ಐಪಿಎಲ್ 2025 ಮತ್ತೆ ಪ್ರಾರಂಭವಾಗಲಿದೆ. ಮೇ 17 ರಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
Pic credit: Google
ಆರ್ಸಿಬಿ- ಕೆಕೆಆರ್
ಈ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳ ಕಣ್ಣು ವಿರಾಟ್ ಕೊಹ್ಲಿ ಮೇಲೆ ಇರುತ್ತದೆ. ಟೆಸ್ಟ್‌ನಿಂದ ನಿವೃತ್ತರಾದ ನಂತರ ಅವರು ಮೊದಲ ಬಾರಿಗೆ ಮೈದಾನಕ್ಕೆ ಇಳಿಯಲಿದ್ದಾರೆ.
Pic credit: Google
ವಿರಾಟ್ ಕೊಹ್ಲಿ
ಈ ಐಪಿಎಲ್ ಸೀಸನ್ ವಿರಾಟ್ ಕೊಹ್ಲಿ ಪಾಲಿಗೆ ಇದುವರೆಗೆ ಅಮೋಘವಾಗಿದೆ. ಇದೀಗ ಕೊಹ್ಲಿ ಐಪಿಎಲ್‌ನ ವಿಶೇಷ ದಾಖಲೆಯ ಸಮೀಪದಲ್ಲಿದ್ದಾರೆ.
Pic credit: Google
ವಿಶೇಷ ದಾಖಲೆ
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವಿರಾಟ್ ಕೊಹ್ಲಿ ಒಂದು ಬೌಂಡರಿ ಬಾರಿಸಿದರೆ, ಐಪಿಎಲ್‌ನಲ್ಲಿ 750 ಬೌಂಡರಿಗಳನ್ನು ಪೂರ್ಣಗೊಳಿಸಲಿದ್ದಾರೆ.
Pic credit: Google
750 ಬೌಂಡರಿ
ಈ ಮೂಲಕ ಕೊಹ್ಲಿ ಐಪಿಎಲ್‌ನಲ್ಲಿ ಈ ದಾಖಲೆ ಬರೆದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಕೊಹ್ಲಿಗಿಂತ ಮೊದಲು ಶಿಖರ್ ಧವನ್ ಈ ಸಾಧನೆ ಮಾಡಿದ್ದಾರೆ. ಧವನ್ ಐಪಿಎಲ್‌ನಲ್ಲಿ 768 ಬೌಂಡರಿ ಬಾರಿಸಿದ್ದಾರೆ.
Pic credit: Google
ಶಿಖರ್ ಧವನ್
ಪ್ರಸಕ್ತ ಸೀಸನ್‌ನಲ್ಲಿ ವಿರಾಟ್ ಆಡಿರುವ 11 ಪಂದ್ಯಗಳಲ್ಲಿ 63.13 ಸರಾಸರಿಯಲ್ಲಿ 505 ರನ್ ಗಳಿಸಿದ್ದಾರೆ. ಇದರಲ್ಲಿ 7 ಅರ್ಧಶತಕಗಳು ಸೇರಿವೆ.
Pic credit: Google
11 ಪಂದ್ಯ 505 ರನ್
ಈ ಮೂಲಕ ವಿರಾಟ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದು, ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೆಕೆಆರ್ ವಿರುದ್ಧ ಕೊಹ್ಲಿ 6 ರನ್ ಗಳಿಸಿದರೆ ಅಗ್ರಸ್ಥಾನ ತಲುಪಲಿದ್ದಾರೆ.