28 March 2025

Pic credit -  Pintrest

Author: Akshatha Vorkady

ಯಾವ ದಿಕ್ಕಿಗೆ ಮುಖ ಮಾಡಿ ಊಟ ಮಾಡಲೇಬಾರದು?

ವಾಸ್ತು ಶಾಸ್ತ್ರದ ನಿಯಮ ಪಾಲಿಸುವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಸದಾ ನೆಲೆಸಿರುತ್ತದೆ ಎಂದು ನಂಬಲಾಗಿದೆ.

Pic credit -  Pintrest

ಅದರಂತೆ ಮನೆಯ ಯಾವ ಸ್ಥಳದಲ್ಲಿ ಕುಳಿತು ಊಟ ಮಾಡಬೇಕು ಮತ್ತು ಯಾವ ಸ್ಥಳದಲ್ಲಿ ಊಟ ಮಾಡಬಾರದು ಎಂಬುದಕ್ಕೂ ವಾಸ್ತುವಿನಲ್ಲಿ ಉಲ್ಲೇಖವಿದೆ.

Pic credit -  Pintrest

ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣ ದಿಕ್ಕು ಯಮರಾಜನ ದಿಕ್ಕು, ಈ ದಿಕ್ಕಿಗೆ ಮುಖ ಮಾಡಿ ಕುಳಿತು ಊಟ ಮಾಡುವುದು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತದೆ.

Pic credit -  Pintrest

ಇದು ಬಡತನಕ್ಕೂ ಕಾರಣವಾಗುತ್ತದೆ. ಕುಟುಂಬದಲ್ಲಿ ವಿವಾದಗಳು ಹೆಚ್ಚಾಗುತ್ತವೆ ಮತ್ತು ಪ್ರಗತಿಗೆ ಅಡ್ಡಿಯಾಗುತ್ತದೆ. 

Pic credit -  Pintrest

ಉತ್ತರ ದಿಕ್ಕನ್ನು ಸಂಪತ್ತು ಮತ್ತು ಜ್ಞಾನದ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದು ಬುದ್ಧಿಶಕ್ತಿಗೆ ಒಳ್ಳೆಯದು.

Pic credit -  Pintrest

ಯುವಕರು ಮತ್ತು ವಿದ್ಯಾರ್ಥಿಗಳು ಊಟ ಮಾಡುವಾಗ ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡು ಊಟ ಮಾಡುವುದು ತುಂಬಾ ಒಳ್ಳೆಯದು.

Pic credit -  Pintrest

ಪಶ್ಚಿಮ ದಿಕ್ಕನ್ನು ಲಾಭದ ದಿಕ್ಕು ಎಂದು ಕರೆಯಲಾಗುತ್ತದೆ. ಈ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದರಿಂದ ಪ್ರಗತಿಗೆ ದಾರಿ ಮಾಡಿಕೊಡುತ್ತದೆ.

Pic credit -  Pintrest

ಪೂರ್ವಕ್ಕೆ ಮುಖ ಮಾಡಿ ಊಟ ಮಾಡುವುದು ಮೆದುಳಿಗೆ ಒಳ್ಳೆಯದು. ಇದು ಜೀರ್ಣಾಂಗ ವ್ಯವಸ್ಥೆ ಬಲಿಷ್ಠವಾಗಿರಿಸುತ್ತದೆ.

Pic credit -  Pintrest