23 Aug 2025

Pic credit - Pintrest

Author: Akshatha Vorkady

ಹೊಸ ಒಡವೆಯನ್ನು ಈ ದಿನ ತಪ್ಪಿಯೂ ಧರಿಸಲೇಬೇಡಿ

ಹೊಸ ಒಡವೆಗಳನ್ನು ಧರಿಸುವುದು ಹೆಣ್ಣುಮಕ್ಕಳಿಗೆ ಬಹಳ ವಿಶೇಷ.  ಆದರೆ ಯಾವ ದಿನ ಹೊಸ ಒಡವೆ ಧರಿಸುವುದು ಶುಭ ಎಂಬ ಪ್ರಶ್ನೆ ಅನೇಕರಲ್ಲಿದೆ. 

ಹೊಸ ಒಡವೆ

Pic credit - Pintrest

ಡಾ. ಬಸವರಾಜ್ ಗುರೂಜಿಯವರು ಹೊಸ ಒಡವೆಗಳನ್ನು ಧರಿಸುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ಅಂಶಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. 

ಬಸವರಾಜ್ ಗುರೂಜಿ

Pic credit - Pintrest

ಸೋಮವಾರ ಹೊಸ ಒಡವೆ ಧರಿಸುವುದರಿಂದ ಮನಶಾಂತಿ ಮತ್ತು ಶಾಶ್ವತ ಸುಖ ಲಭಿಸುತ್ತದೆ ಎಂದು ಹೇಳಲಾಗಿದೆ.  ಇದು ಎಲ್ಲಾ ರಾಶಿಗಳಿಗೂ ಅನ್ವಯಿಸುತ್ತದೆ.

ಸೋಮವಾರ

Pic credit - Pintrest

ಮಂಗಳವಾರ ಹೊಸ ಒಡವೆ ಧರಿಸುವುದು ಕಲಹಗಳಿಗೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.  ಹೀಗಾಗಿ ಈ ದಿನ ಹೊಸ ಒಡವೆ ಧರಿಸುವುದು ಅಷ್ಟು ಶುಭಕರವಲ್ಲ.

ಮಂಗಳವಾರ

Pic credit - Pintrest

ವಿಷ್ಣುವಿನ ದಿನವಾದ ಬುಧವಾರ ಹೊಸ ಒಡವೆ ಧರಿಸುವುದರಿಂದ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ. ಮಹಾಲಕ್ಷ್ಮೀ ಮತ್ತು ಶ್ರೀ ವಿಷ್ಣುವಿನ ಕೃಪೆಗೆ ಪಾತ್ರರಾಗುವ ಸಾಧ್ಯತೆ ಇರುತ್ತದೆ.

ಬುಧವಾರ

Pic credit - Pintrest

ಗುರುವಾರ ಹೊಸ ಒಡವೆ ಧರಿಸುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಯೋಗ ಉಂಟಾಗುತ್ತದೆ ಮತ್ತು ಗುರುವಿನ ಅನುಗ್ರಹ ಲಭಿಸುತ್ತದೆ.

ಗುರುವಾರ

Pic credit - Pintrest

ಶುಕ್ರವಾರ ಹೊಸ ಒಡವೆ ಮೊದಲು ದೇವಿಗೆ ಅರ್ಪಿಸಿ ನಂತರ ಧರಿಸಬೇಕು. ವಿವಾಹದಲ್ಲಿ ವಿಳಂಬವಿದ್ದರೆ ಅದು ಬೇಗನೆ ನಡೆಯುತ್ತದೆ ಎಂದು ನಂಬಲಾಗಿದೆ.

ಶುಕ್ರವಾರ

Pic credit - Pintrest

ಶನಿವಾರ ಹೊಸ ಒಡವೆ ಧರಿಸುವುದು ನಷ್ಟ ಮತ್ತು ಅನುಮಾನಗಳಿಗೆ ಕಾರಣವಾಗಬಹುದು.  ಹೀಗಾಗಿ ಈ ದಿನ ಹೊಸ ಒಡವೆ ಧರಿಸುವುದು ಶುಭಕರವಲ್ಲ. 

ಶನಿವಾರ

Pic credit - Pintrest

ಭಾನುವಾರ ಹೊಸ ಒಡವೆ ಧರಿಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು ಮತ್ತು ಕೋಪ ಹೆಚ್ಚಾಗುವ ಸಾಧ್ಯತೆ ಇದೆ.  ಸಾಲ ತೀರುವುದಿಲ್ಲ ಎಂಬ ನಂಬಿಕೆಯಿದೆ.

ಭಾನುವಾರ

Pic credit - Pintrest