Brahma 2

ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನೆರೆಯ ದೇಶಕ್ಕೆ ಸಹಾಯ ಮಾಡಲು ಆಪರೇಷನ್ ಬ್ರಹ್ಮ ಮೂಲಕ ಮೂಲಸೌಕರ್ಯಗಳನ್ನು ರವಾನಿಸಿದೆ.

Pic credit -  X

Myanmar Earthquake Operation Brahma 1

ಆದರೆ, ಮ್ಯಾನ್ಮಾರ್ ಭೂಕಂಪ ಪರಿಹಾರಕ್ಕಾಗಿ ಭಾರತ ಹಿಂದೂ ದೇವರ ಹೆಸರನ್ನು ಏಕೆ ಆರಿಸಿಕೊಂಡಿತು? ಎಂಬ ಬಗ್ಗೆ ಇಂದು ವಿದೇಶಾಂಗ ಸಚಿವಾಲಯ ವಿವರಿಸಿದೆ.

Pic credit -  X

ಭೂಕಂಪ ಪೀಡಿತ ಮ್ಯಾನ್ಮಾರ್ ಅನ್ನು ಬೆಂಬಲಿಸಲು ಭಾರತ 'ಆಪರೇಷನ್ ಬ್ರಹ್ಮ'ವನ್ನು ಪ್ರಾರಂಭಿಸಿದೆ.

Pic credit -  X

ಇದರಡಿ ಟೆಂಟ್​ಗಳು, ಸ್ಲೀಪಿಂಗ್ ಬ್ಯಾಗ್​ಗಳು, ಕಂಬಳಿಗಳು, ತಿನ್ನಲು ಸಿದ್ಧವಾದ ಊಟ, ನೀರು ಶುದ್ಧೀಕರಣ ಯಂತ್ರಗಳು, ನೈರ್ಮಲ್ಯದ ಕಿಟ್‌ಗಳು, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಕಳುಹಿಸಲಾಗಿದೆ.

Pic credit -  X

ಸುಮಾರು 15 ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಿ -130 ಜೆ ವಿಮಾನವು ಇಂದು ಯಾಂಗೋನ್‌ಗೆ ಬಂದಿಳಿದಿದೆ.

Pic credit -  X

"ಆಪರೇಷನ್ ಬ್ರಹ್ಮ" ಹೆಸರಿನ ಹಿಂದಿನ ಕಾರಣವನ್ನು ವಿವರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಬ್ರಹ್ಮನನ್ನು ಸೃಷ್ಟಿಯ ದೇವರು ಎಂದು ಪರಿಗಣಿಸಲಾಗಿದೆ.

Pic credit -  X

ಇದು ಮ್ಯಾನ್ಮಾರ್ ಸರ್ಕಾರ ಮತ್ತು ಅದರ ಜನರಿಗೆ ನೆರವು ನೀಡುವತ್ತ ಗಮನಹರಿಸುವ, ವ್ಯಾಪಕ ವಿನಾಶದ ನಂತರ ತಮ್ಮ ರಾಷ್ಟ್ರವನ್ನು ಪುನರ್ನಿರ್ಮಿಸುವಲ್ಲಿ ಅವರನ್ನು ಬೆಂಬಲಿಸುವ ಭಾರತದ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

Pic credit -  X

"ಇಂದು ನಾವು ಆಪರೇಷನ್ ಬ್ರಹ್ಮವನ್ನು ಪ್ರಾರಂಭಿಸಿದ್ದೇವೆ. ಬ್ರಹ್ಮ ಸೃಷ್ಟಿಯ ದೇವರು, ಈ ಸಮಯದಲ್ಲಿ ನಾವು ಮ್ಯಾನ್ಮಾರ್ ಸರ್ಕಾರಕ್ಕೆ ಮತ್ತು ವಿನಾಶದ ನಂತರ ತಮ್ಮ ದೇಶವನ್ನು ಪುನರ್ನಿರ್ಮಿಸಲು ಮ್ಯಾನ್ಮಾರ್ ಜನರಿಗೆ ಸಹಾಯ ಹಸ್ತ ಚಾಚುತ್ತಿದ್ದೇವೆ" ಎಂದು ಜೈಸ್ವಾಲ್ ಹೇಳಿದರು.

Pic credit -  X

ಶುಕ್ರವಾರ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದ ಹಲವಾರು ಜನರು ಸಾವನ್ನಪ್ಪಿದರು ಮತ್ತು ದೇಶದ ಮಿಲಿಟರಿ ಜುಂಟಾ ಅಂತಾರಾಷ್ಟ್ರೀಯ ಸಹಾಯವನ್ನು ಕೋರಿತು.

Pic credit -  X