Royal Challengers Bengaluru
Royal Challengers Bengaluru
6,6,6,6,6,6,6,6: RCB ಯಿಂದ ಹೊರಬಿದ್ದ ಬೆನ್ನಲ್ಲೇ ಲಿವಿಂಗ್ಸ್ಟೋನ್ ಅಬ್ಬರ ಶುರು
Sharjah Warriorz vs Abu Dhabi Knight Riders: ಮೊದಲು ಬ್ಯಾಟ್ ಮಾಡಿದ ಅಬುಧಾಬಿ ನೈಟ್ ರೈಡರ್ಸ್ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಿವಿಂಗ್ಸ್ಟೋನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಿದ ಲಿವಿಂಗ್ಸ್ಟೋನ್ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ಗಳ ಸುರಿಮಳೆಗೈದರು.
- Zahir Yusuf
- Updated on: Dec 4, 2025
- 10:10 am
IPL 2026: ಗರಿಷ್ಠ ಮೂಲ ಬೆಲೆ ಘೋಷಿಸಿದ RCB ತಂಡದಿಂದ ಹೊರಬಿದ್ದ ಆಟಗಾರರು..!
IPL 2026: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಟ್ಟು 22 ಆಟಗಾರರು ಕಾಣಿಸಿಕೊಂಡಿದ್ದರು. ಈ 22 ಆಟಗಾರರಲ್ಲಿ ಬಹುತೇಕ ಪ್ಲೇಯರ್ಸ್ ಅನ್ನು ಮುಂದಿನ ಸೀಸನ್ಗಾಗಿ ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಇದಾಗ್ಯೂ ಪ್ರಮುಖ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಲುಂಗಿ ಎನ್ಗಿಡಿ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಆರ್‌ಸಿಬಿ ರಿಟೈನ್ ಮಾಡಿಕೊಂಡಿಲ್ಲ. ಇದೀಗ ಈ ಇಬ್ಬರು ಆಟಗಾರರು ಮಿನಿ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
- Zahir Yusuf
- Updated on: Dec 2, 2025
- 12:24 pm
6,6,6,6,6,6: ಸ್ಫೋಟಕ ಸೆಂಚುರಿ ಸಿಡಿಸಿದ ದೇವದತ್ ಪಡಿಕ್ಕಲ್
Syed Mushtaq Ali Trophy 2025: ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್ ಡಿ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಕರ್ನಾಟಕ ಪರ ದೇವದತ್ ಪಡಿಕ್ಕಲ್ ಶತಕ ಸಿಡಿಸಿದ್ದು, ಈ ಮೂಲಕ ಕರ್ನಾಟಕ ತಂಡ ಬೃಹತ್ ಮೊತ್ತ ಪೇರಿಸಿದೆ.
- Zahir Yusuf
- Updated on: Dec 2, 2025
- 11:26 am
RCB: ಒಂದೇ ದಿನ ಅಬ್ಬರಿಸಿದ ಆರ್ಸಿಬಿಯ 6 ಹುಲಿಗಳು; ಅಭಿಮಾನಿಗಳಿಗೆ ಹಬ್ಬವೋ ಹಬ್ಬ
RCB Stars Shine: ನವೆಂಬರ್ 30 ರ ಭಾನುವಾರ ಆರ್‌ಸಿಬಿ ಅಭಿಮಾನಿಗಳಿಗೆ ಸುವರ್ಣ ದಿನವಾಗಿತ್ತು. ಆರು ಆರ್‌ಸಿಬಿ ಆಟಗಾರರು ತಮ್ಮ ಕ್ರಿಕೆಟ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ತಂಡಗಳ ಗೆಲುವಿಗೆ ಕಾರಣರಾದರು. ವಿರಾಟ್ ಕೊಹ್ಲಿ ಶತಕ ಸಿಡಿಸಿದರೆ, ರಜತ್ ಪಾಟಿದಾರ್ ಮತ್ತು ಜಿತೇಶ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಅಬುಧಾಬಿ T10 ಲೀಗ್‌ನಲ್ಲಿ ಫಿಲ್ ಸಾಲ್ಟ್, ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ ಸಹ ಮಿಂಚಿದರು.
- pruthvi Shankar
- Updated on: Dec 1, 2025
- 5:48 pm
ಮತ್ತೊಂದು ಟ್ರೋಫಿ ಎತ್ತಿ ಹಿಡಿದ RCB ಬಾಯ್ಸ್
Aspin Stallions vs UAE Bulls: ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಕೋಚ್ ಆ್ಯಂಡಿ ಫ್ಲವರ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಹಾಗೂ ಫಿಲ್ ಸಾಲ್ಟ್ ಜೊತೆಯಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಮೂಲಕ ಆರ್‌ಸಿಬಿ ಬಾಯ್ಸ್ ಮತ್ತೊಂದು ಟ್ರೋಫಿಯನ್ನು ಎತ್ತಿ ಹಿಡಿದಿರುವ ಸಂತಸ ಹಂಚಿಕೊಂಡಿದ್ದಾರೆ.
- Zahir Yusuf
- Updated on: Dec 1, 2025
- 11:53 am
IPL 2026: ಸತತ 14 ವರ್ಷಗಳ ಐಪಿಎಲ್ ಪ್ರಯಾಣಕ್ಕೆ ಅಂತ್ಯ ಹಾಡಿದ ಆರ್‌ಸಿಬಿ ಮಾಜಿ ನಾಯಕ
Faf du Plessis IPL Auction 2026: ಫಾಫ್ ಡು ಪ್ಲೆಸಿಸ್ 2026ರ ಐಪಿಎಲ್ ಮಿನಿ ಹರಾಜಿನಿಂದ ಹಿಂದೆ ಸರಿದಿದ್ದಾರೆ. 14 ವರ್ಷಗಳ ಯಶಸ್ವಿ ಐಪಿಎಲ್ ಪಯಣದ ನಂತರ, ಹೊಸ ಸವಾಲನ್ನು ಎದುರಿಸಲು ಪಿಎಸ್ಎಲ್ನಲ್ಲಿ ಆಡಲು ನಿರ್ಧರಿಸಿದ್ದಾರೆ ಎಂದು ಅವರು ನವೆಂಬರ್ 29 ರಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಸಿಎಸ್‌ಕೆ, ಆರ್‌ಸಿಬಿ ಮತ್ತು ಡೆಲ್ಲಿ ಪರ ಆಡಿದ್ದ ಫಾಫ್ ಭಾರತ ಮತ್ತು ಐಪಿಎಲ್ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಹೇಳಿದ್ದಾರೆ.
- pruthvi Shankar
- Updated on: Nov 29, 2025
- 8:31 pm
ಐಪಿಎಲ್‌ನಲ್ಲಿ ಮಾರಾಟಕ್ಕಿವೆ 2 ತಂಡಗಳು..! ಸಂಚಲನ ಮೂಡಿಸಿದ 36000 ಕೋಟಿ ಒಡೆಯನ ಪೋಸ್ಟ್
IPL Franchise Sale: 2026ರ ಐಪಿಎಲ್ ಸಿದ್ಧತೆಗೂ ಮುನ್ನ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳು ಮಾರಾಟಕ್ಕಿವೆ ಎಂಬ ಸ್ಫೋಟಕ ಸುದ್ದಿ ಹರಿದಾಡುತ್ತಿದೆ. ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅನೇಕ ಸಂಭಾವ್ಯ ಖರೀದಿದಾರರು ಆಸಕ್ತಿ ತೋರಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
- pruthvi Shankar
- Updated on: Nov 28, 2025
- 4:05 pm
WPL Auction 2026: ಆರ್‌ಸಿಬಿ ಸೇರಿದ 12 ಆಟಗಾರ್ತಿರು ಇವರೇ.. ಇಲ್ಲಿದೆ ಪೂರ್ಣ ತಂಡ
RCB Team WPL 2026 Players List: ನವದೆಹಲಿಯಲ್ಲಿ ನಡೆದ WPL ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಹೊಸ ಆಟಗಾರ್ತಿಯರನ್ನು ಸೇರಿಸಿಕೊಂಡಿದೆ. 2024ರ ಚಾಂಪಿಯನ್ ಆಗಿದ್ದ ಆರ್‌ಸಿಬಿ, 6.15 ಕೋಟಿ ಬಜೆಟ್ ಬಳಸಿ ಸ್ಮೃತಿ ಮಂಧಾನಾ, ಎಲ್ಲಿಸ್ ಪೆರ್ರಿ ಸೇರಿದಂತೆ ಪ್ರಮುಖರನ್ನು ಉಳಿಸಿಕೊಂಡು ಪ್ರಬಲ ತಂಡ ರಚಿಸಿದೆ. ಹರಾಜಿನಲ್ಲಿ ಖರೀದಿಸಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ.
- pruthvi Shankar
- Updated on: Nov 27, 2025
- 10:17 pm
WPL Auction 2026: ಆರ್‌ಸಿಬಿ ಸೇರಿದ ಟೀಂ ಇಂಡಿಯಾದ ಲೇಡಿ ಸೂಪರ್ ಸ್ಟಾರ್
WPL 2026 Mega Auction: WPL 2026 ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ₹65 ಲಕ್ಷಕ್ಕೆ ಸ್ಟಾರ್ ಸ್ಪಿನ್ನರ್ ರಾಧಾ ಯಾದವ್ ಅವರನ್ನು ಖರೀದಿಸಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ 276 ಆಟಗಾರ್ತಿಯರನ್ನು ಬಿಡ್ ಮಾಡಲಾಗುತ್ತಿದೆ. ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ರಾಧಾ ಯಾದವ್ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದಾರೆ. ರಾಧಾ ಅವರ ಸ್ಪಿನ್ ಬೌಲಿಂಗ್ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ಸಾಮರ್ಥ್ಯದಿಂದ ಆರ್‌ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಲಿದೆ.
- pruthvi Shankar
- Updated on: Nov 27, 2025
- 6:40 pm
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್ನ ಚಾರ್ಜ್ಶೀಟ್ ರೆಡಿ: ಘಟನೆಗೆ RCB ಹೊಣೆ ಎಂದ CID
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ 11 ಜನರ ಸಾವಿಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಚಾರ್ಜ್ ಶೀಟ್ ಸಿದ್ಧಪಡಿಸಿದ್ದಾರೆ. ಆರ್‌ಸಿಬಿ, ಕೆಎಸ್ಸಿಎ ಮತ್ತು ಡಿಎನ್ಎ ಸಂಸ್ಥೆಗಳು ಘಟನೆಗೆ ನೇರ ಹೊಣೆ ಎಂದು ತನಿಖೆ ವೇಳೆ ಸಾಬೀತಾಗಿದೆ. ಸರಿಯಾದ ಯೋಜನೆ ಇಲ್ಲದಿರುವುದು, ಟಿಕೆಟ್ ಗೊಂದಲ ಹಾಗೂ ಭದ್ರತಾ ವೈಫಲ್ಯ ಸಾವಿಗೆ ಕಾರಣ ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ. 2,200ಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧವಾಗಿದೆ.
- Shivaprasad B
- Updated on: Nov 19, 2025
- 12:22 pm