ವಿನೋದ್ ಕಾಂಬ್ಳಿ ಪಿಂಚಣಿ ಮೊತ್ತ ಹೆಚ್ಚಳ! ಗವಾಸ್ಕರ್ ಫೌಂಡೇಶನ್‌ನಿಂದಲೂ ಹಣ
17 April 2025
Pic credit: Google
By: ಪೃಥ್ವಿ ಶಂಕರ
ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರ್ಥಿಕ ಸಮಸ್ಯೆಗಳಿಂದ ಕೂಡ ಬಳಲುತ್ತಿದ್ದಾರೆ.
ವಿನೋದ್ ಕಾಂಬ್ಳಿ
Pic credit: Google
ಪ್ರಸ್ತುತ ಬಿಸಿಸಿಐನಿಂದ ಪಡೆಯುವ ಪಿಂಚಣಿಯಿಂದ ತಮ್ಮ ಮನೆಯನ್ನು ನಡೆಸುತ್ತಿರುವ ಕಾಂಬ್ಳಿಗೆ ಈಗ ಸುನಿಲ್ ಗವಾಸ್ಕರ್ ಅವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.
ಗವಾಸ್ಕರ್ ಸಹಾಯ
Pic credit: Google
ಬಿಸಿಸಿಐನಿಂದ ವಿನೋದ್ ಕಾಂಬ್ಳಿಗೆ ಪ್ರತಿ ತಿಂಗಳು 52,500 ರೂಪಾಯಿ ಪಿಂಚಣಿ ಸಿಗುತ್ತದೆ. ಈ ಮೊದಲು ಕಾಂಬ್ಳಿಗೆ ಕೇವಲ 30,000 ರೂಗಳು ಪಿಂಚಣಿಯಾಗಿ ಸಿಗುತಿತ್ತು.
52,500 ರೂ. ಪಿಂಚಣಿ
Pic credit: Google
ಬಿಸಿಸಿಐನಿಂದ ಪಡೆಯುವ ಪಿಂಚಣಿಯ ಜೊತೆಗೆ, ವಿನೋದ್ ಕಾಂಬ್ಳಿ ಈಗ ಸುನಿಲ್ ಗವಾಸ್ಕರ್ ಅವರ CHAMPS ಫೌಂಡೇಶನ್‌ನಿಂದ ಮಾಸಿಕ ಸಹಾಯವನ್ನು ಪಡೆಯಲಿದ್ದಾರೆ.
CHAMPS ಫೌಂಡೇಶನ್
Pic credit: Google
ಸುನಿಲ್ ಗವಾಸ್ಕರ್ ಅವರ ಪ್ರತಿಷ್ಠಾನದಿಂದ ವಿನೋದ್ ಕಾಂಬ್ಳಿಗೆ ಪ್ರತಿ ತಿಂಗಳು 30 ಸಾವಿರ ರೂ. ನೀಡಲಾಗುವುದು.
30 ಸಾವಿರ ರೂ.
Pic credit: Google
ಅಂದರೆ, ಬಿಸಿಸಿಐ ಪಿಂಚಣಿ ಮತ್ತು ಫೌಂಡೇಶನ್ ಸಹಾಯ ಸೇರಿದಂತೆ ಕಾಂಬ್ಳಿ ಈಗ ಪ್ರತಿ ತಿಂಗಳು 82,500 ರೂ.ಗಳನ್ನು ಪಡೆಯಲಿದ್ದಾರೆ.
ತಿಂಗಳು 82,500 ರೂ.
Pic credit: Google
ಇದಲ್ಲದೆ ಸುನಿಲ್ ಗವಾಸ್ಕರ್ ಅವರ CHAMPS ಫೌಂಡೇಶನ್ ವಿನೋದ್ ಕಾಂಬ್ಳಿಗೆ ವೈದ್ಯಕೀಯ ವೆಚ್ಚಕ್ಕಾಗಿ ವಾರ್ಷಿಕವಾಗಿ 30,000 ರೂ.ಗಳನ್ನು ನೀಡಲಿದೆ.
ವೈದ್ಯಕೀಯ ವೆಚ್ಚ
Pic credit: Google
ವಿನೋದ್ ಕಾಂಬ್ಳಿ ಭಾರತ ಪರ 17 ಟೆಸ್ಟ್ ಮತ್ತು 104 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಒಂದು ಕಾಲದಲ್ಲಿ ಅವರು ಕೋಟ್ಯಂತರ ರೂಪಾಯಿಗಳ ಒಡೆಯರಾಗಿದ್ದರು. ಆದರೆ ಅವರ ಮದ್ಯದ ಚಟ ಅವರನ್ನು ಈ ಸ್ಥಿತಿಗೆ ತಂದಿದೆ.