ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್ ಮಾಧ್ಯಮದಿಂದ. ಒನ್ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.
ಬಸ್ ನಿಲ್ಲಿಸಿ ನಮಾಜ್ ಮಾಡಿದ ಕೆಎಸ್ಆರ್ಟಿಸಿ ಚಾಲಕ, ವಿಡಿಯೋ ವೈರಲ್
ಪ್ರಯಾಣಿಕರಿದ್ರೂ ಸಹ ಚಾಲಕನೋರ್ವ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದಾನೆ. ನಿನ್ನೆ (ಏಪ್ರಿಲ್ 29) ಸಂಜೆ ಹುಬ್ಬಳ್ಳಿಯಿಂದ ಹಾವೇರಿಯತ್ತ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ಸನ್ನು ಮಾರ್ಗಮಧ್ಯ ನಿಲ್ಲಿಸಿ ನಮಾಜ್ ಮಾಡಿದ್ದಾನೆ. ಬಸ್ ನಲ್ಲಿ ಪ್ರಯಾಣಿಕರನ್ನ ಇದ್ದರೂ ಕರ್ತವ್ಯದ ಅವಧಿಯಲ್ಲಿಯೇ ಹಾನಗಲ್ ಟು ವಿಶಾಲಗಡ್ ಬಸ್ ಡ್ರೈವರ್ ಕಂ ಕಂಡಕ್ಟರ್ ಸೀಟಿನ ಮೇಲೆ ಕುಳಿತು ನಮಾಜ್ ಮಾಡಿದ್ದು, ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ,
- Ramesh B Jawalagera
- Updated on: Apr 30, 2025
- 5:47 pm
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರು ಕೂಲ್ ಕೂಲ್…ಮಳೆ ಅಬ್ಬರ ಹೇಗಿತ್ತು ನೋಡಿ
ಬಿಸಿ ಬಿಸಿ ಗಾಳಿ, ಸೆಕೆಯಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗರಿಗೆ ಮಳೆರಾಯ ತಂಪೆರದಿದ್ದಾನೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 30) ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಇದೀಗ ಬೆಂಗಳೂರಿನಲ್ಲಿ ಇಂದು ಸಂಜೆ ಗಾಳಿ ಸಹಿತ ಮಳೆಯಾಗುತ್ತಿದೆ.
- Ramesh B Jawalagera
- Updated on: Apr 30, 2025
- 5:30 pm
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ: ಕಾರಣವೇನು?
ದೇವನಹಳ್ಳಿಯ ಬಾಲೇಪುರ ಕಲ್ಯಾಣ ಮಂಟಪದಲ್ಲಿ (Devanahalli Balepura Kalyana Mantap) ಇಂದು ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಅರ್ಧಕ್ಕೆ ನಿಂತಿದೆ. ನಿನ್ನೆ (ಏಪ್ರಿಲ್ 29) ಸಂಜೆ ಅದ್ಧೂರಿಯಾಗಿ ಅರಕ್ಷತೆ ನಡೆದಿದೆ. ಆದ್ರೆ, ಇಂದು (ಏಪ್ರಿಲ್ 30) ಬೆಳಗ್ಗೆ ಮುಹೂರ್ತದ ಸಮಯದಲ್ಲಿ ಗಂಡು, ಈ ಮದುವೆ ಬೇಡ ಎಂದಿದ್ದು, ತಾಳಿಕಟ್ಟದೇ ಎದ್ದು ಮಂಟಪದಿಂದ ಹೊರನಡೆದಿದ್ದಾನೆ.
- Ramesh B Jawalagera
- Updated on: Apr 30, 2025
- 4:32 pm
Pahalgam Terror Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ಉಗ್ರರ ದಾಳಿ ಭೀಕರ ದೃಶ್ಯ ಸೆರೆ
ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೋ ಸಿಕ್ಕಿದೆ. ಗುಜರಾತ್ ನ ಅಹ್ಮದಾಬಾದ್ ನಿವಾಸಿಯೊಬ್ಬರು ಅಂದು ಪಹಲ್ಗಾಮ್ ಗೆ ಆಗಮಿಸಿದ್ದರು. ಈ ವೇಳೆ ರೋಪ್ ಕ್ರಾಸಿಂಗ್ ಮಾಡುವ ವೇಳೆ ಅವರು ಸೆಲ್ಫಿ ಕ್ಯಾಮೆರಾದಲ್ಲಿ ರೋಚಕ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಆದರೆ ಅದೇ ಕ್ಯಾಮೆರಾದಲ್ಲಿ ಅವರಿಗೇ ಅರಿವಿಲ್ಲದಂತೆ ಉಗ್ರರ ಪೈಶಾಚಿಕ ಕೃತ್ಯಕೂಡ ಸೇರಿಯಾಗಿದೆ.
- Ramesh B Jawalagera
- Updated on: Apr 28, 2025
- 7:50 pm
ಇನ್ಫೋಸಿಸ್ ಸಹ ಸಂಸ್ಥಾಪಕ ಸೇರಿ 18 ಮಂದಿ ವಿರುದ್ಧ ದಾಖಲಾಗಿದ್ದ ಅಟ್ರಾಸಿಟಿ ಕೇಸ್ ರದ್ದುಗೊಳಿಸಿದ ಹೈಕೋರ್ಟ್
ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಆಡಳಿತ ಮಂಡಳಿ ಅಧ್ಯಕ್ಷ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್, ಐಐಎಸ್ಸಿ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ಸೇರಿ 16 ಮಂದಿ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನು ಕೋರ್ಟ್ ರದ್ದುಗೊಳಿಸಿದೆ. ಹಾಗಾದ್ರೆ, ಏನಿದು ಪ್ರಕರಣ? ಈಗ ಹೈಕೋರ್ಟ್ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
- Ramesh B Jawalagera
- Updated on: Apr 28, 2025
- 5:20 pm
ಬಸ್ ಬ್ರೇಕ್ ಫೇಲ್ ಆದಾಗ ಡ್ರೈವರ್ನ ಐಡಿಯಾಕ್ಕೆ 60 ಜನರು ಸೇಫ್, ನಿಟ್ಟುಸಿರು ಬಿಟ್ಟ ಪ್ರಯಾಣಿಕರು
ಮಹದೇಶ್ವರಬೆಟ್ಟದ ತಾಳಬೆಟ್ಟ ತಿರುವಿನಲ್ಲಿ KSRTC ಬಸ್ ಬ್ರೇಕ್ ಫೇಲ್ ಆಗಿದೆ. ಕೂಡಲೇ ಎಚ್ಚೆತ್ತ ಡ್ರೈವರ್ ಉಪಾಯದಿಂದ ಬಸ್ನ್ನು ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಇದರಿಂದ ಬಸ್ ನಿಂತುಕೊಂಡಿದ್ದು, ಅದೃಷ್ಟವಶಾತ್ ಬಸ್ನಲ್ಲಿ 60ಕ್ಕೂ ಹೆಚ್ಚು ಜನರು ಬಚಾವ್ ಆಗಿದ್ದಾರೆ. KA 09 F 5311 ಸಂಖ್ಯೆಯ ಮೈಸೂರು ಡಿಪೋದ KSRTC ಬಸ್, ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು.
- Ramesh B Jawalagera
- Updated on: Apr 27, 2025
- 4:22 pm
ಕರ್ನಾಟಕದಲ್ಲಿ ನೆಲೆಸಿರುವ ಪಾಕ್ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ ಇಟ್ಟ ಗೃಹ ಸಚಿವ
ಪಹಲ್ಗಾಮ್ ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಪಾಕಿಸ್ತಾನ ವಿರುದ್ಧ ಕೆಲ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದು, ಭಾರತದಲ್ಲಿ ನೆಲೆಸಿರೋ ಪಾಕಿಸ್ತಾನ ಪ್ರಜೆಗಳನ್ನು ಪಟ್ಟಿ ಮಾಡಿ ಅವರ ದೇಶಕ್ಕೆ ಕಳುಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಎಲ್ಲಾ ಮುಖ್ಯಂತ್ರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ರಾಜ್ಯ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
- Ramesh B Jawalagera
- Updated on: Apr 27, 2025
- 1:34 pm
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ!
ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡಬಾರದು ಎಂದು ಸಿದ್ದರಾಮಯ್ಯನವರು ಹೇಳಿಕೆ ಪಾಕಿಸ್ತಾನ ಮೀಡಯಾಗಳು ಸುದ್ದಿ ಪ್ರಸಾರ ಮಾಡಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಇದನ್ನೇ ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಇನ್ನು ಇದಕ್ಕೆ ಇದೀಗ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
- Ramesh B Jawalagera
- Updated on: Apr 27, 2025
- 1:11 pm
ಪಹಲ್ಗಾಮ್ ದಾಳಿ: ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ, ಅಷ್ಟಕ್ಕೂ ಸುದ್ದಿಯಲ್ಲೇನಿದೆ?
Pahalgam terror attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಭೀಕರ ದಾಳಿ ಬಳಿಕ ಪ್ರತೀಕಾರದ ಕೂಗು ಭಾರತದಲ್ಲಿ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲೇ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಪಾಕಿಸ್ತಾನದ ಟಿವಿಗಳಲ್ಲಿ ಪ್ರಸಾರವಾಗಿದೆ. ಪಾಕ್ ಟಿವಿಗಳಲ್ಲಿ ಸಿಎಂ ಸಿದ್ದರಾಮಯ್ಯ ಬ್ರೇಕಿಂಗ್ ನ್ಯೂಸ್ ಆಗಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೇ ವಿಪಕ್ಷ ಬಿಜೆಪಿ ಕಿಡಿಕಾಎಇದೆ. ಅಷ್ಟಕ್ಕೂ ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾಗುವಷ್ಟು ಸಿದ್ದರಾಮಯ್ಯ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
- Ramesh B Jawalagera
- Updated on: Apr 27, 2025
- 11:08 am
Pahalgam Attack: ಪಹಲ್ಗಾಮ್ ದಾಳಿ ಸಂಬಂಧ ಸರ್ವಪಕ್ಷ ಸಭೆಯಲ್ಲಿ ಏನೇನಾಯ್ತು? ಇಲ್ಲಿದೆ ವಿವರ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಇದೀಗ ಭಾರತ ತಕ್ಕ ಉತ್ತರ ನೀಡಲು ಸಜ್ಜಾಗಿದೆ. ಈಗಾಗಲೇ ಪಾಕಿಸ್ತಾನ ವಿರುದ್ಧ ಕೆಲ ಮಹತ್ವದ ತೀರ್ಮಾನಗಳನ್ನ ತೆಗೆದುಕೊಂಡಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಮಾಯಕರ ಜೀವ ತೆಗೆದ ಪಾಪಿ ಉಗ್ರರನ್ನು ಹಿಗ್ಗಾಮುಗ್ಗಾ ಅಟ್ಟಾಡಿಸಿಕೊಂಡು ಹೊಡೆದು ಹಾಕುವ ಪ್ರತಿಜ್ಞೆ ಕೂಡ ಮಾಡಿದ್ದಾರೆ. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ಸಭೆಯಲ್ಲಿ ಏನೇನು ಆಯ್ತು ಎನ್ನುವ ವಿವರ ಇಲ್ಲಿದೆ.
- Ramesh B Jawalagera
- Updated on: Apr 24, 2025
- 9:07 pm
ಪಹಲ್ಗಾಮ್ ಎನ್ನುವ ಸ್ವರ್ಗದಲ್ಲಿ ತೇಲಾಡುವಾಗ ಕಣ್ಣೆದುರೇ ಗಂಡನನ್ನ ಕೊಂದ ಉಗ್ರರ ಭೀಕರತೆ ಬಿಚ್ಚಿಟ್ಟ ಪತ್ನಿ
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಜೀವ ಕಳೆದುಕೊಂಡ ಶಿವಮೊಗ್ಗದ ಮಂಜುನಾಥ್ ರಾವ್ ಪಂಚಭೂತಗಳಲ್ಲಿ ಲೀನರಾದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಜುನಾಥ್ ರಾವ್ ಅವರ ಹೆಂಡತಿ ಪಲ್ಲವಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಭೀಕರತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
- Ramesh B Jawalagera
- Updated on: Apr 24, 2025
- 5:35 pm
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಶಿವಮೊಗ್ಗದ ಮಂಜುನಾಥ್ ಬಲಿಯಾಗಿದ್ದು, ಅವರ ಅಂತ್ಯಕ್ರಿಯೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನೆಡೆಯಿತು. ಇನ್ನು ಅಂತ್ಯಕ್ರಿಯೆಗೂ ಮುನ್ನ ಅವರ ಪತ್ನಿ ಕೊನೆಯ ಬಾರಿಗೆ ಪತಿಯ ಕೈಹಿಡಿದು ಕಣ್ಣೀರಿಟ್ಟ ಪ್ರಸಂಗ ಎಂತಹ ಕಟು ಹೃದಯದವರನ್ನು ಕೂಡ ಕರಗಿಸುವಂತಹ ಕ್ಷಣಕ್ಕೆ ಸಾಕ್ಷಿಯಾಯ್ತು. ಪತ್ನಿ ಪಲ್ಲವಿಯ ಅಳು ನೋಡುತ್ತಿದ್ದ ನೆರೆದಿದ್ದವರ ಕಣ್ಣಾಲಿಗಳು ಕೂಡ ತೇವವಾಗಿದ್ದವು.
- Ramesh B Jawalagera
- Updated on: Apr 24, 2025
- 4:58 pm