
Bigg Boss Kannada
ಅತಿ ದೊಡ್ಡ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ಗೆ ಸ್ಥಾನ ಇದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು ಆರಂಭ ಆಗಿದ್ದು ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು.
ಕನ್ನಡದಲ್ಲಿ ಬಿಗ್ ಬಾಸ್ 10ನೇ ಸೀಸನ್ ಆರಂಭ ಆಗಿದೆ. ಒಂದು ಒಟಿಟಿ ಹಾಗೂ ಒಂದು ಮಿನಿ ಸೀಸನ್ ಪೂರ್ಣಗೊಂಡಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. 17-18 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರುತ್ತಾರೆ. 100 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯುತ್ತದೆ.
ಬಿಗ್ ಬಾಸ್ ಒಳಗೆ ಹೋದ ಬಳಿಕ ಹೊರ ಜಗತ್ತಿನ ಜೊತೆಗಿನ ಸಂಪರ್ಕ ಕಳೆದು ಹೋಗುತ್ತದೆ. ಬಿಗ್ ಬಾಸ್ನಲ್ಲಿ ಸಾಕಷ್ಟು ವಿವಾದಗಳು ನಡೆದಿವೆ. ಯಾರ ಮೇಲಾದರೂ ಕೈ ಮಾಡಿದರೆ ಅಂಥ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಲಾಗುತ್ತದೆ. ಗೆದ್ದ ಸ್ಪರ್ಧಿಗೆ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಸಿಗುತ್ತದೆ. ಸುದೀಪ್ ನಿರೂಪಣೆಯಿಂದ ಬಿಗ್ ಬಾಸ್ ಕನ್ನಡದ ರಂಗು ಹೆಚ್ಚಿದೆ.
ರಜತ್ ನನ್ನ ತಮ್ಮ, ನಾನು ಎಂದಿಗೂ ಬಿಟ್ಟುಕೊಡಲ್ಲ: ವಿನಯ್ ಗೌಡ ನೇರ ಮಾತು
ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಮತ್ತು ರಜತ್ ಅವರು ರೀಲ್ಸ್ ಮಾಡಿ ಕಾನೂನಿನ ಸಂಕಷ್ಟಕ್ಕೆ ಸಿಲುಕಿಕೊಂಡರು. ಈ ಘಟನೆ ಬಳಿಕ ರಜತ್ ಕಿಶನ್ ಮತ್ತು ವಿನಯ್ ಗೌಡ ನಡುವೆ ಮನಸ್ತಾಪ ಮೂಡಿದೆ ಎಂಬ ಮಾತು ಕೇಳಿಬಂತು. ಆದರೆ ಈ ಬಗ್ಗೆ ಈಗ ವಿನಯ್ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.
- Mangala RR
- Updated on: Apr 16, 2025
- 10:39 pm
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಜಾಮೀನು ಪಡೆದು ಹೊರಬಂದಿದ್ದ ರಜತ್ ಅವರನ್ನು ಮತ್ತೆ ಜೈಲಿಗೆ ಕಳಿಸಲಾಗಿದೆ. ಆದರೆ ವಿನಯ್ ಗೌಡ ಅವರು ಸದ್ಯಕ್ಕೆ ಜೈಲು ವಾಸದಿಂದ ಬಚಾವ್ ಆಗಿದ್ದಾರೆ.
- Madan Kumar
- Updated on: Apr 16, 2025
- 9:51 pm
‘ಕೊಳಕು ಅಂಟದ ಬಿಳಿ ಹಾಳೆ ನೀನು’; ಧನರಾಜ್ಗೆ ಕೈಯಲ್ಲೇ ಪತ್ರ ಬರೆದು ಬರ್ತ್ಡೇ ವಿಶ್ ತಿಳಿಸಿದ ತ್ರಿವಿಕ್ರಂ
ಬಿಗ್ ಬಾಸ್ ಕನ್ನಡದಿಂದ ಧನರಾಜ್ ಮತ್ತು ತ್ರಿವಿಕ್ರಂ ಅವರ ನಡುವೆ ಬೆಳೆದ ಅದ್ಭುತ ಬಾಂಧವ್ಯ ಇಂದಿಗೂ ಮುಂದುವರೆದಿದೆ. ಧನರಾಜ್ ಅವರ ಜನ್ಮದಿನದಂದು, ತ್ರಿವಿಕ್ರಂ ಅವರು ಕೈಬರಹದ ಪತ್ರದ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಪತ್ರದಲ್ಲಿ ಅವರು ಬಿಗ್ ಬಾಸ್ ಮನೆಯಲ್ಲಿನ ಅನುಭವಗಳು ಹಾಗೂ ಧನರಾಜ್ ಅವರ ವ್ಯಕ್ತಿತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
- Rajesh Duggumane
- Updated on: Apr 8, 2025
- 7:09 am
‘ರೀಲ್ಸ್ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಮಚ್ಚು ಹಿಡುದ ರೀಲ್ಸ್ ಮಾಡಿ ರಜತ್ ಹಾಗೂ ವಿನಯ್ ಜೈಲು ಸೇರಿದ್ದರು. ಈಗ ಇವರಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ. ಈ ಬೆನ್ನಲ್ಲೇ ಅವರು ಜೈಲಿನಿಂದ ಹೊರ ಬಂದಿದ್ದಾರೆ. ವಿನಯ್ ಗೌಡ ಅವರು ಎಲ್ಲವನ್ನೂ ಮಾತನಾಡೋಣ ಎನ್ನುತ್ತಲೇ ಜೈಲಿನಿಂದ ಹೊರ ಹೋದರು .
- Rajesh Duggumane
- Updated on: Mar 29, 2025
- 10:38 am
ರಜತ್-ವಿನಯ್ ಅಂದರ್ ಆಗಿದ್ದಕ್ಕೆ ಈ ವಾರದ ‘ಬಾಯ್ಸ್ vs ಗರ್ಲ್ಸ್’ ಶೋ ಕ್ಯಾನ್ಸಲ್?
ರಜತ್ ಕಿಶನ್ ಮತ್ತು ವಿನಯ್ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದಾರೆ. ಅವರಿಗೆ ಜಾಮೀನು ಸಿಕ್ಕಿದ್ದರೂ, ಅವರ ಅನುಪಸ್ಥಿತಿಯಿಂದ ಶೋ ಮೇಲೆ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವಾರದ ಶೋ ರದ್ದಾಗುವ ಸಾಧ್ಯತೆಯಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
- Web contact
- Updated on: Mar 29, 2025
- 9:03 am
Gouthami Jadav: ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಹಲ್ಲಿಗೆ ಹೆದರೋದಾ; ಪಾಪ ಗೌತಮಿ ಸ್ಥಿತಿ ನೋಡಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ ರ ಸ್ಪರ್ಧಿ ಗೌತಮಿ ಜಾಧವ್ ಅವರು ಹಲ್ಲಿಗೆ ಭಯ ಬಿದ್ದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಬಿಗ್ ಬಾಸ್ ನಲ್ಲಿ ಧೈರ್ಯಶಾಲಿಯಾಗಿ ಕಾಣಿಸಿಕೊಂಡಿದ್ದ ಗೌತಮಿ, ಹಲ್ಲಿಯನ್ನು ನೋಡಿ ಭಯಭೀತರಾದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದೆ.
- Rajesh Duggumane
- Updated on: Mar 28, 2025
- 7:33 am
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರು ರೀಲ್ಸ್ ಹುಚ್ಚಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಷೇಧಿತ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದೇ ಈಗ ಅವರಿಗೆ ಮುಳುವಾಗಿದೆ. ಪೊಲೀಸರು ತನಿಖೆ ಮಾಡಿದಾಗ ರಿಯಲ್ ಮಚ್ಚಿನ ಬಗ್ಗೆ ಇವರಿಬ್ಬರು ಸೂಕ್ತ ಮಾಹಿತಿ ನೀಡಿಲ್ಲ. ಮಚ್ಚು ಎಲ್ಲಿದೆ ಎಂಬುದನ್ನು ಬಾಯಿ ಬಿಟ್ಟಿಲ್ಲ. ಹಾಗಾಗಿ ಪೊಲೀಸ್ ಕಸ್ಟಡಿಗೆ ಅವರನ್ನು ನೀಡಲಾಗಿದೆ.
- Madan Kumar
- Updated on: Mar 26, 2025
- 10:40 pm
ಮಚ್ಚು ಹಿಡಿದ ಪ್ರಕರಣ: 3 ದಿನ ಪೊಲೀಸ್ ಕಸ್ಟಡಿಗೆ ವಿನಯ್ ಗೌಡ, ರಜತ್ ಕಿಶನ್
ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮಚ್ಚು ಹಿಡಿದು ರೀಲ್ಸ್ ಮಾಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ರೀಲ್ಸ್ ಮಾಡಲು ಬಳಸಿದ್ದ ರಿಯಲ್ ಮಚ್ಚು ಎಲ್ಲಿದೆ ಎಂಬುದನ್ನು ಆರೋಪಿಗಳಿಬ್ಬರು ಇನ್ನೂ ಬಾಯಿ ಬಿಟ್ಟಿಲ್ಲ.
- Madan Kumar
- Updated on: Mar 26, 2025
- 5:17 pm
ರಜತ್, ವಿನಯ್ ಬೆನ್ನಲ್ಲೇ ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿಗೆ ಕಂಟಕ
ರಕ್ಷಕ್ ಬುಲೆಟ್ ಅವರು ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ರಲ್ಲಿ ಮಾಡಿದ ಅವಮಾನಕಾರಿ ಹೇಳಿಕೆಗಳಿಂದಾಗಿ ತೀವ್ರ ವಿವಾದಕ್ಕೆ ಸಿಲುಕಿದ್ದಾರೆ. ಚಾಮುಂಡೇಶ್ವರಿ ದೇವಿಯನ್ನು ಅವಹೇಳನ ಮಾಡಿದ ಆರೋಪ ಅವರ ಮೇಲಿದೆ. ಹಿಂದೂ ಸಂಘಟನೆಗಳು ದೂರು ದಾಖಲಿಸಲು ಮುಂದಾಗಿವೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚಿದೆ.
- Kiran Surya
- Updated on: Mar 26, 2025
- 11:32 am
‘ನಾವು ಪೊಲೀಸರ ದಾರಿ ತಪ್ಪಿಸಿಲ್ಲ’; ನಕಲಿ ಮಚ್ಚು ಕೊಟ್ಟಿದ್ದಕ್ಕೆ ಸ್ಪಷ್ಟನೆ ಕೊಟ್ಟ ರಜತ್
ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ವಿನಯ್ ಗೌಡ ಮತ್ತು ರಜತ್ ಕಿಶನ್ ರೀಲ್ಸ್ಗಾಗಿ ಬಳಸಿದ ನಕಲಿ ಮಚ್ಚಿನಿಂದಾಗಿ ಪೊಲೀಸರ ತನಿಖೆ ಎದುರಿಸುತ್ತಿದ್ದಾರೆ. ಪೊಲೀಸರಿಗೆ ಫೈಬರ್ ಮಚ್ಚು ಸಿಕ್ಕಿದ್ದು, ನಿಜವಾದ ಮಚ್ಚು ಕಾಣೆಯಾಗಿದೆ. ಇದರಿಂದಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರು ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾರೆ.
- Rajesh Duggumane
- Updated on: Mar 26, 2025
- 7:30 am