IPL ಆಟಗಾರ ಈಗ ಐಪಿಎಲ್ ನಲ್ಲೇ ಅಂಪೈರ್..!

19 march 2025

Pic credit: Google

Zahir

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡಿದ ಆಟಗಾರ ಈಗ ಐಪಿಎಲ್​ನಲ್ಲೇ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಅದು ಕೂಡ ಅಂಪೈರ್ ಆಗಿ.

Pic credit: Google

Pic credit: Google

2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅಂಡರ್ -19 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ತನ್ಮಯ್ ಶ್ರೀವಾಸ್ತವ್ ಈಗ ಐಪಿಎಲ್​ಗೆ ಅಂಪೈರ್ ಆಗಿ ಆಯ್ಕೆಯಾಗಿದ್ದಾರೆ.

Pic credit: Google

ಇದಕ್ಕೂ ಮುನ್ನ ತನ್ಮಯ್ 2008 ರಲ್ಲಿ ಪಂಜಾಬ್ ಕಿಂಗ್ಸ್, 2010 ರಲ್ಲಿ ಕೊಚ್ಚಿನ್ ಟಸ್ಕರ್ಸ್​​ ತಂಡಗಳಲ್ಲಿ ಕಾಣಿಸಿಕೊಂಡಿದ್ದರು.

Pic credit: Google

ಐಪಿಎಲ್​ನಲ್ಲಿ 7 ಪಂದ್ಯಗಳಲ್ಲಿ 3 ಇನಿಂಗ್ಸ್ ಆಡಿದ್ದ ತನ್ಮಯ್ ಶ್ರೀವಾಸ್ತವ್ ಕೇವಲ 8 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

Pic credit: Google

5 ವರ್ಷಗಳ ಹಿಂದೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ತನ್ಮಯ್ ದೇಶೀಯ ಕ್ರಿಕೆಟ್​ನಲ್ಲಿ ಅಂಪೈರ್ ಆಗಿ ಮೈದಾನಕ್ಕೆ ಮರಳಿದ್ದರು.

Pic credit: Google

ಇದೀಗ ತನ್ಮಯ್ ಅವರನ್ನು ಬಿಸಿಸಿಐ ಫಾಸ್ಟ್ ಟ್ರ್ಯಾಕ್ ಐಪಿಎಲ್‌ನ ಅಂಪೈರ್ ಆಗಿ ಆಯ್ಕೆ ಮಾಡಿದೆ.

Pic credit: Google

ಅದರಂತೆ ಈ ಬಾರಿಯ ಐಪಿಎಲ್​ನಲ್ಲಿ ತನ್ಮಯ್ ಶ್ರೀವಾಸ್ತವ್ ಅಧಿಕೃತ ಮ್ಯಾಚ್ ಅಂಪೈರ್ ಆಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

Pic credit: Google