ದೇಶದ ಸಂಪತ್ತಿನ ಶೇಕಡ 70 ರಷ್ಟು ಭಾಗ ಕೇವಲ ಶೇಕಡ 10 ಜನರಲ್ಲಿ ಶೇಖರಣೆಯಾದರೆ ಸಾಮಾಜಿಕ ನ್ಯಾಯ ಹೇಗೆ ಸಿಕ್ಕೀತು? ಸಿದ್ದರಾಮಯ್ಯ, ಮುಖ್ಯಮಂತ್ರಿ

|

Updated on: Aug 15, 2023 | 11:52 AM

Independence Day 2023: ರಾಷ್ಟ್ರವನ್ನು ದಾಸತ್ವದ ಸಂಕೋಲೆಯಿಂದ ಮುಕ್ತ ಮಾಡಲು ತಮ್ಮ ಜೀವಗಳನ್ನು ಬಲಿದಾನ ಮಾಡಿದ ಭಾರತೀಯರನ್ನು ನೆನೆದರೆ, ಅವರ ನಿಸ್ವಾರ್ಥ ದೇಶಪ್ರೇಮನ್ನು ಕಣ್ಣಮುಂದೆ ತಂದುಕೊಂಡರೆ, ಸ್ವಾತಂತ್ರ್ಯ ಎಷ್ಟು ದುಬಾರಿ ಅನ್ನೋದು ಮನವರಿಕೆಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: 77 ನೇ ಸ್ವಾತಂತ್ರ್ಯೋತ್ಸವ (77th Independence Day) ಅಂಗವಾಗಿ ನಗರದ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ರಾಷ್ಟ್ರಧ್ವಜದ ಆರೋಹಣ ನಂತರ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತಾಡಿದರು. ಎಲ್ಲ ಕನ್ನಡಿಗರಿಗೆ ಸ್ವಾತಂತ್ರ್ಯೋತ್ಸವದ ಶುಭಾಷಯ ತಿಳಿಸಿದ ಸಿದ್ದರಾಮಯ್ಯ, ರಾಷ್ಟ್ರವನ್ನು ದಾಸತ್ವದ ಸಂಕೋಲೆಯಿಂದ ಮುಕ್ತ ಮಾಡಲು ತಮ್ಮ ಜೀವಗಳನ್ನು ಬಲಿದಾನ ಮಾಡಿದ ಭಾರತೀಯರನ್ನು ನೆನೆದರೆ, ಅವರ ನಿಸ್ವಾರ್ಥ ದೇಶಪ್ರೇಮನ್ನು ಕಣ್ಣಮುಂದೆ ತಂದುಕೊಂಡರೆ, ಸ್ವಾತಂತ್ರ್ಯ ಎಷ್ಟು ದುಬಾರಿ ಅನ್ನೋದು ಮನವರಿಕೆಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ (Social Justice) ಬಗ್ಗೆ ಮಾತಾಡಿದ ಮುಖ್ಯಮಂತ್ರಿ ಕಾಂಗ್ರೆಸ್ ಜಾರಿಗೆ ತಂದಿರುವ 5 ಗ್ಯಾರಂಟಿಗಳನ್ನು ಉಲ್ಲೇಖಿಸಿದರು. ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯಾ ಸೇನ್ (Amartya Sen) ಅಭಿವೃದ್ಧೀಯೇ ಸ್ವಾತಂತ್ರ್ಯ ಅಂತ ಹೇಳಿದ್ದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಸರ್ಕಾರ ಬಧ್ಧವಾಗಿದೆ ಎಂದು ಹೇಳಿದರು. ಭಾರತದಲ್ಲಿ ಬಡವ ಮತ್ತು ಶ್ರೀಮಂತರ ನಡುವಿನ ಕಂದರ ಹೆಚ್ಚುತ್ತಲೇ ಇದೆ, ದೇಶದ ಶೇಕಡ 70 ರಷ್ಟು ಸಂಪತ್ತು ಕೇವಲ ಶೇಕಡ 10 ರಷ್ಟು ಜನರಲ್ಲಿ ಶೇಖರಣೆಯಾಗಿದೆ ಎಂದು ಸಿದ್ದರಾಮಯ್ಯ, ಕುವೆಂಪು ಅವರ ಪದ್ಯದ, ಕತ್ತಿ ಪರದೇಶಿಯಾದರೆ ಮಾತ್ರ ನೋವೇ ನಮ್ಮವರೇ ಹದಹಾಕಿ ತಿವಿದರೆ ಅದು ಹೂವೇ, ಸಾಲುಗಳನ್ನು ಓದಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ