Dam Water Level
Reservoir Level and Storage Bulletin – ಕರ್ನಾಟಕದ ಪ್ರಮುಖ ಜಲಾಶಯಗಳು ಕೃಷಿ, ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಜೀವನಾಡಿಯಾಗಿವೆ. ರಾಜ್ಯದಲ್ಲಿ ಸುಮಾರು 230ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಅಣೆಕಟ್ಟುಗಳಿವೆ. ಇವುಗಳಲ್ಲಿ 20ಕ್ಕೂ ಹೆಚ್ಚು ಪ್ರಮುಖ ಜಲಾಶಯಗಳಾಗಿವೆ. ಮಂಡ್ಯದ ಐತಿಹಾಸಿಕ ಕೆಆರ್‌ಎಸ್ (ಕಾವೇರಿ), ಉತ್ತರ ಕರ್ನಾಟಕದ ಆಸರೆಯಾದ ತುಂಗಭದ್ರಾ ಮತ್ತು ಅಲ್ಮಟ್ಟಿ (ಕೃಷ್ಣಾ) ಹಾಗೂ ರಾಜ್ಯದಲ್ಲೇ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಶಿವಮೊಗ್ಗದ ಲಿಂಗನಮಕ್ಕಿ (ಶರಾವತಿ) ಜಲಾಶಯಗಳು ರಾಜ್ಯದ ಅಭಿವೃದ್ಧಿಗೆ ಮತ್ತು ಪ್ರವಾಸೋದ್ಯಮಕ್ಕೆ ಪ್ರಮುಖ ಕೊಡುಗೆ ನೀಡಿವೆ. ಬೆಂಗಳೂರಿನ ಜನರಿಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರ (KRS) ಜಲಾಶಯವೇ ಜೀವಾಳವಾಗಿದೆ.
ಇನ್ನೂ ಹೆಚ್ಚು ಓದಿರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಆಲಮಟ್ಟಿ, ಕಬಿನಿ, KRS ಡ್ಯಾಂ ಇಂದಿನ ಕಂಪ್ಲೀಟ್ ರಿಪೋರ್ಟ್
ಅಕ್ಟೋಬರ್ 1 ರಂದು ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ. ಕೆಆರ್‌ಎಸ್, ಕಬಿನಿ, ಹೇಮಾವತಿ, ತುಂಗಭದ್ರಾ, ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳ ಪ್ರಸ್ತುತ ನೀರಿನ ಸಂಗ್ರಹ ಸಾಮರ್ಥ್ಯದೊಂದಿಗೆ, ಅವುಗಳ ಇಂದಿನ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವರದಿ ರೈತರಿಗೆ ಮತ್ತು ನೀರಾವರಿ ನಿರ್ವಹಣೆಗೆ ಸಹಾಯಕ.
- Akshay Pallamajalu
- Updated on: Oct 1, 2026
- 11:11 am
ಕರ್ನಾಟಕ ಡ್ಯಾಂಗಳ ನೀರಿನ ಮಟ್ಟ: ಕೆಆರ್‌ಎಸ್, ಕಬಿನಿ, ಆಲಮಟ್ಟಿ, ಬಸವಸಾಗರ, ಹೇಮಾವತಿ ಜಲಾಶಯಗಳ ಇಂದಿನ ವಿವರ
ಕರ್ನಾಟಕದ ಪ್ರಮುಖ ಜಲಾಶಯಗಳ ಸೆಪ್ಟೆಂಬರ್ 30 ರ ನೀರಿನ ಮಟ್ಟದ ವಿವರ: ಬೆಂಗಳೂರಿಗರ ಕುಡಿಯುವ ನೀರಿನ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯದಲ್ಲಿ ಇಂದು 104.42 ಅಡಿ ನೀರಿದ್ದು, 26.477 ಟಿಎಂಸಿ ಸಂಗ್ರಹವಿದೆ. ಉತ್ತರ ಕರ್ನಾಟಕದ ಪ್ರಮುಖ ಜಲಾಶಯ ಆಲಮಟ್ಟಿಯಲ್ಲಿ 518.53 ಮೀಟರ್ ನೀರಿನ ಸಂಗ್ರಹವಿದೆ. ಉಳಿದಂತೆ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ.
- Ganapathi Sharma
- Updated on: Sep 30, 2026
- 11:43 am
ಕರ್ನಾಟಕ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಕೆಆರ್‌ಎಸ್‌ನಲ್ಲಿ ಒಳಹರಿವಿಗಿಂತ ಹೊರ ಹರಿವೇ ಹೆಚ್ಚು!
ಕರ್ನಾಟಕ ಡ್ಯಾಂಗಳ ನೀರಿನ ಮಟ್ಟ ಸೆಪ್ಟೆಂಬರ್ 29: ಮುಂಗಾರು ಮಳೆಯ ಕೊರತೆಯ ಕಾರಣ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯೇ ಮುಂದುವರಿದಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಮುಖ್ಯ ಜಲಾಶಯವಾಗಿರುವ ಮಂಡ್ಯ ಶ್ರೀರಂಗಪಟ್ಟಣದ ಕೆಆರ್‌ಎಸ್ ಜಲಾಶಯದಲ್ಲಿ ಒಳಹರಿವಿಗಿಂತ ಹೊರಹರಿವೇ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.
- Ganapathi Sharma
- Updated on: Sep 29, 2026
- 11:51 am
ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಒಂದೇ ತಿಂಗಳಲ್ಲಿ ಬರಿದಾದ ಹೇಮಾವತಿ ಜಲಾಶಯ: ಕೇವಲ 10.5 ಟಿಎಂಸಿ ನೀರು ಲಭ್ಯ
ಕರ್ನಾಟಕದ ಜಲಾಶಯಗಳ (ಸೆಪ್ಟೆಂಬರ್ 25) ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳಾದ ಮಂಡ್ಯದ ಕೆಆರ್‌ಎಸ್, ವಿಜಯಪುರದ ಆಲಮಟ್ಟಿ ಹಾಗೂ ಯಾದಗಿರಿಯ ಬಸವಸಾಗರ ಡ್ಯಾಂಗಳ ಸೆಪ್ಟೆಂಬರ್ 25ರ ಇಂದಿನ ನೀರಿನ ಮಟ್ಟ, ಸಂಗ್ರಹ ಸಾಮರ್ಥ್ಯ, ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಪ್ರಮುಖ ಜಲಾಶಯಗಳ ಅಪ್‌ಡೇಟ್ಸ್ ಪಡೆಯಿರಿ.
- Bhavana Hegde
- Updated on: Sep 25, 2026
- 12:27 pm
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ: ಜನವರಿ ತಿಂಗಳ ಒಳಗಾಗಿಯೇ ಜಲಕ್ಷಾಮದ ಭೀತಿ
ತಮಿಳುನಾಡಿಗೆ ನಿತ್ಯ 4,000 ಕ್ಯೂಸೆಕ್ ಕಾವೇರಿ ನೀರು ಹರಿಸಲು CWMA ಆದೇಶಿಸಿರುವ ನಡುವೆ ಕೆಆರ್‌ಎಸ್ ಸೇರಿದಂತೆ ಕಾವೇರಿ ಜಲಾನಯನದ ನಾಲ್ಕು ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿದ್ದು, ರಾಜ್ಯದಲ್ಲಿ ಜನವರಿ ವೇಳೆಗೆ ಕುಡಿಯುವ ನೀರಿಗೂ ತೀವ್ರ ಹಾಹಾಕಾರ ಎದುರಾಗುವ ಭೀತಿ ಎದುರಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 4,000 ಕ್ಯೂಸೆಕ್ ನೀರು ಬಿಡಲು CWMA ಆದೇಶಿಸುರುವ ಕಾರಣ ಆತಂಕ ಹೆಚ್ಚಿದೆ.
- Dileep CP
- Updated on: Sep 25, 2026
- 8:11 am
ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಕೆಆರ್‌ಎಸ್, ಕಬಿನಿ, ಹೇಮಾವತಿ ಹಾಗೂ ಆಲಮಟ್ಟಿ ಡ್ಯಾಂ ಲೈವ್ ರಿಪೋರ್ಟ್
ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಕಬಿನಿ, ಹೇಮಾವತಿ ಹಾಗೂ ಆಲಮಟ್ಟಿ ಡ್ಯಾಂಗಳ ಇಂದಿನ (ಸೆ.24) ನೀರಿನ ಮಟ್ಟದ ಸಂಪೂರ್ಣ ಮಾಹಿತಿ ಇಲ್ಲಿದೆ. ನೀರಾವರಿ ಇಲಾಖೆ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಜಲಾಶಯಗಳಲ್ಲಿನ ಒಳಹರಿವು, ಹೊರಹರಿವು ಮತ್ತು ನೀರಿನ ಸಂಗ್ರಹದ ನಿಖರ ವಿವರಗಳನ್ನು ಒದಗಿಸಲಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ಪ್ರಸ್ತುತ ಸ್ಥಿತಿಗತಿಗಳನ್ನು ಈ ವರದಿ ತಿಳಿಸುತ್ತದೆ.
- Akshay Pallamajalu
- Updated on: Sep 24, 2026
- 11:02 am
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಆಲಮಟ್ಟಿ, ಕಬಿನಿ, ಬಸವಸಾಗರ ಮತ್ತು ಕೆಆರ್‌ಎಸ್ ಜಲಾಶಯಗಳ ಅಪ್‌ಡೇಟ್!
ಕರ್ನಾಟಕದ ಜಲಾಶಯಗಳ (ಸೆಪ್ಟೆಂಬರ್ 23) ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಬಸವಸಾಗರ, ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳ ಇಂದಿನ ನೀರಿನ ಮಟ್ಟ, ಸಂಗ್ರಹ ಸಾಮರ್ಥ್ಯ, ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ. ಪ್ರಸ್ತುತ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗೆ ಡ್ಯಾಂ ನೀರೇ ಪ್ರಮುಖ ಆಸರೆಯಾಗಿದೆ.
- Bhavana Hegde
- Updated on: Sep 23, 2026
- 12:08 pm
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಕೆಆರ್‌ಎಸ್, ಆಲಮಟ್ಟಿ ಸೇರಿದಂತೆ ಪ್ರಮುಖ ಡ್ಯಾಮ್ಗಳ ನೀರಿನ ಮಟ್ಟ ಇಲ್ಲಿದೆ
ಕರ್ನಾಟಕದ ಜಲಾಶಯಗಳ (ಸೆಪ್ಟೆಂಬರ್ 22) ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಆಲಮಟ್ಟಿ, ಹೇಮಾವತಿ ಹಾಗೂ ಕಬಿನಿ ಡ್ಯಾಂ ಸಂಪೂರ್ಣ ನೀರಿನ ಮಟ್ಟದ ಇಂದಿನ ವರದಿ ಇಲ್ಲಿದೆ. ಕಾವೇರಿ ಮತ್ತು ಕೃಷ್ಣಾ ನದಿ ಪಾತ್ರದ ಜಲಾಶಯಗಳ ಪ್ರಸ್ತುತ ನೀರಿನ ಸಂಗ್ರಹ, ಒಳಹರಿವು ಹಾಗೂ ನದಿ-ಕಾಲುವೆಗಳಿಗೆ ಬಿಡಲಾಗುತ್ತಿರುವ ಹೊರಹರಿವಿನ ಸಂಪೂರ್ಣ ಅಂಕಿಅಂಶಗಳ ವಿವರ ಇಲ್ಲಿದೆ.
- Bhavana Hegde
- Updated on: Sep 22, 2026
- 12:44 pm
ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಆಲಮಟ್ಟಿ, ತುಂಗಭದ್ರಾ, ಹೇಮಾವತಿ ಡ್ಯಾಂಗಳ ಇಂದಿನ ಹರಿವಿನ ಸಂಪೂರ್ಣ ವರದಿ ಇಲ್ಲಿದೆ
ರಾಜ್ಯದ ಪ್ರಮುಖ ಜಲಾಶಯಗಳಾದ ಕಬಿನಿ, ಆಲಮಟ್ಟಿ, ಹೇಮಾವತಿ, ತುಂಗಭದ್ರಾ ಮತ್ತು ಬಸವಸಾಗರ ಜಲಾಶಯಗಳ ಇಂದಿನ (ಸೆಪ್ಟೆಂಬರ್ 21, 2026) ನೀರಿನ ಮಟ್ಟದ ವಿವರಗಳು ಲಭ್ಯ. ಮುಂಗಾರು ಮಳೆಯ ವ್ಯತ್ಯಾಸದಿಂದಾಗಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಒಳಹರಿವು ಮತ್ತು ಹೊರಹರಿವಿನ ಬಗ್ಗೆ ತಾಜಾ ಅಂಕಿ-ಅಂಶಗಳನ್ನು ನೀಡಲಾಗಿದೆ. ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಸಂಗ್ರಹವಿದ್ದು, ಆಲಮಟ್ಟಿ ಮತ್ತು ತುಂಗಭದ್ರಾ ಉತ್ತಮ ಮಟ್ಟದಲ್ಲಿವೆ.
- Akshay Pallamajalu
- Updated on: Sep 21, 2026
- 11:08 am
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ: ಆಲಮಟ್ಟಿ, ಬಸವಸಾಗರ ಹಾಗೂ ಕಬಿನಿ ಡ್ಯಾಂಗಳ ಇಂದಿನ ಸ್ಥಿತಿಗತಿ ಇಲ್ಲಿದೆ
ಕರ್ನಾಟಕದ ಜಲಾಶಯಗಳ (ಸೆಪ್ಟೆಂಬರ್ 20) ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಬಸವಸಾಗರ ಹಾಗೂ ಕಬಿನಿ ಡ್ಯಾಂಗಳ ಇಂದಿನ ನೀರಿನ ಮಟ್ಟ ಮತ್ತು ಹರಿವಿನ ವರದಿ ಇಲ್ಲಿದೆ. ಆಲಮಟ್ಟಿಯಲ್ಲಿ 14,873 ಕ್ಯೂಸೆಕ್ ಹಾಗೂ ನಾರಾಯಣಪುರದ ಬಸವಸಾಗರದಿಂದ 13,000 ಕ್ಯೂಸೆಕ್ ಹೊರಹರಿವು ದಾಖಲಾಗಿದ್ದು, ಮೈಸೂರಿನ ಕಬಿನಿ ಜಲಾಶಯದಲ್ಲಿ 10.99 ಟಿಎಂಸಿ ನೀರು ಸಂಗ್ರಹವಾಗಿದೆ. ಪೂರ್ಣ ಜಲಾಶಯ ವರದಿ ಪಡೆಯಿರಿ.
- Bhavana Hegde
- Updated on: Sep 20, 2026
- 11:40 am
ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಆಲಮಟ್ಟಿ ಜಲಾಶಯ ಫುಲ್, ಕೆಆರ್‌ಎಸ್‌ನಲ್ಲಿ ಒಳಹರಿವು ಎಷ್ಟಿದೆ ನೋಡಿ!
ಕರ್ನಾಟಕದ ಜಲಾಶಯಗಳ (ಸೆಪ್ಟೆಂಬರ್ 17) ನೀರಿನ ಮಟ್ಟ: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ. ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಆಲಮಟ್ಟಿ, ಕೆಆರ್‌ಎಸ್, ಕಬಿನಿ ಹಾಗೂ ಬಸವಸಾಗರ ಡ್ಯಾಂಗಳ ಗರಿಷ್ಠ ಸಾಮರ್ಥ್ಯ, ಇಂದಿನ ನೀರಿನ ಸಂಗ್ರಹ, ಒಳಹರಿವು ಮತ್ತು ಹೊರಹರಿವಿನ ಸಂಪೂರ್ಣ ಲೈವ್ ಮಾಹಿತಿಯನ್ನು ಪರಿಶೀಲಿಸಿ.
- Bhavana Hegde
- Updated on: Sep 17, 2026
- 10:41 am
ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಹರಿಸುವ ಆದೇಶ ಮಾರ್ಪಾಡಿಗೆ ಆಗ್ರಹಿಸಿ CWMAಗೆ ಕರ್ನಾಟಕ ಮೇಲ್ಮನವಿ
ತಮಿಳುನಾಡಿಗೆ ದಿನಕ್ಕೆ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಿದ್ದ ಆದೇಶವನ್ನು 3 ಸಾವಿರ ಕ್ಯೂಸೆಕ್‌ಗೆ ಇಳಿಸುವಂತೆ ಆಗ್ರಹಿಸಿ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸಿದೆ. ಕಾವೇರಿ ಕೊಳ್ಳದ 4 ಡ್ಯಾಮ್ಗಳ ಒಳ ಹರಿವಿನಲ್ಲಿ ಭಾರಿ ಇಳಿಕೆ ಕಂಡುಬಂದಿರುವ ಹಿನ್ನೆಲೆ ಹೆಚ್ಚುವರಿ ಹೊರಹರಿವು ಸಾಧ್ಯವಿಲ್ಲ ಎಂದು ಸಿಡಬ್ಲ್ಯಎಂಎಗೆ ಕರ್ನಾಟಕ ತಿಳಿಸಿದೆ.
- Prasanna Hegde
- Updated on: Sep 16, 2026
- 4:50 pm