AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: 9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ

ಹಾಸನ: 9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ

ಮಂಜುನಾಥ ಕೆಬಿ
| Edited By: |

Updated on: Feb 26, 2026 | 9:33 PM

Share

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ, ಕೆನರಾ ಬ್ಯಾಂಕ್ 9.34 ರೂಪಾಯಿ ಬಾಕಿ ಸಾಲಕ್ಕಾಗಿ ಹಿರಿಯ ಗ್ರಾಹಕರನ್ನು ಸಂಪರ್ಕಿಸಿದೆ. 10 ರೂಪಾಯಿ ಪಾವತಿಸಿದ ಗ್ರಾಹಕರು, ಬ್ಯಾಂಕ್ 64 ಪೈಸೆ ಚಿಲ್ಲರೆ ಹಿಂದಿರುಗಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡ ಸಾಲಗಾರರನ್ನು ಬಿಟ್ಟು ಬಡ ರೈತನಿಗೆ ಕಿರುಕುಳ ನೀಡುತ್ತಿರುವುದಕ್ಕೆ ಪ್ರಶ್ನಿಸಿ, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಹಾಸನ, ಫೆಬ್ರವರಿ 26: ಜಿಲ್ಲೆಯ ಸಕಲೇಶಪುರದಲ್ಲಿರುವ ಕೆನರಾ ಬ್ಯಾಂಕ್ ವಿರುದ್ಧ ಹಳೆ ಗ್ರಾಹಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 15-20 ವರ್ಷಗಳಿಂದ ಬ್ಯಾಂಕಿನ ಗ್ರಾಹಕರಾಗಿರುವ ಮತ್ತು ಬೆಳೆ ಸಾಲಗಳಂತಹ ವ್ಯವಹಾರ ಮಾಡುತ್ತಿರುವ ರೈತನಿಗೆ, ಬ್ಯಾಂಕ್‌ನಿಂದ 9 ರೂಪಾಯಿ 34 ಪೈಸೆ ಬಾಕಿ ಸಾಲ ಪಾವತಿಸುವಂತೆ ಬೆನ್ನುಬಿದ್ದಿದೆ. ಇದೀಗ ಹತ್ತು ರೂ ಲೋನ್ ಕಟ್ಟಿರುವ ಗ್ರಾಹಕ ಚೊಕ್ಕಣ್ಣ ಗೌಡ 66 ಪೈಸೆ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ನಿನ್ನೆ ಏಕಾಏಕಿ ಕರೆ ಮಾಡಿ 9 ರೂ 34 ಪೈಸೆ ಸಾಲ ಕ್ಲಿಯರ್ ಮಾಡಲು ಬ್ಯಾಂಕ್ ಸಿಬ್ಬಂದಿ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಚೊಕ್ಕಣ್ಣ ಗೌಡ 10 ರೂ ಹಣ ಕೊಟ್ಟು ಸಾಲ ಕ್ಲಿಯರ್ ಮಾಡಿದ್ದಾರೆ. ರಸಿದಿಯಲ್ಲಿ 9 ರೂ 34 ಪೈಸೆ ಉಲ್ಲೇಖಿಸಿ 66 ಪೈಸೆ ವಾಪಸ್​ ಕೊಟ್ಟಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಸಾವಿರಾರು ಕೋಟಿ ಸಾಲ ಮಾಡಿ ಊರು ಬಿಟ್ಟವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಸಾಲ ಮಾಡಿ ವಾಪಸ್ ಕಟ್ಟುವ ಬಡ ರೈತರಿಗೆ ತೊಂದರೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us