ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್; ಬೇಡದ ದಾಖಲೆ ಬರೆದ ಅರ್ಷದೀಪ್

18 May 2025

Pic credit: Google

 By: ಪೃಥ್ವಿ ಶಂಕರ 

ಐಪಿಎಲ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವೇಗಿ ಅರ್ಷದೀಪ್ ಸಿಂಗ್ ಅನಗತ್ಯ ದಾಖಲೆ ನಿರ್ಮಿಸಿದ್ದಾರೆ.

Pic credit: Google

ಅರ್ಷದೀಪ್ ಸಿಂಗ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಐದು ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ ರಾಜಸ್ಥಾನಕ್ಕೆ 220 ರನ್ ಗಳ ಗುರಿ ನೀಡಿತು.

Pic credit: Google

ರಾಜಸ್ಥಾನಕ್ಕೆ 220 ರನ್ ಗುರಿ

ಆರಂಭಿಕರಾದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ರಾಜಸ್ಥಾನಕ್ಕೆ ವೇಗದ ಆರಂಭ ನೀಡಿದರು.

Pic credit: Google

ವೇಗದ ಆರಂಭ

ಅದರಲ್ಲೂ ಪಂಜಾಬ್ ಪರ ಮೊದಲ ಓವರ್ ಬೌಲ್ ಮಾಡಿದ ಅರ್ಷದೀಪ್ ಸಿಂಗ್ ಓವರ್​ನಲ್ಲಿ ರಾಜಸ್ಥಾನ್ 22 ರನ್ ಕಲೆಹಾಕಿತು.

Pic credit: Google

ಒಂದೇ ಓವರ್​ನಲ್ಲಿ 22 ರನ್

ಇದರೊಂದಿಗೆ, ಅರ್ಷದೀಪ್ ಐಪಿಎಲ್‌ನ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಪಂಜಾಬ್ ಕಿಂಗ್ಸ್​ ಬೌಲರ್ ಎಂಬ ಬೇಡದ ದಾಖಲೆ ಬರೆದಿದ್ದಾರೆ.

Pic credit: Google

ಅತಿ ಹೆಚ್ಚು ರನ್

2014 ರಲ್ಲಿ ಆರ್‌ಸಿಬಿ ವಿರುದ್ಧದ ಮೊದಲ ಓವರ್‌ನಲ್ಲಿ 20 ರನ್‌ಗಳನ್ನು ಬಿಟ್ಟುಕೊಟ್ಟಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಅರ್ಶ್‌ದೀಪ್ ಈ ವಿಷಯದಲ್ಲಿ ಹಿಂದಿಕ್ಕಿದ್ದಾರೆ.

Pic credit: Google

ಮ್ಯಾಕ್ಸ್​ವೆಲ್ ದಾಖಲೆ

ಇನ್ನು ಈ ಪಂದ್ಯದಲ್ಲಿ ಉತ್ತಮ ಆರಂಭದ ಹೊರತಾಗಿಯೂ ರಾಜಸ್ಥಾನ್ 10 ರನ್​ಗಳಿಂದ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತು.

Pic credit: Google

10 ರನ್ ಸೋಲು