ರಾತ್ರಿ ವೇಳೆ ನಡುರಸ್ತೆಯಲ್ಲೇ ಝಳಪಿಸಿದ ಲಾಂಗ್: ಖಾರದ ಪುಡಿ ಎರಚಿ ರೌಡಿ ಶೀಟರ್ನ ಭೀಕರ ಹತ್ಯೆ
ಬೆಂಗಳೂರಿನ ಮಂಗಮ್ಮನಪಾಳ್ಯದಲ್ಲಿ 15 ಕೇಸ್ಗಳ ರೌಡಿ ಶೀಟರ್ ಓರ್ವನನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ 6 ಮಂದಿ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ. ಬಂಡೇಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಆತನ ಐವರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.
- Prasanna Hegde
- Updated on: Jan 14, 2026
- 7:08 pm
ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಕ್ರೇನ್ ಪಲ್ಟಿ: ತಪ್ಪಿದ ಭಾರೀ ದುರಂತ
ಬೆಂಗಳೂರಿನ ನೀಲಿ ಮಾರ್ಗ ಮೆಟ್ರೋ ಕಾಮಗಾರಿಯ ವೇಳೆ ಬೃಹತ್ ಕ್ರೇನ್ ಒಂದು ನಿಯಂತ್ರಣ ತಪ್ಪಿ ಬಿದ್ದಿದೆ. ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ಏರ್ಪೋರ್ಟ್ಗೆ ಸಂಪರ್ಕ ಕಲ್ಪಿಸುವ ಮಾರ್ಗದ ಗರ್ಡರ್ ಜೋಡಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭಿಸಿಲ್ಲ ಎನ್ನಲಾಗಿದ್ದು, ದೊಡ್ಡ ದುರಂತವೊಂದು ತಪ್ಪಿದೆ.
- Prasanna Hegde
- Updated on: Jan 14, 2026
- 11:32 am
ಸಿಎಂ, ಡಿಸಿಎಂಗೆ ಮಾತಲ್ಲೇ ತಿವಿದ ವಿಪಕ್ಷ ನಾಯಕ: ಎಕ್ಸ್ ಪೋಸ್ಟ್ ಮಾಡಿ ಅಶೋಕ್ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡೆಯನ್ನು ವಿಪಕ್ಷ ನಾಯಕ ಆರ್. ಅಶೋಕ್ ಅವರು ಕಟುವಾಗಿ ಟೀಕಿಸಿದ್ದಾರೆ. ಜರ್ಮನ್ ಫೆಡರಲ್ ಚಾನ್ಸಲರ್ ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ, ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ರಾಹುಲ್ ಗಾಂಧಿ ಭೇಟಿಯಾಗಲು ಮೈಸೂರಿಗೆ ತೆರಳಿದ್ದನ್ನು ಅವರು ಪ್ರಶ್ನಿಸಿದ್ದಾರೆ. ಇದು ರಾಜ್ಯದ ಹಿತಾಸಕ್ತಿಗಳನ್ನು ನಿರ್ಲಕ್ಷ್ಯವಾಗಿದ್ದು, ಇದರಿಂದ ರಾಜ್ಯಕ್ಕೆ ಹೂಡಿಕೆ ಅವಕಾಶಗಳು ಕೈತಪ್ಪಿವೆ ಎಂದವರು ಆರೋಪಿಸಿದ್ದಾರೆ.
- Prasanna Hegde
- Updated on: Jan 13, 2026
- 6:24 pm
Bengaluru: ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಜೋಕೆ: ಇನ್ಮುಂದೆ ದಾಖಲಾಗುತ್ತೆ FIR
ಬೆಂಗಳೂರು ಸಂಚಾರ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್ಐಆರ್ ದಾಖಲಿಸಲು ಆರಂಭಿಸಿದ್ದಾರೆ. ಸಿಗ್ನಲ್ ಜಂಪ್, ಏಕಮಾರ್ಗ ರಸ್ತೆಯಲ್ಲಿ ಸಂಚಾರ ಮಾಡುವವರ ವಾಹನ ಜಪ್ತಿ ಆಗಲಿದ್ದು ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಅಪಘಾತಗಳನ್ನು ತಡೆಗಟ್ಟಲು ಮತ್ತು ಸಂಚಾರ ನಿಯಮಗಳ ಉಲ್ಲಂಘಟನೆ ಕೇಸ್ಗಳ ನಿಯಂತ್ರಣಕ್ಕೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
- Prasanna Hegde
- Updated on: Jan 13, 2026
- 11:41 am
ಉದ್ಯೋಗ ಸಂಬಂಧ ವಿವಾದಿತ ಜಾಹೀರಾತು: ಕನ್ನಡಿಗರ ಕ್ಷಮೆ ಕೇಳಿದ ಬೆಂಗಳೂರಿನ ಖಾಸಗಿ ಕಂಪನಿ
ಜೆ.ಪಿ. ನಗರದ 'ಸ್ಕಿಲ್ಸ್ ಸೋನಿಕ್ಸ್' ಕಂಪನಿ ಉದ್ಯೋಗ ಪ್ರಕಟಣೆಯಲ್ಲಿ ಕನ್ನಡ ಗೊತ್ತಿಲ್ಲದವರಿಗೆ ಆದ್ಯತೆ ಎಂದು ನಮೂದಿಸಿರೋದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡಿಗರ ಭಾರಿ ವಿರೋಧದ ಬಳಿಕ ಕಂಪನಿಯೀಗ ಕ್ಷಮೆಯಾಚಿಸಿದೆ. ಈ ಘಟನೆಯು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಆದರೆ, ಉದ್ಯಮಿ ಕಿರಣ್ ಮಜುಂದಾರ್ ಶಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
- Prasanna Hegde
- Updated on: Jan 12, 2026
- 1:57 pm
ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ: ಫೆಬ್ರವರಿಯಿಂದ ಟಿಕೆಟ್ ದರ ಹೆಚ್ಚಳ?
ನಮ್ಮ ಮೆಟ್ರೋ ಟಿಕೆಟ್ ದರ ಫೆಬ್ರವರಿಯಿಂದ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ನಮ್ಮ ಮೆಟ್ರೋ ದೇಶದಲ್ಲೇ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಹೊಂದಿದ್ದು , ದರ ಹೆಚ್ಚಳದಿಂದ ಪ್ರಯಾಣಿಕರಿಗೆ ಮತ್ತಷ್ಟು ಹೊರೆ ಆಗಲಿದೆ. ಈ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಐಷಾರಾಮಿ ಸೇವೆಗಿಂತ ಕೈಗೆಟುಕುವ ಸಾರಿಗೆ ಅಗತ್ಯ ಎಂದಿದ್ದಾರೆ.
- Prasanna Hegde
- Updated on: Jan 12, 2026
- 11:53 am
ಪ್ರತ್ಯೇಕ ಘಟನೆ: ರಸ್ತೆ ಅಪಘಾತದಲ್ಲಿ ನಾಲ್ವರು ದಾರುಣ ಸಾವು; ಮೂವರು ಗಂಭೀರ
ಚಿತ್ರದುರ್ಗ, ನೆಲಮಂಗಲ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಚಿತ್ರದುರ್ಗದಲ್ಲಿ DySP ತಾಯಿ ಸೇರಿ ಇಬ್ಬರ ಸಾವಾಗಿದ್ದರೆ, ನೆಲಮಂಗಲದಲ್ಲಿ ಹಿಟ್ ಅಂಡ್ ರನ್ಗೆ ಓರ್ವ ಬಲಿಯಾಗಿದ್ದಾನೆ. ಅತ್ತ ಬೈಕ್ಗೆ ಬಸ್ ಡಿಕ್ಕಿಯಾಗಿ ಯುವಕ ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
- Prasanna Hegde
- Updated on: Jan 11, 2026
- 9:50 am
ನರಿಂಗಾನ ಕಂಬಳ: ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಫಿದಾ
ಉಳ್ಳಾಲ ತಾಲೂಕಿನ ನರಿಂಗಾನದಲ್ಲಿ ನಡೆದ ಲವ-ಕುಶ ಜೋಡುಕರೆ ಕಂಬಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮಾಡಲು ಮತ್ತು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಬೇಡಿಕೆ ಸಲ್ಲಿಸಲಾಯಿತು. ಸಭಾಪತಿ ಯು.ಟಿ. ಖಾದರ್ ಅವರ ನಾಯಕತ್ವದಲ್ಲಿ ನಡೆದ ಈ ಕಂಬಳಕ್ಕೆ ಡಿಸಿಎಂ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು.
- Prasanna Hegde
- Updated on: Jan 11, 2026
- 9:23 am
ಕುಟುಂಬಗಳ ನಡುವೆ ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್ ಫೈಟ್
8 ಎಕರೆ ಗದ್ದೆ ಸಲುವಾಗಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ನದಿಹರಹಳ್ಳಿಯಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಕೆಸರು ಗದ್ದೆಯಲ್ಲಿಯೇ ಪರಸ್ಪರ ಬಡಿದಾಡಿಕೊಂಡಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಹಲ್ಲೆಗೊಳಗಾದವರನ್ನು ತಾಲೂಕು ಮತ್ತು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಮಾರಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Prasanna Hegde
- Updated on: Jan 9, 2026
- 4:55 pm
ರಾಜ್ಯ ರಾಜಕಾರಣದ ಮೇಲೆ ಕಣ್ಣು: ಹೇಗಿದೆ ಗೊತ್ತಾ ನಿಖಿಲ್, ಪ್ರತಾಪ್, ಸುಮಲತಾ ಪ್ಲ್ಯಾನ್?
2028ರ ವಿಧಾನಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ, ಪ್ರತಾಪ್ ಸಿಂಹ ಮತ್ತು ಸುಮಲತಾ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ನಿಖಿಲ್ ಮಂಡ್ಯ ಅಥವಾ ಮದ್ದೂರಿನಿಂದ ಸ್ಪರ್ಧಿಸಲು ಯೋಜಿಸುತ್ತಿದ್ದರೆ, ಪ್ರತಾಪ್ ಮೈಸೂರಿನ ಚಾಮರಾಜ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಸುಮಲತಾ ಕೂಡ ರಾಜ್ಯ ರಾಜಕಾರಣ ಪ್ರವೇಶಿಸುವ ಇರಾದೆ ಹೊಂದಿದ್ದು, ತಮ್ಮ ಭವಿಷ್ಯದ ರಾಜಕೀಯ ತಂತ್ರಗಳ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸೋದಾಗಿ ತಿಳಿಸಿದ್ದಾರೆ.
- Prasanna Hegde
- Updated on: Jan 9, 2026
- 1:14 pm
ಪ್ರತ್ಯೇಕ ಘಟನೆ: ಬಸ್ ಅಪಘಾತದಲ್ಲಿ ಹಲವರಿಗೆ ಗಾಯ; ಓರ್ವ ವಿದ್ಯಾರ್ಥಿ ಸ್ಥಿತಿ ಗಂಭೀರ
ರಾಜ್ಯದ ವಿವಿಧೆಡೆ ಬಸ್ ಅಪಘಾತಗಳು ಸಂಭವಿಸಿದ್ದು, ಪ್ರತ್ಯೇಕ ಘಟನೆಗಳಲ್ಲಿ 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉತ್ತರ ಕನ್ನಡದಲ್ಲಿ ಮರಕ್ಕೆ ಬಸ್ ಡಿಕ್ಕಿಯಾಗಿ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದರೆ, ಕಲಬುರಗಿಯಲ್ಲಿ ವಿದ್ಯಾರ್ಥಿಯ ಕೈ ಛಿದ್ರವಾಗಿದೆ. ಹಾವೇರಿಯಲ್ಲಿಯೂ ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾನೆ. ಈ ಪೈಕಿ ಓರ್ವ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ.
- Prasanna Hegde
- Updated on: Jan 8, 2026
- 1:44 pm
ಅಡಿಕೆ ಫಸಲಿಗೆ ರೋಗದ ಜೊತೆಗೆ ಕೇಂದ್ರದ ಆಮದು ಹೊಡೆತ: ಡಬಲ್ ಶಾಕ್ಗೆ ಕರ್ನಾಟಕದ ಬೆಳೆಗಾರರು ಕಂಗಾಲು
ಕರ್ನಾಟಕ ರಾಜ್ಯದಲ್ಲಿ ಅಡಿಕೆ ಬೆಳೆಗಾರರು ಈಗ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ವಿವಿಧ ರೋಗಗಳ ಹಾವಳಿಯಿಂದ ಅಡಿಕೆ ಇಳುವರಿ ಶೇ.50ಕ್ಕೂ ಹೆಚ್ಚು ಕುಸಿತ ಕಂಡಿದೆ. ಇದರ ಜೊತೆಗೆ, ಕೇಂದ್ರ ಸರ್ಕಾರ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿದು ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ. ರೋಗ ನಿಯಂತ್ರಣಕ್ಕೆ ವಿಜ್ಞಾನಿಗಳೂ ವಿಫಲರಾಗಿದ್ದು, ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುವ ಹಂತ ತಲುಪಿದ್ದಾರೆ.
- Prasanna Hegde
- Updated on: Jan 7, 2026
- 2:48 pm