IPL 2026: ಐಪಿಎಲ್ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್
Virat Kohli Returns to India for IPL 2026: ಲಂಡನ್‌ನಲ್ಲಿದ್ದ ವಿರಾಟ್ ಕೊಹ್ಲಿ, 2026ರ ಐಪಿಎಲ್ ಸಿದ್ಧತೆಗಳಿಗಾಗಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಭಾರತಕ್ಕೆ ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರ ಆಗಮನದ ವೀಡಿಯೊ ವೈರಲ್ ಆಗಿದೆ. ಆರ್‌ಸಿಬಿ ಹಾಲಿ ಚಾಂಪಿಯನ್ ಆಗಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಕೊಹ್ಲಿ ಈಗ ಆರ್‌ಸಿಬಿ ಶಿಬಿರ ಸೇರಿ ಅಭ್ಯಾಸ ಮುಂದುವರೆಸಲಿದ್ದು, ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಯೂರಿರುವ ವಿರಾಟ್ ಕೊಹ್ಲಿ ಇದೀಗ 2026 ರ ಐಪಿಎಲ್ಗಾಗಿ ಭಾರತದಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಿಂದ ತನ್ನ ಮಡದಿ ಅನುಷ್ಕಾ ಶರ್ಮಾ ಅವರೊಂದಿಗೆ ಹೊರಬರುತ್ತಿರುವ ಅವರ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಐಪಿಎಲ್‌ನ 19 ನೇ ಸೀಸನ್‌ಗಾಗಿ ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ಸಿದ್ಧತೆಗಳನ್ನು ಆರಂಭಿಸಿದ್ದರು. ಅದರ ವಿಡಿಯೋಗಳು ಕೂಡ ವೈರಲ್ ಆಗಿದ್ದವು. ಆದಾಗ್ಯೂ, ಭಾರತಕ್ಕೆ ಬಂದ ನಂತರ, ಅವರು ಶೀಘ್ರದಲ್ಲೇ ಆರ್‌ಸಿಬಿ ಶಿಬಿರವನ್ನು ಸೇರಲಿದ್ದು, ತಮ್ಮ ಅಭ್ಯಾಸವನ್ನು ಮುಂದುವರೆಸಿಲಿದ್ದಾರೆ. ಆರ್‌ಸಿಬಿ ಪ್ರಸ್ತುತ ಐಪಿಎಲ್ ಹಾಲಿ ಚಾಂಪಿಯನ್ ಆಗಿರುವ ಕಾರಣ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಬೇಕೆಂಬ ಒತ್ತಡದಲ್ಲಿದೆ. ಹೀಗಾಗಿ ವಿರಾಟ್ ಕೊಹ್ಲಿಯಿಂದ ಈ ಬಾರಿಯೂ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ.
Follow Us
Latest Videos
‘ಕೆಡಿ’ ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ
ಇನ್ಸ್ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ

