ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ಬಿಗ್ ರಿಲೀಫ್
ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಪ್ರೀತಂ ಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್ ಆಪ್ತರಾದ ಶರತ್, ಕಿರಣ್, ಪುಟ್ಟರಾಜು ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪೆನ್ ಡ್ರೈವ್ ಹಂಚಿಕೆ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಎಸ್ಐಟಿ ಇವರ ಹೆಸರುಗಳನ್ನು ಚಾರ್ಜ್ ಶೀಟ್‌ನಿಂದ ಕೈಬಿಟ್ಟಿದೆ. ಹಾಸನದ ಸಿವಿಲ್ ನ್ಯಾಯಾಲಯಕ್ಕೆ 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಹಾಸನ, ಮಾರ್ಚ್ 18: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಈ ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಮತ್ತು ಸಂಸದ ಶ್ರೇಯಸ್ ಪಟೇಲ್ ಅವರ ಆಪ್ತರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಪ್ರೀತಂ ಗೌಡ ಆಪ್ತರಾದ ಶರತ್ ಮತ್ತು ಕಿರಣ್, ಹಾಗೆಯೇ ಶ್ರೇಯಸ್ ಪಟೇಲ್ ಆಪ್ತರಾಗಿರುವ ಪುಟ್ಟರಾಜು ಅವರಿಗೆ ಆರೋಪಗಳಿಂದ ಮುಕ್ತಿ ದೊರೆತಿದೆ. ವಿಶೇಷ ತನಿಖಾ ತಂಡ (SIT) ಈ ಮೂವರ ಹೆಸರುಗಳನ್ನು ತಮ್ಮ ದೋಷಾರೋಪ ಪಟ್ಟಿಯಿಂದ ಕೈಬಿಟ್ಟಿದೆ. ಪ್ರಾಥಮಿಕ ಆರೋಪಗಳ ಪ್ರಕಾರ, ಶರತ್, ಕಿರಣ್ ಮತ್ತು ಪುಟ್ಟರಾಜು ಅವರು ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಪೆನ್ ಡ್ರೈವ್ ವೀಡಿಯೋಗಳ ಹಂಚಿಕೆಯಲ್ಲಿ ಮತ್ತು ಅವುಗಳನ್ನು ದೊಡ್ಡ ಮಟ್ಟದಲ್ಲಿ ವೈರಲ್ ಮಾಡುವಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ, ಎಸ್ಐಟಿ ನಡೆಸಿದ ತನಿಖೆಯಲ್ಲಿ ಇವರು ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ದೃಢಪಟ್ಟಿದೆ. ಹಾಸನದ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಕೆಯಾದ 13,712 ಪುಟಗಳ ಚಾರ್ಜ್ ಶೀಟ್‌ನಲ್ಲಿ ಈ ಮೂವರ ಹೆಸರುಗಳನ್ನು ಸೇರಿಸಲಾಗಿಲ್ಲ. ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಇವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಬಿಸಿಲಿಂದ ಪಾರಾಗಲು ಟ್ಯಾಂಕನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡ ಕೋತಿಗಳು
ಗುದ್ದಲಿ ಪೂಜೆಗೆ ಪ್ರಾಮಾಣಿಕರು ಸಿಗಲಿಲ್ವಾ? ಯತ್ನಾಳ್ ವ್ಯಂಗ್ಯ
ಪುಣೆ ನಿಲ್ದಾಣಕ್ಕೆ ಬರುವಾಗ ಹಳಿ ತಪ್ಪಿದ ಮುಂಬೈ-ಸೋಲಾಪುರ ವಂದೇ ಭಾರತ್ ರೈಲು
ಕೆಡಿ ಸುದ್ದಿಗೋಷ್ಠಿ: ಎಷ್ಟೇ ಕೇಳಿದರೂ ಆ ವಿಷಯ ಬಾಯಿ ಬಿಡಲಿಲ್ಲ ಕಿಚ್ಚ ಸುದೀಪ
